More

    ಕಾಲಿನ ನರಗಳ ಸೆಳೆತ ಮತ್ತು ಬೊಜ್ಜು ನಿವಾರಕ, ಈ ಆಸನ! ಋತುಚಕ್ರದ ದೋಷವನ್ನೂ ಪರಿಹರಿಸುತ್ತದೆ!

    ಕಾಲಿನ ನರಗಳ ಸೆಳೆತ ನಿಯಂತ್ರಣಕ್ಕೆ ಉಪಯುಕ್ತವಾದ ಆಸನವೆಂದರೆ ಪ್ರಸಾರಿತ ಪಾದಾಂಗುಷ್ಠಾಸನ. ಈ ಆಸನದಲ್ಲಿ ನಿಂತುಕೊಂಡು ಕಾಲುಗಳನ್ನು ವಿಸ್ತರಿಸಿ, ದೇಹವನ್ನು ಮುಂದಕ್ಕೆ ಬಾಗಿಸಿ ಗಲ್ಲವನ್ನು ಪಾದದ ಅಂಗುಷ್ಠಕ್ಕೆ ಸ್ಪರ್ಶಿಸಲಾಗುತ್ತದೆ. ಮಹಿಳೆಯರ ಗರ್ಭಾಶಯದ ಆರೋಗ್ಯಕ್ಕೆ ಕೂಡ ಇದು ಬಹು ಉತ್ತಮವಾದ ವ್ಯಾಯಾಮವಾಗಿದೆ.

    ಉಪಯೋಗಗಳು : ಪ್ರಸಾರಿತ ಪಾದಾಂಗುಷ್ಠಾಸನದ ಅಭ್ಯಾಸದಿಂದ ಕಾಲಿನ ನರಗಳ ಸೆಳೆತ, ವಾತ ಇತ್ಯಾದಿಗಳು ನಿಯಂತ್ರಣವಾಗುತ್ತವೆ. ಸೊಂಟದ, ಹೊಟ್ಟೆಯ ಬೊಜ್ಜು ಕರಗಲು ಸಹಾಯವಾಗುತ್ತದೆ. ಬಾಗುವಾಗ ಕಿಬ್ಬೊಟ್ಟೆ ಹಾಗೂ ಗರ್ಭಾಶಯದ ಭಾಗಕ್ಕೆ ಉತ್ತಮ ವ್ಯಾಯಾಮ ದೊರಕಿ ಋತುಚಕ್ರದ ದೋಷ ನಿಯಂತ್ರಣವಾಗುತ್ತದೆ. ಶಿರಸ್ಸಿಗೆ ರಕ್ತ ಪರಿಚಲನೆ ಹೆಚ್ಚಾಗಿ, ನರಮಂಡಲ ಸಚೇತನಗೊಳ್ಳುತ್ತದೆ.

    ಇದನ್ನೂ ಓದಿ: ಡಯಾಬಿಟೀಸ್​ ನಿಯಂತ್ರಣಕ್ಕೆ ಸಹಕಾರಿ ಈ ಯೋಗಾಸನ

    ಅಭ್ಯಾಸ ಕ್ರಮ : ಪ್ರಥಮವಾಗಿ ತಾಡಾಸನದಲ್ಲಿ ನಿಲ್ಲಿ. ಅನಂತರ ಕಾಲುಗಳನ್ನು 3 ರಿಂದ 4 ಅಡಿಗಳಷ್ಟು ಅಂತರದಲ್ಲಿ ಅಗಲಿಸಿ ನಿಲ್ಲಬೇಕು. ಬೆನ್ನ ಹಿಂದೆ ಕೈಗಳನ್ನು ಹಿಡಿದಿರಬೇಕು. ಆಮೇಲೆ ಬಲಗಾಲನ್ನು ಬಲಬದಿಗೆ 90 ಡಿಗ್ರಿಗಳಷ್ಟು ತಿರುಗಿಸಿ, ಎಡಗಾಲನ್ನು ಸ್ವಲ್ಪ ಒಳಗಡೆ ಸರಿಸಿ ಉಸಿರನ್ನು ಬಿಡುತ್ತಾ ನಿಧಾನವಾಗಿ ಬಲಮಂಡಿಯನ್ನು ಬಾಗಿಸಬೇಕು. ಎಡಗಾಲನ್ನು ನೇರವಾಗಿಸಿ, ಮುಂದಕ್ಕೆ ಬಾಗಿ ಗಲ್ಲವನ್ನು ಬಲಗಾಲ ಪಾದದ ಅಂಗುಷ್ಠಕ್ಕೆ ಸ್ಪರ್ಶಿಸಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಾಮಾನ್ಯ ಉಸಿರಾಟ ನಡೆಸಬೇಕು. ಅನಂತರ ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಮೇಲಕ್ಕೆ ಬರಬೇಕು. ಹಾಗೆಯೇ ಇನ್ನೊಂದು ಬದಿಯಲ್ಲಿ ಅಭ್ಯಾಸ ಮಾಡಿ. ಆನಂತರ ವಿಶ್ರಮಿಸಬೇಕು.

    ಆರಂಭದಲ್ಲಿ ಅಭ್ಯಾಸ ಮಾಡುವಾಗ ಸಾಧ್ಯವಾಗುವಷ್ಟೇ ಮುಂದಕ್ಕೆ ಬಾಗಬೇಕು. ಒಮ್ಮೆ ಅಭ್ಯಾಸವಾದರೆ ಎರಡು-ಮೂರು ಬಾರಿ ಮಾಡಬಹುದು. ಆದರೆ, ತುಂಬಾ ಸೊಂಟ ನೋವು ಇದ್ದವರು ಈ ಆಸನ ಮಾಡುವುದು ಸೂಕ್ತವಲ್ಲ.

    ಮಗನ ಅಗಲಿಕೆ ತಾಳಲಾರದೆ, ಅವನ ದಾರಿಯಲ್ಲೇ ನಡೆದ ತಾಯಿ! ಇದು ಮನ ಕಲಕುವ ಘಟನೆ

    ಹೊಟ್ಟೆಯ ಗ್ಯಾಸ್​​ ಸಮಸ್ಯೆ ಪರಿಹರಿಸಲು ‘ಪರಿಪೂರ್ಣ ಪವನಮುಕ್ತಾಸನ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts