More

    ಇದು ಮಹಿಳೆಯರ ಮುಖಭಾವನೆಯನ್ನೇ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡುತ್ತದೆಯಂತೆ!

    ನವದೆಹಲಿ: ಇಲ್ಲಿನ ಸುಮಾರು ಇನ್ನೂರು ಪ್ರದೇಶಗಳಲ್ಲಿ ಇನ್ನುಮುಂದೆ ಓಡಾಡಲಿರುವ ಮಹಿಳೆಯರಿಗೆ ಇದು ವರವೋ ಶಾಪವೋ ಗೊತ್ತಿಲ್ಲ. ಏಕೆಂದರೆ ಇಲ್ಲಿ ಓಡಾಡಲಿರುವ ಮಹಿಳೆಯರ ಮುಖಭಾವನೆ ಹೇಗಿದೆ ಎಂಬುದು ಪೊಲೀಸರಿಗೆ ಗೊತ್ತಾಗಲಿದೆ. ಅದನ್ನು ಅನುಸರಿಸಿ ಅಗತ್ಯ ಬಿದ್ದರೆ ಮುಂದಿನ ಕ್ರಮಗಳನ್ನು ಪೊಲೀಸರು ಕೈಗೊಳ್ಳಲಿದ್ದಾರೆ.

    ಹೌದು.. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಗ್ಗಿಸಲು, ಸಂಕಷ್ಟದಲ್ಲಿರುವ ಮಹಿಳೆಯರಿಗೆ ತಕ್ಷಣ ಸ್ಪಂದಿಸಲು ಇಲ್ಲಿನ ಪೊಲೀಸರು ಇಂಥದ್ದೊಂದು ಕ್ರಮಕ್ಕೆ ಮುಂದಾಗಿದ್ದಾರೆ. ಅಂದರೆ ಅಪರಾಧವನ್ನು ತಡೆಯುವ ಅಥವಾ ನಿಯಂತ್ರಿಸುವ ನಿಟ್ಟಿನಲ್ಲಿ ಇವರು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮೊರೆ ಹೋಗಲು ಮುಂದಾಗಿದ್ದಾರೆ.

    ಇದನ್ನೂ ಓದಿ: ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

    ಅಂದರೆ ಕೃತಕ ಬುದ್ಧಿಮತ್ತೆಯ ಈ ಕ್ಯಾಮೆರಾಗಳನ್ನು ಅಳವಡಿಸಿ, ಅದರಿಂದ ಮಹಿಳೆಯರ ಮುಖಭಾವನೆಯನ್ನು ಗುರುತಿಸಿ, ಅದರ ಮೇರೆಗೆ ಅಗತ್ಯ ಕ್ರಮಕೈಗೊಳ್ಳುವ ಚಿಂತನೆ ಈ ಪೊಲೀಸರದ್ದು. ಅಂದಹಾಗೆ ಈ ಪ್ರಯತ್ನಕ್ಕೆ ಮುಂದಾಗಿರುವುದು ಲಕ್ನೋ ಪೊಲೀಸರು. ಉತ್ತರ ಪ್ರದೇಶದಲ್ಲಿ ಹೆಚ್ಚಾಗಿರುವ ಮಹಿಳಾ ದೌರ್ಜನ್ಯದ ಪ್ರಕರಣಗಳನ್ನು ನಿಯಂತ್ರಿಸಲು ಅವರು ಈ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಉತ್ತರಪ್ರದೇಶ ಸರ್ಕಾರದ ಮಿಷನ್​ ಶಕ್ತಿ ಯೋಜನೆಯಡಿ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದ್ದು, ರಾಜ್ಯದಲ್ಲಿ ಅತಿಹೆಚ್ಚು ಮಹಿಳಾ ದೌರ್ಜನ್ಯ ವರದಿಯಾಗಿರುವ ಹಾಗೂ ಮಹಿಳೆಯರು ಹೆಚ್ಚಾಗಿ ಓಡಾಡುವ ಸುಮಾರು 200 ಪ್ರದೇಶಗಳನ್ನು ಗುರುತಿಸಿದ್ದು, ಅಲ್ಲಿ ಈ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಲಕ್ನೋ ಪೊಲೀಸ್ ಕಮಿಷನರ್​ ಧ್ರುವ ಕುಮಾರ್ ಠಾಕೂರ್ ತಿಳಿಸಿದ್ದಾರೆ.

    ಈ ಕ್ಯಾಮೆರಾಗಳು ಮಹಿಳೆಯರ ಮುಖಭಾವನೆಗಳನ್ನು ಗುರುತಿಸಿ, ಕಂಟ್ರೋಲ್​ ರೂಮ್​ಗೆ ಕಳಿಸಲಿವೆ. ಆತಂಕದ ಭಾವನೆ ಕಂಡುಬಂದರೆ ಪೊಲೀಸರಿಗೆ ಕೂಡಲೇ ಅಲರ್ಟ್ ಬರಲಿದೆ. ಇದರಿಂದ ತೊಂದರೆಗೆ ಒಳಗಾದ ಮಹಿಳೆಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸುವ ಮೊದಲೇ ಪೊಲೀಸರು ಕಾರ್ಯಪ್ರವೃತ್ತರಾಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಇದೇನಾದರೂ ಜಾರಿ ಆಯ್ತು ಅಂದ್ರೆ ನೀವು ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡೋಕೂ ಯೋಚ್ನೆ ಮಾಡ್ತೀರಿ!

    ಆದರೆ ಪೊಲೀಸರ ಈ ಕ್ರಮದ ಬಗ್ಗೆ ಕೆಲವರು ಹೆಚ್ಚಿನ ಸ್ಪಷ್ಟನೆ ಕೋರಿದ್ದು, ಮಹಿಳೆಯರ ಮುಖಭಾವನೆಯ ಚಿತ್ರಣ ಎಲ್ಲ ಪೊಲೀಸರಿಗೂ ಸಿಗಲಿದೆಯೇ ಅಥವಾ ನಿರ್ದಿಷ್ಟ ಪೊಲೀಸರಿಗಷ್ಟೇ ಸಿಗಲಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಮಹಿಳೆಯರ ಖಾಸಗಿತನದ ಬಗ್ಗೆ ಪೊಲೀಸರಿಂದ ಹೆಚ್ಚಿನ ಸ್ಪಷ್ಟನೆ ಅಗತ್ಯ ಎಂದು ಕೆಲವರು ಬೇಡಿಕೆ ಇಟ್ಟಿರುವುದು ಕೂಡ ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಬಹಿರಂಗವಾಗಬೇಕಿವೆ. (ಏಜೆನ್ಸೀಸ್​)

    100 ರೂ. ಮುಖಬೆಲೆಯ ಹಳೇ ನೋಟು ಇನ್ಮುಂದೆ ಚಲಾವಣೆ ಆಗಲ್ಲ! ಸೂಚನೆ ಕೊಟ್ಟ ಆರ್​ಬಿಐ

    ಅಂಗಡಿಯಿಂದ ಬರಲು ತಡವಾದುದಕ್ಕೆ ಮಗನನ್ನು ಬೆಂಕಿಹಚ್ಚಿ ಕೊಂದ ಪಾಪಿ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts