More

    ಏಕಾಗ್ರತೆ ಹೆಚ್ಚಿಸಲು ಬಲು ಉಪಯುಕ್ತ ಈ ಯೋಗಾಸನ!

    ದೇಹದ ಸ್ನಾಯುಗಳು ಮತ್ತು ಮೂಳೆಗಳು ಬಲಗೊಳ್ಳಲು ಉಪಯುಕ್ತವಾದ ಆಸನವೆಂದರೆ ವಾತಾಯನಾಸನ. ಸಂಸ್ಕೃತದಲ್ಲಿ ವಾತಾಯನ ಎಂದರೆ ಕುದುರೆ. ಇದಕ್ಕೆ ಹಾರ್ಸ್​ ಪೋಸ್​ ಎಂಬ ಹೆಸರೂ ಇದೆ. ಈ ಆಸನವು ಸಮತೋಲನ ಮತ್ತು ಏಕಾಗ್ರತೆಯನ್ನು ಸಾಧಿಸುವ ಭಂಗಿಯಾಗಿದೆ.

    ಪ್ರಯೋಜನಗಳು: ಈ ಆಸನ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ದೇಹದ ಮೂಳೆಗಳು ಬಲಗೊಳ್ಳುತ್ತವೆ. ದೇಹದ ನಮ್ಯತೆಯನ್ನು ಹೆಚ್ಚಿಸುತ್ತದೆ.

    ಇದನ್ನೂ ಓದಿ: ಶಾಲೆ-ಕಾಲೇಜು ಆರಂಭ: ಶಿಕ್ಷಕರಿಗೆ ಲಸಿಕೆ, ಮಕ್ಕಳಿಗೆ ಮಾಸ್ಕ್​

    ಅಭ್ಯಾಸ ಕ್ರಮ: ಕಾರ್ಪೆಟ್​ ಮೇಲೆ ಕಾಲು ಚಾಚಿ ದಂಡಾಸನದಲ್ಲಿ ಕೂರುವುದು. ಆರಂಭದಲ್ಲಿ ಅರ್ಧ ಪದ್ಮಾಸನ ಮಾಡಬೇಕು. ಬಲಮಂಡಿಯನ್ನು ನೆಲದ ಮೇಲೆ ಊರಿ, ಎಡಗಾಲನ್ನು ಅದರ ಹತ್ತಿರವಿಡುವುದು. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಕೈಗಳನ್ನು ತಿರುಚಿ ವಿರುದ್ಧ ದಿಕ್ಕಿನ ನಮಸ್ಕಾರ ಮಾಡಿ, ಮೂಗಿನ ಹತ್ತಿರ (ಶಿರಸ್ಸಿನ ಮಧ್ಯದಲ್ಲಿ) ಮೃದುವಾಗಿ ಸ್ಪರ್ಶಿಸಬೇಕು. ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರು ಬಿಡುತ್ತಾ ವಾಪಸ್​ ದಂಡಾಸನಕ್ಕೆ ಬಂದು ವಿಶ್ರಮಿಸಬೇಕು. ಇನ್ನೊಂದು ಪಾರ್ಶ್ವಕ್ಕೂ ಇದೇ ರೀತಿ ಅಭ್ಯಾಸ ಮಾಡಬೇಕು.

    ಮಂಡಿಯ ಗಾಯ ಅಥವಾ ಕಾಲಿನ ಶಸ್ತ್ರ ಚಿಕಿತ್ಸೆ ಆಗಿರುವವರು ಈ ಆಸನವನ್ನು ಮಾಡಬಾರದು. ಇದು ಸ್ವಲ್ಪ ಕಷ್ಟದ ಭಂಗಿಯಾಗಿರುವುದರಿಂದ ಗುರುಮುಖೇನ ಕಲಿತು ಅಭ್ಯಾಸ ಮಾಡುವುದು ಒಳಿತು.

    9, 10ನೇ ತರಗತಿ: ಅರ್ಧ ದಿನ ಶಾಲೆ ಶುರು! ಹಾಜರಾಗಲು ಅನುಮತಿ ಪತ್ರ ಕಡ್ಡಾಯ; ವೇಳಾಪಟ್ಟಿ, ವಿವರ ಇಲ್ಲಿದೆ

    ಒಲಿಂಪಿಕ್ಸ್​ ಪದಕ ಗೆದ್ದ ಸಿಂಧುಗೆ ಐಸ್ ​ಕ್ರೀಂ ಕೊಡಿಸಿದ ಪ್ರಧಾನಿ ಮೋದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts