More

    ಇದೇ ಮೊದಲ ಬಾರಿಗೆ ದೆಹಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಈಜಿಪ್ಟ್​ ಸೇನಾ ತುಕುಡಿ ಭಾಗಿ!

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ ಕಳೆಗಟ್ಟಿದ್ದು, ಕರ್ತವ್ಯಪಥ್​ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳಗ್ಗೆ 10.30ಕ್ಕೆ ಧ್ವಜಾರೋಹಣ ನೇರವೇರಿಸಿದರು. ಬಳಿಕ ಭಾರತೀಯ ಸೇನಾ ಪಡೆಯು ರಾಷ್ಟ್ರಪತಿಗಳಿಗೆ ಗೌರವ ವಂದನೆ ಸಲ್ಲಿಸಿತು. ಇದೇ ಮೊದಲ ಬಾರಿಗೆ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈಜಿಫ್ಟ್ ದೇಶದ ಸೇನಾ ತುಕುಡಿಯೂ ಬಾಗಿಯಾಗಿದೆ.

    ಈಜಿಪ್ಟ್ ದೇಶದ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್​-ಸಿಸಿ ಅವರು ಈ ಬಾರಿ ಭಾರತ ಗಣರಾಜ್ಯೋತ್ಸವ ಪರೇಡ್​ನ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆ 144 ಈಜಿಫ್ಟ್​ನ ಯೋಧರು ಗಣರಅಜ್ಯೋತ್ಸವ ಪರೇಡ್​ನಲ್ಲಿ ಭಾಗಿಯಾಗಿದ್ದಾರೆ. ಪರೇಡ್​ನಲ್ಲಿ ಭಾರತ ದೇಶದ ಮಿಲಿಟರಿ ಸಾಮರ್ಥ್ಯ ಅನಾವರಣಗೊಳ್ಳುತ್ತಿದೆ. ಸೇನಾ ಪಡೆಗಳು, K9 ವಜ್ರ ಟ್ಯಾಂಕ್​ ತಂಡ, ಪಂಜಾಬ್​- ಮರಾಠ- ದೋಗ್ರಾ- ಬಿಹಾರ- ಗೋರ್ಖಾ ರೆಜಿಮೆಂಟ್​ಗಳಿಂದ ಪಥಸಂಚಲನ, 61 ಅಶ್ವಗಳಿಂದ ಪಥಸಂಚಲನ, ಏರ್​ ಮಿಸೈಲ್​, ಆಕಾಶ್​ ಮಿಸೈಲ್ ತಂಡಗಳಿಂದ ಪರೇಡ್​​… ಹೀಗೆ ಆಕರ್ಷಕ ಮತ್ತು ಮೈನವಿರೇಳಿಸುವ ಪರೇಡ್​ ನಡೆಯುತ್ತಿದೆ.

    ಸೊಂಟದ ಸ್ವಾಧೀನವಿಲ್ಲದ ವಿದ್ಯಾರ್ಥಿಗೆ ಸಂಕಷ್ಟ: ದಾನಿಗಳು ನೀಡಿದ ನೆರವಿನ ಹಣ ಬ್ಯಾಂಕ್​ ಸಾಲಕ್ಕೆ ಜಮಾ! ತಬ್ಬಲಿ ಮಗುವಿಗೆ ಇದೆಂಥಾ ಕಷ್ಟ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts