More

    ಮನೆ ಹಕ್ಕುಪತ್ರಕ್ಕಾಗಿ ಚುನಾವಣೆ ಬಹಿಷ್ಕಾರ

    ಜಗಳೂರು: ಸುಮಾರು 20 ವರ್ಷಗಳಿಂದಲೂ ಮನೆ ಹಕ್ಕುಪತ್ರ ಹಾಗೂ ಮೂಲ ಸೌಕರ್ಯಗಳಿಗಾಗಿ ಹೋರಾಟ ನಡೆಸುತ್ತಿರುವ ಕುಟುಂಬಗಳಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಹಾಗಾಗಿ, ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದೇ ಚುನಾವಣೆ ಬಹಿಷ್ಕರಿಸಲು ಗೌರಿಪುರ, ಹೊಸೂರು ಗ್ರಾಮಸ್ಥರು ಮುಂದಾಗಿದ್ದಾರೆ.

    ಗುರುವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ತಾಲೂಕು ಕ್ಯಾಸೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗೌರಿಪುರ ಹೊಸೂರಿನಲ್ಲಿ 103ಕ್ಕೂ ಹೆಚ್ಚು ದಲಿತ ಕುಟುಂಬಗಳಿದ್ದು, 400 ಮತಗಳಿವೆೆ. 20 ವಷರ್ಗಳಿಂದ ಈ ಸ್ಥಳದಲ್ಲಿ ವಾಸ ಮಾಡುತ್ತಿದ್ದರೂ ಸಂಸದರು, ಶಾಸಕರು, ಸ್ಥಳೀಯ ಚುನಾಯಿತರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಆಪಾದಿಸಿದರು.

    2002 ಮತ್ತು 2003 ಸಾಲಿನಲ್ಲಿ ಸರ್ಕಾರದಿಂದ 75 ಆಶ್ರಯ ಮನೆ ನಿರ್ಮಾಣ ಮಾಡಲಾಗಿದೆ. ಮನೆಗಳಿಗೆ ಹಕ್ಕುಪತ್ರ ನೀಡಬೇಕೆಂದು ಮನವಿ ಸಲ್ಲಿಸಿದರೂ ಯಾವುದೇ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಕೊಡಿಸುವ ಪ್ರಯತ್ನ ಮಾಡಿಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಹಿಷ್ಕರಿಸಲು ಮುಂದಾಗಿದ್ದಾಗ ಅಧಿಕಾರಿಗಳು ಕೊಡಿಸುವ ಭರವಸೆ ನೀಡಿ, ನಂತರ ಇತ್ತ ತಲೆ ಹಾಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

    ಎಲ್ಲ ಕುಟುಂಬಗಳಿಗೂ ಹಕ್ಕು ಪತ್ರ ನೀಡುವವರೆಗೂ ಮತದಾನ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಸ್ಥಳಕ್ಕೆ ಅಧಿಕಾರಿಗಳ ದೌಡು:
    ಬಹಿಷ್ಕಾರ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಜಿಪಂ ಸಿಇಒ ಸುರೇಶ್ ಹಿಟ್ನಾಳ್, ಉಪಕಾರ್ಯದರ್ಶಿ ಮಲ್ಲನಾಯ್ಕ, ತಹಸೀಲ್ದಾರ್ ಚಂದ್ರಶೇಖರ್, ಪಿಐ ಶ್ರೀನಿವಾಸ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಪರಿಹರಿಸುವ ಭರವಸೆ ನೀಡಿದರು.

    ಗ್ರಾಮಸ್ಥರು, ಚುನಾವಣೆಯೊಳಗೆ ಹಕ್ಕುಪತ್ರ ನೀಡಿ, ಇಲ್ಲದಿದ್ದರೆ ಮತದಾನ ಮಾಡುವುದಿಲ್ಲವೆಂದು ಪಟ್ಟು ಹಿಡಿದರು. ಜಿಪಂ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ನಮ್ಮ ಮೇಲೆ ವಿಶ್ವಾಸವಿಡಿ. ಚುನಾವಣೆ ಮುಗಿದ ಕೂಡಲೇ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಇತ್ಯರ್ಥಪಡಿಸುವೆ ಎಂದರು.

    ವಕೀಲ ಮೈಲೇಶ್, ಸತ್ಯಮೂರ್ತಿ, ಹನುಮಂತರಾಜು, ಅಜ್ಜಯ್ಯ, ಬಸವರಾಜ್, ರವಿಕುಮಾರ್, ಬಸವರಾಜ್, ಅಂಜಿನಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts