More

    ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದ ಆಸನವಿದು! ಮೊಲದಂತೆ ಕಾಣುವ ಭಂಗಿ!

    ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದಂತಹ ಆಸನವೆಂದರೆ ಶಶಾಂಕಾಸನ. ಇದು ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಸರಳ ಆಸನವಾಗಿದೆ. ಶಶಾಂಕ ಎಂದರೆ ಮೊಲ. ಈ ಭಂಗಿಯು ಮೊಲದ ಆಕಾರವನ್ನು ಹೋಲುವುದರಿಂದ ಈ ಹೆಸರು ಬಂದಿದೆ.

    ಪ್ರಯೋಜನಗಳು : ಹೊಟ್ಟೆಯ ಅಂಗಗಳನ್ನು ಉತ್ತೇಜಿಸುತ್ತದೆ. ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಮಲಬದ್ಧತೆ ನಿಯಂತ್ರಣವಾಗುತ್ತದೆ. ಶಿರಸ್ಸಿಗೆ ರಕ್ತಸಂಚಲನೆ ಚೆನ್ನಾಗಿ ಆಗಿ, ನರಮಂಡಲ ಸಚೇತನಗೊಳ್ಳುತ್ತದೆ. ಮೈಗ್ರೇನ್ ತಲೆ ನೋವು ನಿಯಂತ್ರಣಕ್ಕೆ ಸಹಕಾರಿ.

    ಇದನ್ನೂ ಓದಿ: ಜೀರ್ಣಶಕ್ತಿ ಹೆಚ್ಚಿಸಿ ಉಸಿರಾಟ ಸುಗಮವಾಗಿಸುತ್ತೆ, ವಜ್ರಾಸನ!

    ನಿಯಮಿತ ಅಭ್ಯಾಸದಿಂದ ನೆನಪಿನಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ ಹಾಗೂ ಮನಸ್ಸು ಶಾಂತವಾಗುತ್ತದೆ. ಮುಖದ ಕಾಂತಿ ಹೆಚ್ಚುತ್ತದೆ. ಬೆನ್ನುಮೂಳೆಗೆ ಉತ್ತಮ ವಿಶ್ರಾಂತಿ ಒದಗಿಬರುತ್ತದೆ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳಿಗೆ ಕೊಂಚ ಮಸಾಜ್​ ಮಾಡಿದಂತಾಗುತ್ತದೆ.

    ಮಾಡುವ ವಿಧಾನ : ಜಮಖಾನದ ಮೇಲೆ ಕಾಲುಗಳನ್ನು ಮಡಿಸಿ ಕುಳಿತುಕೊಳ್ಳುವುದು. ಒಮ್ಮೆ ಉಸಿರನ್ನು ತೆಗೆದುಕೊಂಡು ಸ್ವಲ್ಪ ಹಿಂದಕ್ಕೆ ಬಾಗಿ, ನಂತರ ಉಸಿರು ಬಿಡುತ್ತಾ ಕೈಚಾಚಿಕೊಂಡು ಮುಂದಕ್ಕೆ ಬಾಗುವುದು. ಕಣ್ಣು ಮುಚ್ಚಿರಬೇಕು. ಸ್ವಲ್ಪ ಹೊತ್ತು ಹೀಗೇ ಇದ್ದು, ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಮೇಲಕ್ಕೆ ಬರಬೇಕು.

    ಹೆಚ್ಚು ಸೊಂಟ ನೋವು ಇರುವವರು, ಹೃದಯ ಸಂಬಂಧಿ ಖಾಯಿಲೆ ಇರುವವರು ಈ ಆಸನದ ಅಭ್ಯಾಸ ಮಾಡಬಾರದು.

    ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಸುಲಭ ಆಸನ – ಅರ್ಧ ಚಕ್ರಾಸನ

    ಸೆಮಿಫೈನಲ್ಸ್​ನಲ್ಲಿ ಸಿಂಧುಗೆ ಸೋಲು …ಆದರೆ ಪದಕದ ಆಸೆ ಜೀವಂತ!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts