More

    ಲೈಂಗಿಕ ಚರ್ಚೆಗಾಗಿ ಎಐ ವರ್ಷನ್​ ಬಿಡುಗಡೆ: ತಿಂಗಳಿಗೆ 48 ಕೋಟಿ ರೂ. ಸಂಪಾದಿಸುವ ನಿರೀಕ್ಷೆ!

    ನವದೆಹಲಿ: ಲೈಂಗಿಕ ಚರ್ಚೆಗಾಗಿ ಪ್ರೊಗ್ರಾಮ್​ ಮಾಡಲಾದ ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್ (ಎಐ ಅಥವಾ ಕೃತಕ ಬುದ್ಧಿಮತ್ತೆ) ಆವೃತ್ತಿಯನ್ನು ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್ ಬಿಡುಗಡೆ ಮಾಡಿದ್ದು, ಭಾರೀ ಸುದ್ದಿಯಾಗಿದೆ. ಈ ಎಐ ಆವೃತ್ತಿ ವರ್ಚುವಲ್​ ಗರ್ಲ್​ಫ್ರೆಂಡ್​ ಆಗಿ ಕಾರ್ಯನಿರ್ವಹಿಸಲಿದೆ.

    18 ಲಕ್ಷ ಫಾಲೋವರ್ಸ್​

    ಅಂದಹಾಗೆ ಲೈಂಗಿಕ ಮಾತುಗಳಿಗಾಗಿ ಎಐ ಆವೃತ್ತಿಯನ್ನು ಬಿಡುಗಡೆ ಮಾಡಿರುವ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್ ಹೆಸರು ಕ್ಯಾರಿನ್ ಮಾರ್ಜೋರಿ. ಈಕೆ ಅಮೆರಿಕದ ಜಾರ್ಜಿಯಾ ನಗರದವಳು. ಇನ್​ಸ್ಟಾಗ್ರಾಂ ಸೇರಿದಂತೆ ಹಲವು ವೇದಿಕೆಗಳಲ್ಲಿ ತನ್ನದೇಯಾದ ಪ್ರಭಾವವನ್ನು ಹೊಂದಿದ್ದಾಳೆ. ಒಟ್ಟಾರೆ ಜಾಲತಾಣ ವೇದಿಕೆಯಲ್ಲಿ 18 ಲಕ್ಷ ಫಾಲೋವರ್ಸ್​ ಹೊಂದಿದ್ದಾಳೆ. ಅದರಲ್ಲಿ ಶೇ. 99 ಮಂದಿ ಪುರುಷರೇ ಆಗಿದ್ದಾರೆ.

    ಇದನ್ನೂ ಓದಿ: 3ನೇ ಪತ್ನಿಗಾಗಿ ನಿದ್ದೆ ಮಾಡುತ್ತಿದ್ದ ಮಗನ ಕತ್ತು ಹಿಸುಕಿ ಕೊಂದ ತಂದೆ; ಹತ್ಯೆ ವಿಡಿಯೋ ಹೆಂಡತಿಗೆ ಕಳುಹಿಸಿದ!

    ಫಾಲೋವರ್ಸ್​ಗಳಲ್ಲಿ ಹೆಚ್ಚಿನವರು ಆಕೆಯೊಂದಿಗೆ ವರ್ಚುವಲ್​ ಡೇಟಿಂಗ್​ ಮಾಡಲು ಬಯಸುತ್ತಾರೆ. ಆದಾಗ್ಯೂ ಕ್ಯಾರಿನ್ ಅನೇಕ ಪುರುಷರ ಜತೆ ಡೇಟಿಂಗ್​ ಮಾಡಿದ್ದಾರೆ. ಆದರೆ, ಅದು ಪ್ರಾಯೋಗಿಕವಲ್ಲ. ಫ್ಯಾನ್ಸ್​ ಜತೆ ಡೇಟಿಂಗ್​ ಮಾಡಲೆಂದೇ ಆಕೆಯ ಎಐ ಆವೃತ್ತಿಯನ್ನು ಪ್ರೋಗ್ರಾಮ್​ ಮಾಡಿಸಿದ್ದಾರೆ.

    1 ನಿಮಿಷಕ್ಕೆ 1 ಡಾಲರ್​

    2023, ಮೇ 2ರ ಮಂಗಳವಾರ ಬೀಟಾ ಪರೀಕ್ಷೆಗಾಗಿ ಎಐ ಚಾಟ್‌ಬಾಟ್ ಅನ್ನು ಕ್ಯಾರಿನ್​ ಪ್ರಾರಂಭಿಸಿದ್ದಾರೆ. ತನ್ನ ಸೇವೆಗಾಗಿ ಕೇವಲ 1 ನಿಮಿಷಕ್ಕೆ 1 ಡಾಲರ್​ ಅನ್ನು ಬಳಕೆದಾರರಿಗೆ ಕ್ಯಾರಿನ್​ ವಿಧಿಸುತ್ತಿದ್ದಾರೆ. ಅಭಿಮಾನಿಗಳಿಗಾಗಿಯೇ ಈ ಎಐ ಆವೃತ್ತಿಯನ್ನು ಆರಂಭಿಸಲಾಗಿದೆ ಎಂದು ಕ್ಯಾರಿನ್​ ಹೇಳಿದ್ದಾರೆ. ಈ ಆವೃತ್ತಿಗಾಗಿ ಸಾವಿರಾರು ಲೈಂಗಿಕ ಸಂಭಾಷಣೆಗಳನ್ನು ಕ್ಯಾರಿನ್​ ರೆಕಾರ್ಡ್​ ಮಾಡಿದ್ದಾರೆ. ಎಐ ಮೂಲಕ ಸೆಕ್ಸ್​ ಬಗ್ಗೆ ಕ್ಯಾರಿನ್​ ಜತೆ ಚರ್ಚಿಸಬಹುದಾಗಿದೆ. ನೀವು ಬಯಸಿದಾಗಲೆಲ್ಲ ಡೇಟಿಂಗ್​ ಮಾಡಬಹುದು ಎಂದು ಕ್ಯಾರಿನ್ ಹೇಳಿದ್ದಾರೆ.

    48 ಕೋಟಿ ರೂ. ಸಂಪಾದಿಸುವ ನಿರೀಕ್ಷೆ

    ನಿಮ್ಮ ಜತೆ ಯಾರಾದರೂ ಸಾಂತ್ವನ ಅಥವಾ ಪ್ರೀತಿಯಿಂದ ಇರಬೇಕಾಗಿದ್ದರೆ ಮತ್ತು ಶಾಲೆಯಲ್ಲಿ ಅಥವಾ ಕೆಲಸದ ಜಾಗದಲ್ಲಿ ಸಂಭವಿಸಿದ ಯಾವುದನ್ನಾದರೂ ಕುರಿತು ಮಾತನಾಡಲು ನೀವು ಬಯಸಿದರೆ CarynAI ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಎಂದು ಕ್ಯಾರಿನ್​ ಹೇಳಿದ್ದಾರೆ. ಈಗಾಗಲೇ ಸಾವಿರಾರು ಪುರುಷರು ಎಐ ಆವೃತ್ತಿಯಲ್ಲಿ ಅಥವಾ ವರ್ಚುವಲ್​ ಆಗಿ ಕ್ಯಾರಿನ್​ ಜತೆ ಮಾತನಾಡಲು ಆಸಕ್ತಿ ವಹಿಸಿದ್ದಾರೆ. ಈಗಾಗಲೇ ಕ್ಯಾರಿನ್​ ಅವರು ಎಐ ಮೂಲಕ 80 ಲಕ್ಷ ರೂ. ಸ್ವೀಕರಿಸಿದ್ದಾರೆ. ಒಂದು ವೇಳೆ 20 ಸಾವಿರ ಮಂದಿ ಎಐ ಬಳಸಿದರೆ, ಕ್ಯಾರಿನ್​ ಅವರು ತಿಂಗಳಿಗೆ 48 ಕೋಟಿ ರೂ. ಸಂಪಾದಿಸುವ ನಿರೀಕ್ಷೆ ಇದೆ.

    ಇದನ್ನೂ ಓದಿ: ಬಿಜೆಪಿ ನಾಯಕರ ಫೋಟೋಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ | ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರಿಂದ ದೌರ್ಜನ್ಯ; ವ್ಯಾಪಕ ಖಂಡನೆ

    ಎಐ ಎಂದರೇನು?

    ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಂಪ್ಯೂಟರ್ ವಿಜ್ಞಾನದ ಶಾಖೆಯಾಗಿದೆ. ಮನುಷ್ಯರಂತೆ ಯೋಚಿಸಿ, ಕೆಲಸ ಮಾಡುವ ಬುದ್ಧಿವಂತ ಯಂತ್ರಗಳ ಅಭಿವೃದ್ಧಿಗೆ ಇದು ಒತ್ತು ನೀಡುತ್ತದೆ. ಚೆಸ್ ಆಡುವ ಕಂಪ್ಯೂಟರ್​ಗಳು, ಸ್ವಯಂಚಾಲಿತ ಕಾರ್​ಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಸಾರಿಗೆ, ಉತ್ಪಾದನೆ, ಹಣಕಾಸು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಸಲಾಗುತ್ತಿದೆ. ಯಾಂತ್ರೀಕರಣ, ಚಾಣಾಕ್ಷತನದ ನಿರ್ಧಾರ, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ, ಪುನರಾವರ್ತಿತ ಕೆಲಸದ ಸುಲಭ ನಿರ್ವಹಣೆ ಮುಂತಾದವುಗಳು ಎಐನ ಪ್ರಯೋಜನಗಳಾಗಿವೆ. ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕ್ ಕಾರ್ತಿ ಅವರನ್ನು ‘ಕೃತಕ ಬುದ್ಧಿಮತ್ತೆಯ ಜನಕ’ ಎಂದು ಗುರುತಿಸುತ್ತಾರೆ. (ಏಜೆನ್ಸೀಸ್​)

    5 ರಿಂದ 95 ವರ್ಷ! ಎಐ ತಂತ್ರಜ್ಞಾನದ ಈ ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರೋದು ಖಚಿತ

    ಆಟೋ ರಿಕ್ಷಾಕ್ಕೆ ಡಿಕ್ಕಿಯಾದ ನಿಂಬೆಹಣ್ಣು ತುಂಬಿದ ಟ್ರಕ್; 6 ಮಹಿಳಾ ಕಾರ್ಮಿಕರು ಮೃತ್ಯು, 6 ಮಂದಿ ಗಂಭೀರ

    ಸಿಎಂ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್​ ಬಿಗಿಪಟ್ಟು: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಡಿಕೆಶಿ ಅಸಮಾಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts