More

    ಪ್ರವಾಸದ ಫೋಟೋಗಳನ್ನು ಶೇರ್​ ಮಾಡಿ ತಿಂಗಳಿಗೆ 17 ಲಕ್ಷ ರೂ. ಸಂಪಾದಿಸುವ ಯುವತಿ! ಇದರ ಹಿಂದಿದೆ ಶಾಕಿಂಗ್​ ಸತ್ಯ

    ನವದೆಹಲಿ: ಇಂದು ತಂತ್ರಜ್ಞಾನವು ಕ್ಷಣ ಕ್ಷಣಕ್ಕೂ ಬೆಳೆಯುತ್ತಿದೆ ಮತ್ತು ಪ್ರಪಂಚದಾದ್ಯಂತ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಅದರಲ್ಲೂ ತನ್ನ ವೈಶಿಷ್ಟ್ಯದಿಂದಲೇ ಕೃತಕ ಬುದ್ಧಿಮತ್ತೆ (ಎಐ) ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ. ಮನುಷ್ಯರಂತೆ ಯೋಚಿಸಿ, ಕೆಲಸ ಮಾಡುವ ಬುದ್ಧಿವಂತ ಸಾಧನವಾಗಿದ್ದು, ಎಲ್ಲೆಡೆ ಎಐ ಇಂದು ಆವರಿಸಿಬಿಟ್ಟಿದೆ.

    ತಾಜಾ ಸಂಗತಿ ಏನೆಂದರೆ, ಲಿಲ್ಲಿ ರೇನ್ ಎಂಬ ಮಾಡೆಲ್ ತುಂಬಾ ಪ್ರಸಿದ್ಧಿ ಪಡೆದಿದ್ದಾಳೆ. ಮಾಡೆಲ್​ಗೂ ಎಐಗೂ ಸಂಬಂಧವೇನು ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ಸಂಬಂಧ ಇದೆ. ಅದು ಏನು ಅಂತಾ ಮುಂದೆ ಗೊತ್ತಾಗಲಿದೆ. ಈ ಲಿಲ್ಲಿ ಓರ್ವ ಟ್ರಾವೆಲ್​ ಇನ್ಫ್ಲುಯೆನ್ಸರ್​. ಯಾವಾಗಲೂ ತನ್ನ ಪ್ರಯಾಣದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ, ಪ್ರತಿ ತಿಂಗಳಿಗೆ 20,000 ಡಾಲರ್​ (ಸುಮಾರು 17 ಲಕ್ಷ ರೂ.) ಗಳಿಸುತ್ತಾಳೆ. ಆದರೆ, ಇದರ ಹಿಂದಿರುವ ಸತ್ಯ ತಿಳಿದರೆ, ನಿಮ್ಮಿಂದ ಅರಗಿಸಿಕೊಳ್ಳಲಾಗದು. ಏನದು ಸತ್ಯ ಅಂದರೆ ಈ ಲಿಲ್ಲಿ ನಿಜವಲ್ಲ!

    ಲಿಲ್ಲಿ, ವಿವಿಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್ಸ್​ ಹೊಂದಿದ್ದಾರೆ. ಈ ಲಿಲ್ಲಿ ನಿಜವಲ್ಲ ಎಂದು ನಾವು ಹೇಳಿದ್ದು ಏಕೆ ಗೊತ್ತಾ? ಈಕೆ ನಮ್ಮ-ನಿಮ್ಮಂತೆ ಉಸಿರಾಡುವ ಲಿಲ್ಲಿ ಅಲ್ಲ. ಎಐ ಟೆಕ್ನಾಲಜಿಯಿಂದ ರೂಪುಗೊಂಡು ಲಿಲ್ಲಿ ಇವಳು. ಇವಳನ್ನು ವರ್ಚುವಲ್​ ಮಾಡೆಲ್​ ಎಂದು ಕರೆಯಲಾಗುತ್ತದೆ.

    ಅನೇಕ ಮಂದಿ ಈಕೆಯನ್ನು ನಿಜವೆಂದು ತಿಳಿದು, ಆಕೆಯ ಸೌಂದರ್ಯಕ್ಕೆ ಮಾರುಹೋಗಿ ಫಾಲೋ ಮಾಡುತ್ತಿದ್ದಾರೆ. ಲಿಲ್ಲಿ ಸಾಮಾನ್ಯವಾಗಿ ತನ್ನ ಚಿತ್ರಗಳನ್ನು Fanvue ಹೆಸರಿನ ಸಾಮಾಜಿಕ ವೇದಿಕೆಯಲ್ಲಿ ಅಪ್ಲೋಡ್ ಮಾಡುತ್ತಾರೆ. ಪ್ರಪಂಚದಾದ್ಯಂತ ಗಮನ ಸೆಳೆಯುವ ಸ್ಥಳಗಳಿಗೆ ಪ್ರಯಾಣಿಸುವ ಆಕರ್ಷಕ ಯುವತಿಯಾಗಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾಳೆ.

    ಈ ಲಿಲ್ಲಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯ ಎಐ ಮಾಡೆಲ್ ಅಲ್ಲ, ಲೆಕ್ಸಿ ಲವ್ ಹೆಸರಿನ ಎಐ ಮಾಡೆಲ್ ಕೂಡ ಇದಾರೆ. ಈಕೆಯನ್ನು ಪರಿಪೂರ್ಣ ಗೆಳತಿ ಎಂದು ಕರೆಯಲ್ಪಟ್ಟಿದ್ದು, ತಿಂಗಳಿಗೆ 30,000 ಡಾಲರ್​ (ರೂ. 35 ಲಕ್ಷ) ಗಳಿಸುತ್ತಾಳೆ. ಈ ಲೆಕ್ಸಿ ಲವ್ , ಏಕಾಂಗಿ ಜನರಿಗೆ ರೋಮ್ಯಾಂಟಿಕ್ ಜೋಡಿಯಾಗಿ ಸಾಥ್​ ನೀಡುತ್ತಾಳೆ.

    ಎಐ ಎಂದರೇನು?

    ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಂಪ್ಯೂಟರ್ ವಿಜ್ಞಾನದ ಶಾಖೆಯಾಗಿದೆ. ಮನುಷ್ಯರಂತೆ ಯೋಚಿಸಿ, ಕೆಲಸ ಮಾಡುವ ಬುದ್ಧಿವಂತ ಯಂತ್ರಗಳ ಅಭಿವೃದ್ಧಿಗೆ ಇದು ಒತ್ತು ನೀಡುತ್ತದೆ. ಚೆಸ್ ಆಡುವ ಕಂಪ್ಯೂಟರ್​ಗಳು, ಸ್ವಯಂಚಾಲಿತ ಕಾರ್​ಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಸಾರಿಗೆ, ಉತ್ಪಾದನೆ, ಹಣಕಾಸು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಸಲಾಗುತ್ತಿದೆ. ಯಾಂತ್ರೀಕರಣ, ಚಾಣಾಕ್ಷತನದ ನಿರ್ಧಾರ, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ, ಪುನರಾವರ್ತಿತ ಕೆಲಸದ ಸುಲಭ ನಿರ್ವಹಣೆ ಮುಂತಾದವುಗಳು ಎಐನ ಪ್ರಯೋಜನಗಳಾಗಿವೆ. ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕ್ ಕಾರ್ತಿ ಅವರನ್ನು ‘ಕೃತಕ ಬುದ್ಧಿಮತ್ತೆಯ ಜನಕ’ ಎಂದು ಗುರುತಿಸುತ್ತಾರೆ. (ಏಜೆನ್ಸೀಸ್​)

    ಲೈಂಗಿಕ ಚರ್ಚೆಗಾಗಿ ಎಐ ವರ್ಷನ್​ ಬಿಡುಗಡೆ: ತಿಂಗಳಿಗೆ 48 ಕೋಟಿ ರೂ. ಸಂಪಾದಿಸುವ ನಿರೀಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts