More

    ನನ್ನ ಜೀವನದಲ್ಲಿ ಈ 30 ದಿನಗಳ ಅನುಭವ ಮರೆಯುವುದಿಲ್ಲ ಎಂದ ಸೌಂದರ್ಯದ ಗಣಿ ಹನಿ ರೋಸ್​!

    ಚೆನ್ನೈ: ಮಲಯಾಳಂ ಬ್ಯೂಟಿ ಹನಿ ರೋಸ್ ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹನಿ ರೋಸ್​ ಬಿಜಿಯಾಗಿದ್ದಾರೆ. ಇದೀಗ ಹನಿ ರೋಸ್​ ಹೊಸ ಸಿನಿಮಾವೊಂದರಲ್ಲಿ ಬಿಜಿಯಾಗಿದ್ದಾರೆ. ಆ ಸಿನಿಮಾದ ಹೆಸರು ರಾಚೆಲ್​.

    ರಾಚೆಲ್​ ಒಂದು ಪ್ಯಾನ್​ ಇಂಡಿಯಾ ಸಿನಿಮಾ. ಫಸ್ಟ್​ ಲುಕ್​ನಿಂದಲೇ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ. ಸೌಂದರ್ಯದ ಗಣಿ ಎಣಿಸಿಕೊಂಡಿರುವ ಹನಿ ರೋಸ್​, ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಈ ಕುರಿತಾಗಿ ಹನಿ ರೋಸ್​ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

    ಕಳೆದ 30 ದಿನಗಳು ನನ್ನ ಜೀವನದಲ್ಲಿ ಮರೆಯಲಾಗದ ಅಧ್ಯಾಯ. ಈ ಪ್ಯಾನ್​ ಇಂಡಿಯಾ ಪ್ರಾಜೆಕ್ಟ್‌ ರಾಚೆಲ್ ಸಿನಿಮಾದಲ್ಲಿ ಹೆಜ್ಜೆ ಹಾಕುವುದು ಒಂದು ಅನನ್ಯ ಅನುಭವವಾಗಿತ್ತು. ನಾಯಕಿಯಾಗಿ ನನ್ನ 18 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಡೈನಾಮಿಕ್ ಮಹಿಳಾ ನಿರ್ದೇಶಕಿಯಾದ ಶ್ರೀಮತಿ ಆನಂದಿನಿ ಬಾಲಾ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಸಂತೋಷವನ್ನು ಹೊಂದಿದ್ದೇನೆ. ಅವರು ರಾಚೆಲ್ ಪಾತ್ರವನ್ನು ಅತ್ಯಂತ ಮೋಹಕವಾಗಿ ಪರಿವರ್ತಿಸಿದರು. ನಿಮ್ಮೊಂದಿಗೆ ಕೆಲಸ ಮಾಡುವುದು ಸಂಪೂರ್ಣ ಸಂತೋಷವಾಗಿದೆ.

    View this post on Instagram

    A post shared by Honey Rose (@honeyroseinsta)

    ಖ್ಯಾತ ನಿರ್ದೇಶಕ ಎಬ್ರಿಡ್ ಶೈನ್ ಸರ್ ಅವರ ಆಲೋಚನೆಗಳು ಮತ್ತು ಮಾರ್ಗದರ್ಶನವಿಲ್ಲದೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ರಾಚೆಲ್ ಅನ್ನು ಜಗತ್ತಿಗೆ ಪ್ರಸ್ತುತಪಡಿಸಿದ್ದಕ್ಕಾಗಿ ಧನ್ಯವಾದಗಳು. ಲೆನ್ಸ್‌ನ ಹಿಂದಿನ ಮ್ಯಾಜಿಕ್ ಅನ್ನು ಸೆರೆಹಿಡಿದಿದ್ದಕ್ಕಾಗಿ ಸ್ವರೂಪ್ ಫಿಲಿಪ್‌ಗೆ ವಿಶೇಷ ಧನ್ಯವಾದಗಳು! ಇಡೀ ಚಿತ್ರತಂಡಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಹನಿ ರೋಸ್​ ನಿರ್ದೇಶಕಿಯ ಜತೆಗೆ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋದೊಂದಿಗೆ ಪೋಸ್ಟ್​ ಮಾಡಿದ್ದಾರೆ.

    ವಿವಾದ ಎಬ್ಬಿಸಿದ ರಾಚೆಲ್​ ಫಸ್ಟ್​ ಲುಕ್​
    ರಾಚೆಲ್​ ಸಿನಿಮಾದ ಫಸ್ಟ್​ ಲುಕ್​ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದೆ. ಏಕೆಂದರೆ, ಫಸ್ಟ್​ ಲುಕ್​ನಲ್ಲಿ ಹನಿ ರೋಸ್​, ಸುತ್ತಲು ನೇತಾಡುತ್ತಿರುವ ದನದ ಮಾಂಸದ ಮಧ್ಯೆ ಕುಳಿತು ಚಾಕು ಹಿಡಿದು ಮಾಂಸವನ್ನು ಕತ್ತರಿಸುತ್ತಿರುವ ದೃಶ್ಯವಿದೆ. ಭಾರತದಲ್ಲಿ ಗೋವಿಗೆ ಮಾತೃ ಸ್ಥಾನ ನೀಡಿರುವುದರಿಂದ ಅನೇಕರು ಹನಿ ರೋಸ್​ ವಿರುದ್ಧ ಕಿಡಿಕಾರಿದ್ದರು. ಗೋವುಗಳನ್ನು ಕತ್ತರಿಸುವುದು ಮತ್ತು ಮಾಂಸ ಮಾರುವುದನ್ನು ಈ ಸಿನಿಮಾ ಉತ್ತೇಜಿಸುತ್ತಿದೆ. ಈ ಸಿನಿಮಾದಲ್ಲಿ ಬ್ಯಾನ್​ ಮಾಡಿ ಎಂಬ ಒತ್ತಾಯ ಕೇಳಿಬಂತು. ಅನೇಕ ಹಿಂದುಪರ ಸಂಘಟನೆಗಳು ಸಿನಿಮಾದ ಫಸ್ಟ್​ ಲುಕ್​​ಗೆ ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಸಿನಿಮಾ ಬಿಡುಗಡೆಯಾದ ಬಳಿಕ ಎಷ್ಟರಮಟ್ಟಿಗೆ ಬಿರುಗಾಳಿ ಎಬ್ಬಿಸುತ್ತದೋ ಕಾದು ನೋಡಬೇಕಿದೆ.

    View this post on Instagram

    A post shared by Honey Rose (@honeyroseinsta)

    ಹನಿ ರೋಸ್​ ವಿಚಾರಕ್ಕೆ ಬಂದರೆ, ಮಲಯಾಳಂ ನಟಿ ಹನಿ ರೋಸ್ ಅವರು 2005 ರಲ್ಲಿ 14 ನೇ ವಯಸ್ಸಿನಲ್ಲಿ ಬಾಯ್‌ಫ್ರೆಂಡ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸೌಂಡ್ ಆಫ್ ಬೂಟ್ (2008), ಸಿಂಗಂ ಪುಲಿ (2011), ಉಪ್ಲುಕಂದಮ್ ಬ್ರದರ್ಸ್ ಬ್ಯಾಕ್ ಇನ್ ಆಕ್ಷನ್ (2011), ಅಜಂತಾ (2012), ಹೋಟೆಲ್ ಕ್ಯಾಲಿಫೋರ್ನಿಯಾ (2013), ರಿಂಗ್ ಮಾಸ್ಟರ್ (2014), ಕುಂಬಾಶರಂ (2015), ಚಾಲಕಿಕಾರನ್ ಸಂಗಾತಿ (2018) ) , ಇಟ್ಟಿಮನಿ: ಮೇಡ್ ಇನ್ ಚೀನಾ (2019), ಬಿಗ್ ಬ್ರದರ್ (2020) ಹಾಗೂ ತೆಲುಗಿನ ವೀರಸಿಂಹ ರೆಡ್ಡಿ (2023) ಸಿನಿಮಾಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

    ಆರಂಭದಲ್ಲೇ ವಿವಾದದ ಸುಳಿಯಲ್ಲಿ ಸಿಲುಕಿದ ಹನಿ ರೋಸ್​ ನಟನೆಯ ಮೊದಲ ಪ್ಯಾನ್​ ಇಂಡಿಯಾ ಸಿನಿಮಾ

    ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

    ಸೌಂದರ್ಯದ ಗಣಿ ಹನಿ ರೋಸ್​ಗೆ ಸಿನಿಮಾ ಅವಕಾಶಗಳು ಕಡಿಮೆ ಏಕೆ? ಇಲ್ಲಿದೆ ಅಚ್ಚರಿಯ ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts