More

    ಈ ಬಾರಿ ಡಂಬಳ ರೊಟ್ಟಿ ಜಾತ್ರೆ ರದ್ದು

    ಡಂಬಳ: ಫೆ. 26ರಿಂದ ನಡೆಯಬೇಕಿದ್ದ ಐತಿಹಾಸಿಕ ಡಂಬಳ ತೋಂಟದಾರ್ಯ ಮಠದ ರೊಟ್ಟಿ ಜಾತ್ರೆಯನ್ನು ಈ ಬಾರಿ ಕರೊನಾ ನಿಮಿತ್ತ ರದ್ದುಗೊಳಿಸಲಾಗಿದೆ ಎಂದು ತೊಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು ತಿಳಿಸಿದ್ದಾರೆ.

    ಡಂಬಳ ತೋಂಟದಾರ್ಯ ಕಲಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ‘ಜನರ ಆರೋಗ್ಯ ರಕ್ಷಣೆ ಮುಖ್ಯ. ವಿವಿಧೆಡೆಯಿಂದ ಭಕ್ತರು ಜಾತ್ರೆಗೆ ಬರುವುದರಿಂದ ಕರೊನಾ ನಿಯಮ ಪಾಲನೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಪ್ರಸಕ್ತ ವರ್ಷದ ರೊಟ್ಟಿ ಜಾತ್ರೆ ರದ್ದುಪಡಿಸಿ ಜಾತ್ರೆಯನ್ನು ಸರಳವಾಗಿ ಆಚರಿಸಲು ನಿಧರಿಸಲಾಗಿದೆ. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ, ಧರ್ಮಸಭೆ ಇರುವುದಿಲ್ಲ. ಭಕ್ತರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

    ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಕರೊನಾ ನಿಯಮಗಳನ್ನು ಅನುಸರಿಸಿ ಫೆ. 26ರಂದು ಮಹಾರಥೋತ್ಸವ, 27ರಂದು ಲಘುರಥೋತ್ಸವನ್ನು ಸರಳವಾಗಿ ಆಚರಿಸಲಾಗುತ್ತದೆ. ಕಳೆದ ವರ್ಷದ ಜಾತ್ರಾ ಕಮಿಟಿ ಅಧ್ಯಕ್ಷ ಗವಿಸಿದ್ದಪ್ಪ ಬಿಸನಳ್ಳಿ, ಉಪಾಧ್ಯಕ್ಷ ಬಸವರಾಜ ಗಂಗಾವತಿ, ಕಾರ್ಯದರ್ಶಿ ಬಸವಂತಪ್ಪ ಪಟ್ಟಣಶೆಟ್ಟರ, ಖಜಾಂಚಿ ರೇವಣಸಿದ್ದಪ್ಪ ಕರಿಗಾರ ಅವರನ್ನೇ ಈ ಸಲದ ಜಾತ್ರೆಗೂ ಮುಂದುವರಿಸಲಾಗಿದೆ ಎಂದರು.

    ಡಂಬಳ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ, ರಾಜಶೇಖರಯ್ಯ ಹಿರೇಮಠ, ವಿ.ಎಸ್. ಯರಾಸಿ, ಮರಿತಮ್ಮಪ್ಪ ಆದಮ್ಮನವರ, ಬಸೀರ್ ಅಹ್ಮದ ತಾಂಬೋಟಿ, ಶಂಕ್ರಪ್ಪ ಗಡಗಿ, ಮರಿಯಪ್ಪ ಸಿದ್ದಣ್ಣವರ, ಅನಿಲ ಪಲ್ಲೇದ, ವಿರೂಪಾಕ್ಷಪ್ಪ ಲಕ್ಕುಂಡಿ, ಚಂದ್ರು ಯಳಮಲಿ, ಈಶಪ್ಪ ಪಟ್ಟಣಶೆಟ್ಟರ, ಮಲ್ಲಪ್ಪ ಮಠದ, ಸಿದ್ದಪ್ಪ ನಂಜಪ್ಪನವರ, ದೇವಪ್ಪ ಗುಂಡಿಕೇರಿ, ಬಸವರಾಜ ಕೊತಂಬ್ರಿ, ಬಾಬುಸಾಬ್ ಸರ್ಕವಾಸ, ಸಿ.ಆರ್. ಹಿರೇಮಠ, ಮಲ್ಲಿಕಾರ್ಜುನ ಪ್ಯಾಟಿ, ಅಶೋಕ ಹಡಪದ, ಷಣ್ಮುಖಪ್ಪ ಪಟ್ಟಣಶೆಟ್ಟರ ಇತರರಿದ್ದರು. ಶಿಕ್ಷಕ ರಮೇಶ ಕೊರ್ಲಹಳ್ಳಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts