More

    ವೈಡ್ ಬಾಲ್​ಗೆ ತಲೆ ಕೆಳಗಾದ ಅಂಪೈರ್​!; ಅಷ್ಟಕ್ಕೂ ಆಗಿದ್ದೇನು..?

    ಬೆಂಗಳೂರು: ಕ್ರಿಕೆಟ್​ನಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್​ಮನ್​, ಬೌಲರ್​, ಕೀಪರ್ ಅಥವಾ ಫೀಲ್ಡರ್​ ತಮ್ಮ ಅತ್ಯಾಕರ್ಷಕ ಪರ್ಫಾರ್ಮೆನ್ಸ್​ನಿಂದ ಪ್ರೇಕ್ಷಕರನ್ನು ನಿಬ್ಬೆರಗಾಗಿಸುವುದಿದೆ. ಅಂದರೆ, ಒಂದೊಳ್ಳೆಯ ಶಾಟ್​, ಬೌಲಿಂಗ್, ಕೀಪಿಂಗ್ ಅಥವಾ ಅದ್ಭುತವಾಗಿ ಒಂದು ಕ್ಯಾಚ್​ ಮೂಲಕ ಆಟಗಾರರು ನೋಡುಗರಿಗೆ ವ್ಹಾ ಅನಿಸುವಂತೆ ಮಾಡುವುದಿದೆ.

    ಫಾರ್​ ಎ ಚೇಂಜ್.. ಇಲ್ಲಿ ಅಂಥದ್ದೊಂದು ಪರ್ಫಾರ್ಮೆನ್ಸ್​ ಅಂಪೈರ್ ತೋರಿಸಿದ್ದಾರೆ. ಇಲ್ಲಿ ಅಂಪೈರ್​ವೊಬ್ಬರು ವೈಡ್​ಬಾಲ್​ಗೆ ತಲೆಕೆಳಗಾಗಿ ಬಿಟ್ಟಿದ್ದಾರೆ. ಅರ್ಥಾತ್, ಬೌಲರ್ ವೈಡ್​ ಹಾಕಿದ್ದನ್ನು ಈ ಅಂಪೈರ್ ಯಾರೂ ಊಹಿಸಿರದ ರೀತಿಯಲ್ಲಿ ನಿರ್ಣಯ ತೋರಿಸಿದ್ದಾರೆ. ಬೌಲರ್​ ಎಸೆತ ವೈಡ್ ಆದ ತಕ್ಷಣ ಈ ಅಂಪೈರ್ ಎರಡೂ ಕೈಗಳನ್ನೂ ಪಕ್ಕಕ್ಕೆ ಸರಿಸಿ ವೈಡ್ ತೋರಿಸುವ ಬದಲು ಎರಡೂ ಕೈಗಳನ್ನೂ ನೆಲಕ್ಕೆ ಊರಿ, ತಲೆಯನ್ನು ಭೂಮಿಗೆ ತಾಗಿಸಿ ಕಾಲನ್ನು ಮೇಲೆತ್ತಿ ಕೈಗಳ ರೀತಿಯಲ್ಲೇ ಅಗಲಿಸಿ ವೈಡ್ ಎಂದು ತೋರಿಸಿದ್ದಾರೆ.

    ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಅಂಪೈರ್ ಹೀಗೆ ವಿಶಿಷ್ಟವಾಗಿ ವೈಡ್ ತೋರಿದ ದೃಶ್ಯದ ವಿಡಿಯೋ ತುಣುಕನ್ನು ಸಾರಂಗ್ ಭಲೇರಾವ್ ಎನ್ನುವವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆಯಷ್ಟೇ ಹಂಚಿಕೊಂಡಿರುವ ಈ ವಿಡಿಯೋ 24 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದೆ. ಈ ಟ್ವೀಟನ್ನು 9 ಸಾವಿರಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದು, 1200ಕ್ಕೂ ಅಧಿಕ ಮಂದಿ ರಿಟ್ವೀಟ್​ ಮಾಡಿದ್ದಾರೆ.

    ‘ಯೋಗ ಮತ್ತು ಕ್ರಿಕೆಟ್ ಭೇಟಿಯಾದಾಗ..’ ಎಂದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಇದನ್ನು ರಿಟ್ವೀಟ್ ಮಾಡಿಕೊಂಡಿದ್ದರೆ, ಇನ್ನು ಹಲವರು ಇದಕ್ಕೆ ವಿಶೇಷವಾದ ಪ್ರತಿಕ್ರಿಯೆ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸಿದ್ದಾರೆ.

    ಅಂದಹಾಗೆ ಈ ಅಂಪೈರ್ ಹೆಸರು ಡಿಎನ್​ ರಾಕ್​. ನ. 21 ರಂದು ಮಹಾರಾಷ್ಟ್ರದ ಥಾಣೆಯ ಬೊಪ್​ಗಾವ್​ನಲ್ಲಿ ನಡೆದ ಪುರಂದರ ಪ್ರೀಮಿಯರ್ ಲೀಗ್​ನ ಫೈನಲ್​ನಲ್ಲಿ ಈ ದೃಶ್ಯ ಕಂಡು ಬಂದಿದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts