More

    ಹೀಗೆ ಮಾಡಿದರೆ ಗರ್ಭಪಾತ/ಮೃತಶಿಶು ಜನನ ಪ್ರಮಾಣ ತಗ್ಗಿಸಬಹುದಂತೆ!

    ನವದೆಹಲಿ: ದೇಶದಲ್ಲಿ ಗರ್ಭಪಾತ ಹಾಗೂ ಮೃತಶಿಶು ಜನನ ಕೂಡ ಒಂದು ಕಾಡುತ್ತಿರುವ ಸಮಸ್ಯೆಯೇ. ಆದರೆ ಅದಕ್ಕೂ ತಕ್ಕಮಟ್ಟಿಗೆ ಒಂದು ಪರಿಹಾರವಿದೆ ಎಂಬುದು ಅಧ್ಯಯನವೊಂದರಿಂದ ಕಂಡುಬಂದಿದೆ. ಬರೀ ಗಾಳಿಯಿಂದಲೇ ಗರ್ಭಪಾತ ಅಥವಾ ಮೃತಶಿಶು ಜನನ ಪ್ರಮಾಣವನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದು ಎಂದು ಈ ಅಧ್ಯಯನ ವರದಿ ಹೇಳಿದೆ.

    ಹೌದು.. ಹೀಗೆ ಮಾಡುವುದರಿಂದ ಭಾರತವಷ್ಟೇ ಅಲ್ಲ, ಏಷ್ಯಾದಲ್ಲೇ ಗರ್ಭಪಾತ/ಮೃತಶಿಶು ಜನನ ಪ್ರಮಾಣವನ್ನು ಶೇ. 7ರಷ್ಟು ತಗ್ಗಿಸಬಹುದು ಎನ್ನುತ್ತದೆ ಈ ಅಧ್ಯಯನ. ದಕ್ಷಿಣ ಏಷ್ಯಾದ 34,197 ಗರ್ಭಿಣಿಯರನ್ನು ಅಧ್ಯಯನ ಮಾಡುವ ಮೂಲಕ ಈ ಅಂಶವನ್ನು ಕಂಡುಕೊಳ್ಳಲಾಗಿದೆ. ಇವರ ಪೈಕಿ 27,480 ಮಂದಿ ಗರ್ಭಪಾತ ಹಾಗೂ 6,717 ಮಂದಿಯಲ್ಲಿ ಮೃತಶಿಶು ಜನನ ಸಂಭವಿಸಿತ್ತು. ಈ ಪೈಕಿ ಭ್ರೂಣನಷ್ಟ ಪ್ರಕರಣಗಳಲ್ಲಿ ಶೇ. 77 ಭಾರತ, ಶೇ. 12 ಪಾಕಿಸ್ತಾನ ಹಾಗೂ ಶೇ. 11 ಬಾಂಗ್ಲಾ ದೇಶಕ್ಕೆ ಸಂಬಂಧಿಸಿದ್ದಾಗಿವೆ ಎಂದು ಅಧ್ಯಯನ ತಿಳಿಸಿದೆ.

    ಇದನ್ನೂ ಓದಿ: ‘ಬಿಜೆಪಿಗೆ ಮೋದಿಯಿದ್ದಂತೆ, ಕಾಂಗ್ರೆಸ್​ಗೆ ರಾಹುಲ್​ ಗಾಂಧಿ; ರಾಹುಲ್​ನ್ನು ಕಂಡರೆ ಕೇಂದ್ರದ ನಾಯಕರು ಹೆದರುತ್ತಾರೆ’

    ಅಂದಹಾಗೆ ಈ ರೀತಿ ಭ್ರೂಣನಷ್ಟ ಸಂಭವಿಸಲು ಪ್ರಮುಖ ಕಾರಣ ವಾಯುಮಾಲಿನ್ಯ ಎಂಬುದು ಈ ಅಧ್ಯಯನದಿಂದ ತಿಳಿದು ಬಂದಿದೆ. ಪ್ರತಿ ವರ್ಷ ದಕ್ಷಿಣ ಏಷ್ಯಾದಲ್ಲಿ ವಾಯುಮಾಲಿನ್ಯ ಕಾರಣದಿಂದಾಗಿಯೇ 3,49,681 ಭ್ರೂಣನಷ್ಟ ಪ್ರಕರಣಗಳು ಸಂಭವಿಸುತ್ತಿವೆ. ವಾತಾವರಣದಲ್ಲಿನ ಪಿಎಂ-2.5 ಕಣಗಳಿಗೆ ತೆರೆದುಕೊಳ್ಳುವುದರಿಂದ ಈ ರೀತಿಯ ಭ್ರೂಣನಷ್ಟಗಳು ಸಂಭವಿಸುತ್ತಿವೆ. ದಕ್ಷಿಣ ಏಷ್ಯಾದಲ್ಲಿ 2000-2016ರ ಅವಧಿಯಲ್ಲಿ ಪ್ರತಿವರ್ಷ ಶೇ.7ರಷ್ಟು ಭ್ರೂಣನಷ್ಟಗಳು ಈ ವಾಯುಮಾಲಿನ್ಯದಿಂದಲೇ ಸಂಭವಿಸುತ್ತಿವೆ. ಗಾಳಿಯ ಗುಣಮಟ್ಟವನ್ನು ವೃದ್ಧಿಸಿದರೆ ಈ ಭ್ರೂಣನಷ್ಟಗಳನ್ನು ತಪ್ಪಿಸಬಹುದು ಎಂಬ ಅಧ್ಯಯನ ವರದಿ ಲ್ಯಾನ್ಸೆಟ್​ನಲ್ಲಿ ಪ್ರಕಟವಾಗಿದೆ.

    ಈ ಅಧ್ಯಯನಕ್ಕಾಗಿ 1998ರಿಂದ 2016ರ ವರೆಗೆ ಸಮೀಕ್ಷೆ ನಡೆಸಿದ್ದು, ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತು, ಒಮ್ಮೆ ಭ್ರೂಣನಷ್ಟ ಹೊಂದಿರುವ ಮಹಿಳೆಯರನ್ನು ಇದಕ್ಕೆ ಪರಿಗಣಿಸಲಾಗಿದೆ. ಅಲ್ಲದೆ ಈ ಅವಧಿಯಲ್ಲಿನ ವಾತಾವರಣದಲ್ಲಿನ ಪಿಎಂ-2.5 ಕಣಗಳ ಪ್ರಮಾಣವನ್ನು ಸೆಟಲೈಟ್ ಮತ್ತಿತರ ವಿಧಾನಗಳ ಮೂಲಕ ಪಡೆದು ಈ ಅಧ್ಯಯನ ನಡೆಸಲಾಗಿದೆ ಎಂದು ಅಧ್ಯಯನ ತಂಡದಲ್ಲೊಬ್ಬರಾದ ಚೀನಾ ಪರ್ಕಿಂಗ್ ಯುನಿವರ್ಸಿಟಿಯ ಡಾ. ಟಾವೊ ಕ್ಸ್ಯೂ ಹೇಳಿದ್ದಾರೆ.
    ಭ್ರೂಣನಷ್ಟವು ಸಂಬಂಧಿತ ಮಹಿಳೆಯ ಮೇಲೆ ಮಾನಸಿಕ-ದೈಹಿಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ ಹೆರಿಗೆ ಬಳಿಕದ ಖಿನ್ನತೆಗೂ ಒಳಗಾಗುತ್ತಾಳೆ ಹಾಗೂ ನಂತರದ ಹೆರಿಗೆಗಳಲ್ಲಿ ಶಿಶುಮರಣ ಸಾಧ್ಯತೆಯೂ ಅಧಿಕವಾಗಿರುತ್ತದೆ ಎಂದು ಈ ಅಧ್ಯಯನ ಹೇಳಿದೆ. (ಏಜೆನ್ಸೀಸ್​)

    ಎಲ್ಲರಿಗೂ ಸಿಗಲ್ಲ ಇಂಥ ಚಾನ್ಸ್​! ಇಬ್ಬರು ಪ್ರಿಯತಮೆಯರನ್ನು ಒಂದೇ ಮಂಟಪದಲ್ಲಿ ಮದುವೆಯಾದ ಭೂಪ!

    10 ಪುಷ್‍ಅಪ್ಸ್, 20 ಬಸ್ಕಿ ಹೊಡೆಯಬಲ್ಲಿರಾ? ಭಾರತೀಯ ನೌಕಾಪಡೆಯಲ್ಲಿ ನಿಮಗಿವೆ 358 ಹುದ್ದೆಗಳು..

    ಹಕ್ಕಿ ಜ್ವರದ ಎಫೆಕ್ಟ್​ ಚಿಕನ್​ ಬೆಲೆಯಲ್ಲಿ ಕುಸಿತ: ಬಾಯ್ಲರ್​ ಕೋಳಿ ಕೆಜಿಗೆ 15 ರೂ.!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts