More

    ಶರೀರಕ್ಕೆ ಮೃದುವಾದ ವ್ಯಾಯಾಮ ನೀಡುವ ಸುಲಭ ಆಸನವಿದು!

    ಶರೀರಕ್ಕೆ ಮೃದುವಾದ ವ್ಯಾಯಾಮ ನೀಡುವ ‘ಉತ್ಕಟಾಸನ’ ಮಾಡುವುದರಿಂದ ಕಚೇರಿಗಳಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಹೆಚ್ಚಿನ ಲಾಭವನ್ನು ಪಡೆಯಬಹುದು. ಉತ್ಕಟವೆಂದರೆ ಬಲವತ್ತರವಾಗಿ, ಕುರ್ಚಿಯಲ್ಲಿ ಕುಳಿತಂತೆ ತೋರುವ ಭಂಗಿಯಾಗಿದೆ. ಇಂಗ್ಲೀಷಿನಲ್ಲಿ ಸಿಟ್ಟಿಂಗ್ ವಿತೌಟ್ ಚೇರ್ ಪೋಸ್ಚರ್ ಎಂದು ಕರೆಯುತ್ತಾರೆ.

    ಅಭ್ಯಾಸ ಕ್ರಮ : ತಾಡಾಸನದಲ್ಲಿ ನಿಲ್ಲುವುದು. ಉಸಿರನ್ನು ತೆಗೆದುಕೊಂಡು ಕೈಗಳನ್ನು ತಲೆಯ ಮೇಲೆ ನೇರವಾಗಿ ಎತ್ತಿ ಹಿಡಿದು, ಅಂಗೈಗಳೆರಡನ್ನು ಜೋಡಿಸುತ್ತಾ ಮೊಣಕೈಗಳನ್ನು ನೇರಮಾಡಿ ಎಳೆದುಕೊಳ್ಳಬೇಕು. ಉಸಿರನ್ನು ಬಿಡುತ್ತಾ ಮಂಡಿಗಳನ್ನು ಬಾಗಿಸಿ ಅರ್ಧ ಕುಳಿತುಕೊಳ್ಳುವ ಭಂಗಿಯಲ್ಲಿ ನಿಲ್ಲಬೇಕು. ಕಾಲ್ಪನಿಕ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಮಂಡಿಗಳನ್ನು ಬಗ್ಗಿಸುತ್ತಾ ಎದೆ ಭಾಗವನ್ನು ತುಸು ಮುಂದಕ್ಕೆ ಬಾಗಿಸಬೇಕು. ಈಗ ಶರೀರದ ಹೆಚ್ಚಿನ ಭಾರವೆಲ್ಲಾ ಪಾದದ ಮುಂಭಾಗದಲ್ಲಿರುತ್ತದೆ. ದೃಷ್ಟಿ ನೇರ, ತಲೆ ನೇರವಾಗಿರಬೇಕು. ಅರ್ಧ ನಿಮಿಷದಷ್ಟು ಸಮಯ ಸಹಜ ಉಸಿರಾಟದೊಂದಿಗೆ ಈ ಸ್ಥಿತಿಯಲ್ಲಿದ್ದು, ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ವಾಪಸ್​ ಮೇಲಕ್ಕೆ ಏಳಬೇಕು. ನಂತರ ಕೈಗಳನ್ನು ಕೆಳಗಿಳಿಸಿ, 2 ನಿಮಿಷ ವಿಶ್ರಾಂತಿ ಪಡೆಯಬೇಕು.

    ಇದನ್ನೂ ಓದಿ: ತುಂಬಾ ಹೊತ್ತು ಕುಳಿತು ಬೆನ್ನು ನೋವೇ? ಈ ಯೋಗಾಸನ ಮಾಡಿ!

    ಉಪಯೋಗಗಳು : ಉತ್ಕಟಾಸನ ಅಭ್ಯಾಸ ಮಾಡುವುದರಿಂದ ಕಾಲುಗಳ ಸಾಮಾನ್ಯ ನ್ಯೂನತೆ ಸರಿಪಡಿಸಲು ಸಹಾಯವಾಗುತ್ತದೆ, ಕಾಲಿನ ಮಾಂಸಖಂಡಗಳು ಬಲಿಷ್ಠವಾಗುತ್ತವೆ. ಭುಜಗಳ ಬಿಗಿತ ನಿವಾರಣೆಯಾಗಿ, ಎದೆ, ಬೆನ್ನು, ಕಿಬ್ಬೊಟ್ಟೆಗೆ ಮತ್ತು ಸೊಂಟಕ್ಕೆ ಮೃದುವಾದ ವ್ಯಾಯಾಮ ದೊರಕುತ್ತದೆ. ವಾಕಿಂಗ್‌ನ ಉಪಯೋಗ ಕೂಡ ಈ ಆಸನದಲ್ಲಿ ದೊರಕುತ್ತದೆ.

    ತೀರಾ ಸೊಂಟ ನೋವು ಅಥವಾ ಮಂಡಿ ನೋವು ಇರುವವರು ಈ ಆಸನವನ್ನು ಮಾಡಬಾರದು.

    ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ: ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿ!

    ಒಂದು ಪ್ಲೇಟ್​ಗೆ 15 ಸಾವಿರ ರೂಪಾಯಿ! ಇದು ಭೂಮಿಯ ಅತ್ಯಂತ ದುಬಾರಿ ಫ್ರೆಂಚ್​ ಫ್ರೈಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts