More

    ಸೂರ್ಯಕುಮಾರ್​ರನ್ನು ಸುಲಭವಾಗಿ ಔಟ್​ ಮಾಡುವುದು ಹೇಗೆ? ಪಾಕ್​ ಮಾಜಿ ಆಟಗಾರ ಕೊಟ್ಟ ಸಲಹೆ ಇದು

    ನವದೆಹಲಿ: ಟಿ20 ವಿಶ್ವಕಪ್ (T20 Worl Cup 2022)​ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್​ ಯಾದವ್ (Suryakumar Yadav)​ ಟೀಮ್​ ಇಂಡಿಯಾ (India)ದ ಸ್ಟಾರ್ ಕ್ರಿಕೆಟಿಗರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಭಾರತ ಸೆಮಿಫೈನಲ್​ ಹಂತಕ್ಕೆ ಪ್ರವೇಶಿಸಲು ಯಾದವ್​ ಕೊಡುಗೆ ಸಹ ಇದೆ.​ ಅದರಲ್ಲೂ ವಿರಾಟ್​ ಕೊಹ್ಲಿ (Virat Kohli) ಪಾತ್ರ ಹಚ್ಚಿದೆ. ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸ್ಕೋರ್​ ಮಾಡಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಯಾದವ್​ 3ನೇ ಸ್ಥಾನದಲ್ಲಿದ್ದಾರೆ.

    ಕ್ರಿಕೆಟ್​ ಗ್ರೌಂಡ್​ನಲ್ಲಿ ಅಬ್ಬರಿಸಿ ಬೊಬ್ಬಿರುವ ಯಾದವ್​, ಟೀಮ್​ ಇಂಡಿಯಾ ಮಿಸ್ಟರ್​ 360 ಡಿಗ್ರಿ ಎನಿಸಿಕೊಂಡಿದ್ದಾರೆ. ಮೈದಾನದಲ್ಲಿ ಎಲ್ಲಾ ಮೂಲೆಗೂ ಯಾದವ್​ ಸರಾಗವಾಗಿ ಚೆಂಡನ್ನು ಬಾರಿಸುತ್ತಾರೆ. ವೈಡ್​ ಬಾಲ್​ಗಳನ್ನು ಬಿಡದೇ ಬೌಂಡರಿಗಟ್ಟುತ್ತಾರೆ. ಎದುರಾಳಿಗಳಿಗೆ ಸಿಂಹಸ್ವಪ್ನದಂತೆ ಕಾಡುವ ಯಾದವ್​ ಅವರನ್ನು ಯಾವ ರೀತಿ ಔಟ್​ ಮಾಡಬೇಕೆಂಬುದನ್ನು ಪಾಕಿಸ್ತಾನದ ಮಾಜಿ ಬೌಲರ್​ ವಾಕರ್​ ಯೂನಿಸ್ (Waqar Younis)​ ಹೇಳಿದ್ದಾರೆ.

    ರನ್​ ಚೇಸ್​ ಮಾಡುವ ಆಟಗಾರರಿಗೆ ಶಾರ್ಟ್​ ಬಾಲ್ಸ್​ಗಳನ್ನು ಎಸೆಯಿರಿ ಎಂದು ಯೂನಿಸ್​ ಸಲಹೆ ನೀಡಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ ಯಾದವ್​ರ ಚೇಸಿಂಗ್​ ಅನ್ನು ಪಾಕಿಸ್ತಾನ ಯಶಸ್ವಿಯಾಗಿ ನಿಯಂತ್ರಣ ಮಾಡಿದೆ. ಸೂಪರ್​ 12 ಹಂತದ ಪಂದ್ಯದಲ್ಲೂ ನೋಡಿದ್ದೇವೆ. ಸೂರ್ಯ ಅವರನ್ನು ಪಾಕಿಸ್ತಾನವು ತಂತ್ರಗಾರಿಕೆಯಿಂದ ಔಟ್​ ಮಾಡಿತು. ಶಾರ್ಟ್​ ಬಾಲ್ಸ್​ ಎಸೆಯುವುದರಿಂದ ಯಾದವ್​ರನ್ನು ಬಹುಬೇಗ ಔಟ್​ ಮಾಡಬಹುದು, ಯಾದವ್​ರನ್ನು ಔಟ್​ ಮಾಡಲು ಇರುವುದು ಇದೊಂದೆ ದಾರಿ ಎಂದು ಯೂನಿಸ್​ ಹೇಳಿದ್ದಾರೆ.

    ವಿಶ್ವಕಪ್‌ನಲ್ಲಿ ಭಾರತವು ತನ್ನ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದ ಹೇಳಿದ ಯೂನಿಸ್​ ಖಾನ್, ಪಾಕಿಸ್ತಾನವು ವಿಶ್ವಕಪ್ ಎತ್ತಿ ಹಿಡಿಯಲು ವಿಫಲವಾದರೆ, ಭಾರತಕ್ಕೆ ಅವಕಾಶವಿದೆ ಎಂದರು. ಭಾರತ ಉತ್ತಮ ತಂಡವಾಗಿದ್ದು, ಟೂರ್ನಿಯ ಕೊನೆಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ವಿಭಿನ್ನ ತಂಡದಂತೆ ಕಾಣುತ್ತಿದೆ ಎಂದು ಹೇಳಿದರು.

    ಸದ್ಯ ಪಾಕಿಸ್ತಾನ ನಿನ್ನೆ (ನ.09) ನಡೆದ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡವನ್ನು ಮಣಿಸಿ ಫೈನಲ್​ಗೇರಿದೆ. ಇಂದು ಭಾರತ ಇಂಗ್ಲೆಂಡ್​ ತಂಡದ ವಿರುದ್ಧ ಭಾರತ ಸೆಮಿಫೈನಲ್​ ಪಂದ್ಯವನ್ನು ಆಡಲಿದ್ದು, ಪಂದ್ಯವನ್ನು ಗೆದ್ದರೆ ಫೈನಲ್​ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಸೂರ್ಯಕುಮಾರ್ ಯಾದವ್ ಅವರನ್ನು ವಜಾಗೊಳಿಸಲು ಯೂನಿಸ್ ನೀಡಿರುವ ಸಲಹೆ ವರ್ಕೌಟ್​ ಆಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಕಾಂಡೋಮ್​ ಬಳಸುವಂತೆ ಮನವಿ ಮಾಡಿದ್ರೂ ಕೇಳಲಿಲ್ಲ: ಲಂಕಾ ಕ್ರಿಕೆಟಿಗನ ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ

    ವರನ ಮನೆಯವರು ಕೊಡಿಸಿದ ಲೆಹೆಂಗಾ ಚೆನ್ನಾಗಿಲ್ಲ ಅಂತಾ ಮದುವೆಯನ್ನೇ ರದ್ದು ಮಾಡಿದ ವಧು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts