More

    ಊಟ ಮಾಡುವಾಗ ಮೊಬೈಲ್​ ಬಳಸಲು ಕಿರಿಕಿರಿಯೇ? ನಿಮಗಾಗಿ ಬಂದಿದೆ ನೋಡಿ ಆಧುನಿಕ ತಟ್ಟೆ!

    ನವದೆಹಲಿ: ಆಧುನಿಕ ಜಗತ್ತಿನಲ್ಲಿ ಮೊಬೈಲ್​ ಫೋನ್​ಗಳು ಮಾನವನ ಜೀವನದ ಭಾಗವಾಗಿವೆ. ಪ್ರತಿನಿತ್ಯ ಸಮಯ ಸಿಕ್ಕಾಗಲೆಲ್ಲಾ ಮೊಬೈಲ್​ ಫೋನ್​ ಹಿಡಿದುಕೊಂಡು ಜಾಲತಾಣದಲ್ಲಿ ಸಿಗವಂತಹ ಮಾಹಿತಿ ಮನರಂಜನೆಯನ್ನು ಸ್ಕ್ರಾಲ್​ ಡೌನ್​ ಮಾಡುತ್ತಿರುತ್ತೇವೆ.

    ಮೊಬೈಲ್​ ಬಳಸುತ್ತಾ ಊಟ ಮಾಡುವಾಗ ಕೆಲವೊಮ್ಮೆ ಮೊಬೈಲ್​ ಕೈಜಾರಿ ತಟ್ಟೆಯೊಳಗಿನ ಸಾಂಬರಿಗೂ ಬಿದ್ದಿದ್ದನ್ನು ನೋಡಿರುತ್ತೇವೆ. ಇದೀಗ ಈ ರೀತಿಯ ಕಿರಿಕಿರಿಗಳು ಮುಂದೆ ಎದುರಾಗದಿರಲು ಆಧುನಿಕ ಉಪಾಯವೊಂದು ಕಣ್ಣ ಮುಂದೆ ಬಂದಿದ್ದು, ವೈರಲ್​ ಕೂಡ ಆಗಿದೆ.

    “ಆಧುನಿಕ ತಟ್ಟೆ” ಎಂಬ ಪರಿಕಲ್ಪನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅನ್ನ, ಸಾಂಬರ್​, ರೊಟ್ಟಿ, ಮೊಸರು ಮುಂತಾದ ಪದಾರ್ಥಗಳನ್ನು ಇಟ್ಟುಕೊಳ್ಳುವಂತೆಯೇ ಮೊಬೈಲ್​ ಇಡಲು ತಟ್ಟೆಯಲ್ಲಿ ಪ್ರತ್ಯೇಕ ಕಂಪಾರ್ಟ್​ಮೆಂಟ್ ನೀಡಲಾಗಿದೆ. ಇದರಿಂದ ಯಾವುದೇ ಅಡ್ಡಿಯಿಲ್ಲದೇ ಮೊಬೈಲ್​ ಬಳಸುತ್ತಾ ಊಟ ಮಾಡಲು ಆಧುನಿಕ ತಟ್ಟೆ ನೆರವಾಗುತ್ತದೆ.

    ವ್ಯಕ್ತಿಯೊಬ್ಬ ಆಧುನಿಕ ತಟ್ಟೆಯಲ್ಲಿ ಮೊಬೈಲ್​ ಇಟ್ಟು ಬ್ರೌಸ್​ ಮಾಡುತ್ತಾ ಆರಾಮವಾಗಿ ಊಟ ಮಾಡುತ್ತಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಫೋಟೋವನ್ನು ಕ್ರಿಕೆಟಿಗ ಹರ್ಭಜನ್​ ಸಿಂಗ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಧುನಿಕ ತಟ್ಟೆಯಲ್ಲಿ ಮೊಬೈಲ್​ಗಾಗಿ ಸ್ಥಳವಿದೆ. ಆರ್ಡರ್​ ಮಾಡಿ ಎಂದಿದ್ದಾರೆ. (ಏಜೆನ್ಸೀಸ್​)

    ಕೊನೆಗೂ ಮದುವೆಯಾದ್ರು ಪೂನಂ ಪಾಂಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts