More

  460 ಕೋಟಿ ರೂ. ಒಡೆಯ ಅಲ್ಲು ಅರ್ಜುನ್​ ಬಳಿ ಇರುವ ಐಷಾರಾಮಿ ವಸ್ತುಗಳಿವು!

  ಹೈದರಾಬಾದ್​: ತೆಲುಗು ಚಿತ್ರರಂಗದ ಸ್ಟಾರ್​ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸ್ಟೈಲಿಶ್ ಸ್ಟಾರ್​ ಅಲ್ಲು ಅರ್ಜುನ್​ ಇದೀಗ ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿರುವ ನಟ. ಅದರಲ್ಲಿಯೂ ವಿಶೇಷವಾಗಿ ಎರಡು ಪ್ರತ್ಯೇಕ ವಿಷಯಗಳಿಗೆ ಐಕಾನ್ ಸ್ಟಾರ್​ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತ ಸುದ್ದಿಯಾಗುತ್ತಿದ್ದಾರೆ. ಒಂದೆಡೆ ತಾವು ಅಭಿನಯಿಸಿದ ಬಹುನಿರೀಕ್ಷಿತ ‘ಪುಷ್ಪ-2’ ಚಿತ್ರದ ಟೀಸರ್​ ನಾಳೆ ಹೊರಬೀಳುತ್ತಿದೆ. ಮತ್ತೊಂದೆಡೆ ತಮ್ಮ 42ನೇ ಜನ್ಮದಿನದ ಸಂಭ್ರಮ. ಇದು ಅವರ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ. ಈ ಡಬಲ್ ಧಮಾಕಾ! ಸ್ವೀಕರಿಸಲು ಫ್ಯಾನ್ಸ್​ ತುದಿಗಾಲಿನಲ್ಲಿ ನಿಂತಿದ್ದಾರೆ.

  ಇದನ್ನೂ ಓದಿ: ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಕೇಸ್; ಒಟ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ಮುಂದೆ

  ದಕ್ಷಿಣ ಭಾರತದ ಟಾಪ್ ನಟರ ಪೈಕಿ ಅಲ್ಲು ಅರ್ಜುನ್​ಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ವಿಶೇಷ ಫ್ಯಾನ್ಸ್​ಗಳನ್ನು ಹೊಂದಿದ್ದಾರೆ. ಸ್ಟೈಲಿಶ್ ಸ್ಟಾರ್​ನ ಸಿನಿಮಾಗಳಿಗೆ ಫಿದಾ ಆಗುವ ಸಿನಿಪ್ರೇಕ್ಷಕರು ಸದ್ಯ ಅವರ ಮುಂಬರುವ ‘ಪುಷ್ಪಾ 2’ ಚಿತ್ರದ ರಿಲೀಸ್​ಗಾಗಿ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.

  ಅತೀ ಹೆಚ್ಚು ಒಟ್ಟು ಆಸ್ತಿ ಮೌಲ್ಯ ಹೊಂದಿರುವ ಸ್ಟಾರ್​ ನಟರ ಪೈಕಿ ಅಲ್ಲು ಅರ್ಜುನ್​ ಕೂಡ ಮುಂಚೂಣಿಯಲ್ಲಿದ್ದು, ಬರೋಬ್ಬರಿ 460 ಕೋಟಿ ರೂ. ನಿವ್ವಳ ನೆಟ್​ವರ್ತ್​ ಹೊಂದಿದ್ದಾರೆ. ಇಷ್ಟೊಂದು ಆಸ್ತಿಯಿರುವ ಐಕಾನ್ ಸ್ಟಾರ್​ ಎಲ್ಲರ ಗಮನ ಸೆಳೆದಿರುವುದು ತಾವು ಖರೀದಿಸಿರುವ ಐಷಾರಾಮಿ ವಸ್ತುಗಳಿಂದ. ಅಸಲಿಗೆ ಈ ಐಷಾರಾಮಿ ವಸ್ತುಗಳು ಯಾವುದು ಎಂಬುದರ ಮಾಹಿತಿ ಇಲ್ಲಿದೆ ಗಮನಿಸಿ.

  ಇದನ್ನೂ ಓದಿ: ಸಂಸ್ಕೃತ ಅಧ್ಯಯನದಿಂದ ಅಪರಿಮಿತ ಜ್ಞಾನ ಸಿದ್ಧಿ: ಸಂಸ್ಕೃತ ಮಹೋದಧಿಃ ಜನಪದ ಸಮ್ಮೇಳನದಲ್ಲಿ ಡಾ.ಸಚಿನ್ ಕಠಾಳೆ

  ‘ಫ್ಯಾಲ್ಕನ್’ ಎಂಬ ಮಿಂಚಿನ ಕಪ್ಪು ಬಣ್ಣದ ವ್ಯಾನಿಟಿ ವ್ಯಾನ್ ಹೊಂದಿರುವ ಅಲ್ಲು ಅರ್ಜುನ್​ ಇದಕ್ಕೆಂದೆ 7 ಕೋಟಿ ರೂ. ಖರ್ಚು ಮಾಡಿದ್ದು, ತಮಗೆ ಬೇಕಂತೆ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಇದು ಅವರಂತೆಯೇ ಬಹಳ ಸ್ಟೈಲಿಶ್ ಆಗಿದೆ.

  ಹೈದರಾಬಾದ್​ನ ಜ್ಯುಬ್ಲಿ ಹಿಲ್ಸ್​ನಲ್ಲಿ 100 ಕೋಟಿ ರೂ. ಮೌಲ್ಯದ ಲ್ಯಾವಿಶ್ ಮಲ್ಟಿ-ಕ್ರೋರ್​ ಬಂಗಲೆ ಖರೀದಿ ಮಾಡಿರುವ ಅಲ್ಲು ಅರ್ಜುನ್​, ತಮ್ಮದೇ ಹೆಸರಿನಡಿ ಅಲ್ಲು ಸ್ಟುಡಿಯೋಸ್​ ಎಂಬ ಫಿಲ್ಮ್ ಸ್ಟುಡಿಯೋ ಕೂಡ ಹೊಂದಿದ್ದಾರೆ.

  ಇದನ್ನೂ ಓದಿ: ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಕೇಸ್; ಒಟ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ಮುಂದೆ

  ಹೈದರಾಬಾದ್​ ಬಂಗಲೆ ಹೊರೆತುಪಡಿಸಿದರೆ, 2015ರಲ್ಲಿ ಮುಂಬೈನಲ್ಲಿರುವ 2 ಬಿಎಚ್​ಕೆ ಅಪಾರ್ಟ್​ಮೆಂಟ್​ ಮೇಲೂ ಐಕಾನ್ ಸ್ಟಾರ್​ ಹೂಡಿಕೆ ಮಾಡಿದ್ದಾರೆ.

  ತಮ್ಮ ಖಾಸಗಿ ಕ್ಷಣಕ್ಕಾಗಿಯೇ 80 ಕೋಟಿ ರೂ. ಮೌಲ್ಯದ ಪ್ರೈವೆಟ್​ ಜೆಟ್ ಹೊಂದಿರುವ ಅಲ್ಲು ಅರ್ಜುನ್​, ಅದನ್ನು ಶಮ್​ಶಾಬಾದ್​ ಏರ್​ಪೋರ್ಟ್​ನಲ್ಲಿ ನಿಲುಗಡೆ ಮಾಡಿಸಿದ್ದಾರೆ.

  ಇದನ್ನೂ ಓದಿ: ಐಪಿಎಲ್​ ಮ್ಯಾಚ್​ ಫಿಕ್ಸಿಂಗ್​ ಕೇಸ್​: ಸಾಕ್ಷಿ ಇದ್ರೂ ಶ್ರೀಶಾಂತ್ ಬಚಾವ್​ ಆಗಿದ್ಹೇಗೆ? ಬಯಲಾಯ್ತು ಸ್ಪೋಟಕ ರಹಸ್ಯ

  ಇಷ್ಟೆಲ್ಲಾ ಹಣ ಹರಿದುಬರುವುದು ಅಲ್ಲು ಅರ್ಜುನ್​ ಆಯ್ಕೆ ಮಾಡುವ ಹೆಸರಾಂತ ಬ್ರಾಂಡ್​ನಿಂದ​. ಒಂದೇ ಒಂದು ಪ್ರಾಡೆಕ್ಟ್​ ಬ್ರಾಂಡಿಂಗ್​ಗೆ 4 ಕೋಟಿ ರೂ. ಚಾರ್ಚ್​ ಮಾಡ್ತಾರೆ ಐಕಾನ್ ಸ್ಟಾರ್​.

  ಅಲ್ಲು ಅರ್ಜುನ್​ ಬಳಿ ದುಬಾರಿ ಕಾರುಗಳಾದ ರೇಂಜ್ ರೋವರ್​ ವೋಗ್, ಹ್ಯಾಮರ್​ ಎಚ್​ 2, ಜಾಗ್ವರ್​ ಎಕ್ಸ್​ಜೆ ಮತ್ತು ಮರ್ಸಿಡಿಸ್​ 200 ಸಿಡಿಐ ಸೇರಿದಂತೆ ಇನ್ನು ಹಲವಾರು ಐಷಾರಾಮಿ ಕಾರು​ಗಳಿವೆ,(ಏಜೆನ್ಸೀಸ್).

  26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

  ಆರ್​ಸಿಬಿ ಮ್ಯಾನೆಜ್​ಮೆಂಟ್​ಗೆ ಬುದ್ದಿ ಕಲಿಸಲು ಮುಂದಾದ್ರು ಫ್ಯಾನ್ಸ್​! ಹೀಗೆ ಮಾಡೋದೇ ಸರಿ ಅಂತಿದ್ದಾರೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts