More

    ಕರೊನಾ ಎರಡನೇ ಅಲೆಯಲ್ಲಿ ಈ ಏಳು ರಾಜ್ಯಗಳೇ ದೊಡ್ಡ ಹಾಟ್​​ಸ್ಪಾಟ್​!

    ನವದೆಹಲಿ: ಕರೊನಾ ಎರಡನೇ ಅಲೆ ಮೊದಲ ಅಲೆಗಿಂತ ಗಂಭೀರವಾಗಿ ಪರಿಣಮಿಸಿದ್ದು, ಇದೀಗ ದೇಶದ ಏಳು ರಾಜ್ಯಗಳು ದೊಡ್ಡ ಹಾಟ್​ಸ್ಪಾಟ್​ ಆಗಿದ್ದು, ಆತಂಕ ಉಂಟಾಗಿದೆ. ಎಷ್ಟರಮಟ್ಟಿಗೆ ಎಂದರೆ ಈಗಾಗಲೇ ಕರೊನಾ ಹೊಡೆತಕ್ಕೆ ನಲುಗಿ ಹೋಗಿರುವ ದೆಹಲಿ ಹಾಗೂ ಮಹಾರಾಷ್ಟ್ರವನ್ನೇ ಮೀರಿಸುವಂತೆ ಈ ರಾಜ್ಯಗಳಲ್ಲಿ ಕರೊನಾ ಪ್ರಕರಣಗಳು ದಾಖಲಾಗುತ್ತಿವೆ.

    ವಾರದಿಂದ ವಾರಕ್ಕೆ ಈ ಏಳು ರಾಜ್ಯಗಳಲ್ಲಿ ಕೋವಿಡ್​ ಸಾವಿನ ಪ್ರಕರಣಗಳು ಗಣನೀಯವಾಗಿ ಏರುತ್ತಿವೆ. ಒಂದು ವೇಳೆ ಇದು ಹೀಗೇ ಮುಂದುವರಿದರೆ ಆಯಾ ರಾಜ್ಯ ಸರ್ಕಾರಗಳು ಕಠಿಣ ರೀತಿಯಲ್ಲಿ ಲಾಕ್​ಡೌನ್​ ಹೇರುವ ಅನಿವಾರ್ಯತೆ ಸೃಷ್ಟಿ ಆಗಲಿದೆ. 27 ರಾಜ್ಯಗಳಲ್ಲಿ ಕಳೆದ ಎರಡು ವಾರಗಳಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲಿ ಈ ಏಳು ರಾಜ್ಯಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ದೆಹಲಿಯಲ್ಲಿ ಕೋವಿಡ್​ ಸಾವಿನ ಸಾಪ್ತಾಹಿಕ ಏರಿಕೆ ಶೇ. 6.1 ಇದೆ. ಆದರೆ ಕೋವಿಡ್ ಸಾವಿನ ಪ್ರಮಾಣ ಚತ್ತೀಸ್​ಗಢದಲ್ಲಿ ಶೇ. 17, ಜಾರ್ಖಂಡ್​ನಲ್ಲಿ ಶೇ. 16, ಗುಜರಾತ್​ನಲ್ಲಿ ಶೇ. 10 ಇದೆ. ಅದೇ ರೀತಿ ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನ, ಬಿಹಾರಗಳಲ್ಲಿ ಸಾವಿನ ಪ್ರಮಾಣ ಅಧಿಕವಾಗಿದ್ದು, ಸದ್ಯಕ್ಕೆ ಈ ಏಳು ರಾಜ್ಯಗಳು ಕರೊನಾ ಎರಡನೇ ಅಲೆಯ ಹಾಟ್​ಸ್ಪಾಟ್​ ಎನಿಸಿಕೊಂಡಿವೆ.

    ಇದನ್ನೂ ಓದಿ: ಉಗುರು ಉದ್ದ ಇದೆ, ಓಲೆ ದೊಡ್ಡದಿದೆ, ಜತೆಗೆ ಮೊಬೈಲ್​ಫೋನ್​ ಇದೆ ಎಂದು ಬೈದ ಪ್ರಾಂಶುಪಾಲ; ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ 

    ಕಳೆದ ವಾರದಲ್ಲಿ ಕೋವಿಡ್​ ಪ್ರಕರಣ ಹಾಗೂ ಸಾವಿನ ಸಂಖ್ಯೆಗಳಲ್ಲಿ ಎಲ್ಲ ರಾಜ್ಯಗಳಿಗಿಂತಲೂ ಹೆಚ್ಚಿನ ಪ್ರಕರಣ ಚತ್ತೀಸ್​ಗಢದಲ್ಲಿ ಕಂಡುಬಂದಿದೆ. ಎರಡು ವಾರಗಳ ಹಿಂದೆ ಈ ರಾಜ್ಯದಲ್ಲಿ ವಾರಕ್ಕೆ 299 ಸಾವುಗಳು ಸಂಭವಿಸಿದ್ದು, ಕಳೆದ ವಾರವೊಂದರಲ್ಲೇ 967 ಮರಣ ಉಂಟಾಗಿದೆ. ಇದು ದೇಶದಲ್ಲಿನ ಒಟ್ಟು ಕೋವಿಡ್​ ಸಾವಿನ ಪ್ರಕರಣಗಳ ಪೈಕಿ ಶೇ. 10ರಷ್ಟು ಇದ್ದು, ಅತಿ ಹೆಚ್ಚು ಸಾವು ಸಂಭವಿಸಿರುವ ರಾಜ್ಯಗಳ ಪೈಕಿ ಚತ್ತೀಸ್​ಗಢ ಮೊದಲ ಸ್ಥಾನದಲ್ಲಿದೆ. (ಏಜೆನ್ಸೀಸ್​)

    ಕಸ ಹಾಕುವ ಜಾಗವೇ ಮಸಣ; ಹೆಣ ಸುಡಲು ಸ್ಥಳವಿಲ್ಲದೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ!

    ಚಿತಾಗಾರದ ಮುಂದೆ ಬಿಕ್ಕಿಬಿಕ್ಕಿ ಅತ್ತ ಪೊಲೀಸ್​! ಇದು ಕರೊನಾದ ಕರಾಳ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts