More

    ಮುಟ್ಟಿನ ದೋಷ ಮತ್ತು ಬೊಜ್ಜು ನಿವಾರಣೆಗೆ ಹೇಳಿಮಾಡಿಸಿದ ಆಸನವಿದು!

    ರಾಗಿ ಬೀಸುವ ಭಂಗಿಯನ್ನು ಅನುಕರಿಸುವಂತಹ ಆಸನವಾದ ಜಾನು ಶೀರ್ಷಾಸನವು, ಮಹಿಳೆಯರ ಮುಟ್ಟು ದೋಷ ನಿಯಂತ್ರಣಕ್ಕೆ ಮತ್ತು ಬೊಜ್ಜು ಕರಗಿಸುವುದಕ್ಕೆ ಬಹಳ ಉಪಯುಕ್ತವಾದ ಯೋಗಾಸನ. ಇದು ಮಧುಮೇಹ ಮತ್ತು ರಕ್ತದೊತ್ತಡದ ಸಮಸ್ಯೆ ಇರುವವರಿಗೂ ಉಪಕಾರಿ.

    ಜಾನು ಶೀರ್ಷಾಸನದ ಅಭ್ಯಾಸದಿಂದ ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವುದು ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹ, ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ, ಜೀರ್ಣಶಕ್ತಿ ಒದಗಿ ಬರುತ್ತದೆ. ರಕ್ತ ಶುದ್ಧಿಯಾಗಲು ಸಹಕಾರಿ ಹಾಗೂ ಮೂತ್ರಜನಕಾಂಗ ಒಳ್ಳೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ತೀರಾ ಸೊಂಟ ನೋವು ಇರುವವರು ಈ ಆಸನವನ್ನು ಅಭ್ಯಾಸ ಮಾಡಬಾರದು.

    ಇದನ್ನೂ ಓದಿ: ದೇಹಸೌಂದರ್ಯ ಹೆಚ್ಚಿಸಿ ಮನಸ್ಸಿಗೆ ಏಕಾಗ್ರತೆ ನೀಡುತ್ತೆ, ಈ ಸುಲಭ ಯೋಗಾಸನ!

    ಮಾಡುವ ವಿಧಾನ : ಎರಡೂ ಕಾಲುಗಳನ್ನು ಚಾಚಿ ಕೂರಬೇಕು. ಬಲಗಾಲನ್ನು ನಿಧಾನವಾಗಿ ಮಡಿಸಿ ಎಡತೊಡೆಯ ಮೂಲಕ್ಕೆ ಸೇರಿಸಬೇಕು. ಉಸಿರು ತೆಗೆದುಕೊಳ್ಳುತ್ತಾ ಎರಡೂ ಕೈಗಳನ್ನೂ ನೇರಮಾಡಿ. ಉಸಿರನ್ನು ಬಿಡುತ್ತಾ ನಿಧಾನವಾಗಿ ಮುಂದಕ್ಕೆ ಬಾಗಬೇಕು. ಕೈಬೆರಳಿಂದ ಕಾಲಿನ ಬೆರಳುಗಳನ್ನು ಹಿಡಿದು ಮೊಣಕೈಯನ್ನು ನೆಲಕ್ಕೆ ತಾಗಿಸಿ, ಹಣೆಯನ್ನು ಮಂಡಿಯ ಮುಂದೆ ಮೃದುವಾಗಿ ಸ್ಪರ್ಶಿಸಿ, ಸಹಜ ಉಸಿರಾಟ ನಡೆಸಬೇಕು. ಆಮೇಲೆ ಉಸಿರನ್ನು ತೆಗೆದುಕೊಳ್ಳುತ್ತಾ ಕೈಗಳನ್ನು ಮೇಲಕ್ಕೆತ್ತಿ ಸಹಜ ಸ್ಥಿತಿಗೆ ಬಂದು ವಿಶ್ರಾಂತಿ ಮಾಡಬೇಕು. ಇದೇ ವಿಧಾನವನ್ನು ಅನುಸರಿಸಿ, ಇನ್ನೊಂದು ಬದಿಗೆ ಎಡಗಾಲನ್ನು ಮಡಿಸಿ ಆಸನವನ್ನು ಮಾಡಬೇಕು.

    ಜೀರ್ಣಶಕ್ತಿ ಹೆಚ್ಚಿಸಿ ಉಸಿರಾಟ ಸುಗಮವಾಗಿಸುತ್ತೆ, ವಜ್ರಾಸನ!

    ಕಾರಿನಲ್ಲಿ ಹಣವಿಟ್ಟು ಚಾಲಕನಿಗೆ ಹೇಳಿ ಹೋದರು… ವಾಪಸ್​ ಬಂದಾಗ ಕಾದಿತ್ತು ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts