More

    ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಲು ನೆರವಾಗುತ್ತವೆ ಈ ಆ್ಯಪ್​ಗಳು

    ನವದೆಹಲಿ: ದೇಶಿಯವಾಗಿ ಅಭಿವೃದ್ಧಿ ಪಡಿಸಲಾಗಿರುವ ಆರೋಗ್ಯ ಸೇತು ಆ್ಯಪ್​ಅನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇದು ಕೋವಿಡ್​ ಪೀಡಿತರಿಂದ ದೂರವಿರುವಂತೆ ಎಚ್ಚರಿಸುವುದಲ್ಲದೇ, ತಾವು ಸುರಕ್ಷಿತವಾಗಿದ್ದೀರೋ ಇಲ್ಲವೋ ಎಂಬುದನ್ನು ಖಚಿತಪಡಿಸುತ್ತದೆ.

    ಆರಂಭದ ದಿನಗಳಲ್ಲಿ ಈ ಆ್ಯಪ್​ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿತ್ತು. ಇದೇ ಮಾದರಿಯಲ್ಲಿ ಹಲವು ಸಾಫ್ಟವೇರ್​ ದೈತ್ಯ ಕಂಪನಿಗಳು ಕೂಡ ಆ್ಯಪ್​ ಅಭಿವೃದ್ಧಿ ಪಡಿಸಿವೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

    ಆರೋಗ್ಯ ಸೇತು ಆ್ಯಪ್​: ಇದನ್ನು ರಾಷ್ಟ್ರೀಯ ಇನ್​ಫಾರ್ಮೇಟಿಕ್ಸ್​ ಸೆಮಟರ್​ ಅಭಿವೃದ್ಧಿಪಡಿಸಿದೆ. ಇದು ಕೋವಿಡ್​ ಸೋಂಕು ಹರಡುವುದನ್ನು ತಪ್ಪಿಸಲು ನಿರ್ಮಿಸಲಾಗಿದೆ. ಕೋವಿಡ್​ ಸೋಂಕಿತರು ನಿಮ್ಮ ಸಮೀಪದಲ್ಲಿದ್ದರೆ ಎಚ್ಚರಿಕೆ ನೀಡುತ್ತದೆ.

    ಇದನ್ನೂ ಓದಿ; ಸರಣಿ ಅನಿಲ ದುರಂತಕ್ಕೆ ಸಾಕ್ಷಿಯಾಗುತ್ತಿದೆ ವಿಶಾಖಪಟ್ಟಣ; ಮತ್ತಿಬ್ಬರ ಸಾವು, ಒಬ್ಬ ಗಂಭೀರ

    ಗೂಗಲ್​ನ ಸೋಡರ್​: ಬಳಕೆದಾರನನ್ನು ಇತರ ವ್ಯಕ್ತಿಗಳಿಂದ ಎರಡು ಮಿಟರ್​ ದೂರವಿರುವಂತೆ ನೋಡಿಕೊಳ್ಳುತ್ತದೆ. ಸ್ಮಾರ್ಟ್​ಫೋನ್​ಗಳ ಕ್ಯಾಮರಾ ಬಳಸಿಕೊಂಡು ಬೇರೆ ಸ್ಮಾರ್ಟ್​ಫೋನ್​ಗಳ ಇರುವಿಕೆಯನ್ನು ಪತ್ತೆ ಎಚ್ಚರಿಸಿ ಅಂತರವನ್ನು ಕಾಪಾಡಿಕೊಳ್ಳುವಂತೆ ಸೂಚಿಸುತ್ತದೆ.

    1ಪಾಯಿಂಟ್​5: ವಿಶ್ವ ಸಂಸ್ಥೆಯ ತಾಂತ್ರಿಕ ವಿಭಾಗ ಇದನ್ನು ರೂಪಿಸಿದೆ. 1.5 ಮೀಟರ್​ ಪರಿಧಿಯಲ್ಲಿರುವ ಮೊಬೈಲ್​ಗಳನ್ನು ಗುರುತಿಸಿ ಸಂದೇಶ ರವಾನಿಸುತ್ತದೆ. ವೈಬ್ರೈಟ್​ ಮೂಲಕವೂ ತಿಳಿಸುತ್ತದೆ. ಜತೆಗೆ, 1.5 ಮಿಟರ್​ ಅಥವಾ 2.5 ಮೀಟರ್​ಗೂ ಅಂತರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು.

    ಇದನ್ನೂ ಓದಿ; ಕರೊನಾ ಮಾತ್ರವಲ್ಲ, ಲಾಕ್​ಡೌನ್​ ಕೂಡ ಹೆಚ್ಚುತ್ತಿದೆ….! ಏಳು ರಾಜ್ಯಗಳಲ್ಲಿ ನಿರ್ಬಂಧ ವಿಸ್ತರಣೆ

    ಡಿಆರ್​ಒಆರ್​: ಗುರುಗ್ರಾಮದ ಸ್ಟಾರ್ಟ್​ಅಪ್​ ಕಂಪನಿ ಈ ಆ್ಯಪ್​ ತಯಾರಿಸಿದೆ. ಆ್ಯಂಡ್ರಾಯ್ಡ್​ ಹಾಗೂ ಐಒಎಸ್​ ಆವೃತ್ತಿಯೂ ಲಭ್ಯವಿದೆ. ವೈಯಕ್ತಿಕ ಸುರಕ್ಷತಾ ಸಹಾಯಕನಂತೆ ಇದು ಕಾರ್ಯ ನಿರ್ವಹಿಸುತ್ತದೆ. ನಾವು ಎಷ್ಟರಮಟ್ಟಿಗೆ ವ್ಯಕ್ತಿಗತ ಅಂತರ ಕಾಪಾಡಿಕೊಂಡಿದ್ದೇವೆ ಎಂಬುದರ ಬಗ್ಗೆ ವಾರ, ಪಾಕ್ಷಿಕ ಹಾಗೂ ತಿಂಗಳ ವರದಿಯನ್ನು ಇದು ನೀಡುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ನೀವು ಪಾಸೋ ಫೇಲೋ ಎಂಬುದನ್ನು ತಿಳಿಸುತ್ತದೆ.

    ವೇಟ್​ಕ್ಯೂ: ಹಲವು ಕ್ಷೇತ್ರಗಳು ತಜ್ಞರು ಸೇರಿ ಈ ಆ್ಯಪ್​ ರೂಪಿಸಿದ್ದಾರೆ. ಯಾವುದಾದರೊಂದು ಪ್ರದೇಶ ಎಷ್ಟು ಜನದಟ್ಟಣೆಯಿಂದ ಕೂಡಿದೆ ಎಂಬುದರ ವಾಸ್ತವ ವಿವರವನ್ನು (ರಿಯಲ್​ ಟೈಮ್​ ಡೇಟಾ) ಇದು ನೀಡುತ್ತದೆ.

    ಚೀನಾಗೆ ಬೀಳಲಿದೆ ಮತ್ತೊಂದು ಹೊಡೆತ; ಆ್ಯಪ್​ಗಳ ಬಳಿಕ 5ಜಿ ಉಪಕರಣಗಳ ಬ್ಯಾನ್​ಗೂ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts