More

    ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿ

    ಕವಿತಾಳ: ಪಟ್ಟಣದ ತ್ರಯಂಭಕೇಶ್ವರ ಸ್ಲಂ ಏರಿಯಾದಲ್ಲಿ ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೊಳ್ಳೆ ಸಂಗ್ರಹಣೆ ಮಾಡಲಾಯಿತು.


    ಬೀದರ ಜಿಲ್ಲೆ ಕೀಟ ಶಾಸ್ತ್ರಜ್ಞ ಜೀತುಲಾಲ್ ಪವಾರ್ ಮಾತನಾಡಿ, ಸೊಳ್ಳೆ ದೇಹದಲ್ಲಿರುವ ವೈರಸ್ ಅಧ್ಯಯನ ಮಾಡಲಾಗುವುದು. ಡೆಂೆ, ಮಲೇರಿಯಾ, ಮೆದುಳು ಜ್ವರ ಬಗ್ಗೆ ಮುನ್ನೆಚ್ಚರಿಕೆವಹಿಸಬೇಕು. ಎಲ್ಲರೂ ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಕುರ್ಡಿ, ಕಲ್ಲೂರು, ಸಿರವಾರ, ಕವಿತಾಳ ಹೋಬಳಿ ವ್ಯಾಪ್ತಿಯಲ್ಲಿ ಸೊಳ್ಳೆ ಸಂಗ್ರಹಿಸಿ ರೋಗ ಬರದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.


    ಸ್ಲಂ ಏರಿಯಾದಲ್ಲಿ 100ಕ್ಕೂ ಹೆಚ್ಚು ಸೊಳ್ಳೆ ಸಂಗ್ರಹಿಸಲಾಯಿತು. ಕೀಟ ಶಾಸ್ತ್ರಜ್ಞ ಮಹಾದೇವ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ, ಪ್ರದೀಪಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts