More

    ಹೊಸವರ್ಷದಲ್ಲಿ ಶೇ. 50ಕ್ಕಿಂತ ಹೆಚ್ಚು ಲಾಭ ಗಳಿಸಿದ ಷೇರುಗಳು! ವಿವರ ಇಲ್ಲಿದೆ..

    ಮುಂಬೈ: ಭಾರತದ ಷೇರುಪೇಟೆಯಲ್ಲಿ ಏರಿಳಿತ ಸಾಮಾನ್ಯವಾಗಿದೆ. 2024ರ ಪ್ರಾರಂಭದಿಂದಲೂ ಒಂದೆಡೆ ಸಾರ್ವಕಾಲಿಕ ಎತ್ತರವನ್ನು ತಲುಪುತ್ತಿದ್ದರೆ, ಇನ್ನೊಂದೆಡೆ ಪಾತಾಳಕ್ಕೆ ಬೀಳುತ್ತಿದೆ. ಈ ಏರಿಳಿತದ ಹೊರತಾಗಿಯೂ, ಈ 6 ಷೇರುಗಳು ಈ ಜನವರಿಯಲ್ಲಿ ಶೇ 50 ಕ್ಕಿಂತ ಹೆಚ್ಚು ಲಾಭ ಗಳಿಸಿವೆ. ವಿವರ ಇಲ್ಲಿದೆ.

    ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ: ಅಯೋವಾ ಬಳಿಕ ನ್ಯೂ ಹ್ಯಾಂಪ್‌ಶೈರ್​ನಲ್ಲೂ ಟ್ರಂಪ್​ ಗೆಲುವು

    ಸಲಾಸರ್ ಟೆಕ್ನೋ ಎಂಜಿನಿಯರಿಂಗ್: ಈ ಕಂಪೆನಿ ಷೇರುಗಳು ಕಳೆದ ಡಿಸೆಂಬರ್‌ನಲ್ಲಿ ಶೇ 31 ಹಾಗೂ ನವೆಂಬರ್‌ನಲ್ಲಿ ಶೇ 11.3ರಷ್ಟು ಗಳಿಕೆ ಕಂಡಿದ್ದವು. ಈ ವರ್ಷ ಶೇ. 64 ರಷ್ಟು ಏರಿಕೆಯಾಗಿದ್ದು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 89 ಹೆಚ್ಚಾಗಿದೆ. 2024ರ ಜನವರಿ 23 ರಂದು ತನ್ನ ದಾಖಲೆಯ ಎತ್ತರ ಅಂದರೆ ರೂ. 112.40 ಕ್ಕೆ ತಲುಪಿದೆ. ಈ ಸಂಸ್ಥೆ ಉಕ್ಕಿನ ಉತ್ಪನ್ನಗಳನ್ನು ತಯಾರಿಸುತ್ತದೆ.

    ಗ್ಲೋಬಲ್ ಸರ್ಫೇಸಸ್‌ : ಕಳೆದ ವರ್ಷ ಡಿಸೆಂಬರ್‌ನಲ್ಲಿ ಗ್ಲೋಬಲ್ ಸರ್ಫೇಸಸ್‌ ಷೇರುಗಳು ಶೇ. 12.5 ಕುಸಿದವು. ಆದರೆ ಈ ವರ್ಷ ಇಲ್ಲಿಯವರೆಗೆ ಸ್ಟಾಕ್ ಶೇ. 63ರಷ್ಟು ಗಳಿಕೆ ಕಂಡಿವೆ. 2024ರ ಜನವರಿ 20ರಂದು ರಂದು ಕಂಪೆನಿಯ ಷೇರು ಮೌಲ್ಯ321 ರೂ. ತಲುಪಿದೆ. ಈ ಸಂಸ್ಥೆ ಕಲ್ಲು ಗಣಿಗಾರಿಕೆ ಮತ್ತು ರಫ್ತಿನಂತಹ ಕೆಲಸದಲ್ಲಿ ತೊಡಗಿಕೊಂಡಿದೆ

    ಐಆರ್​ಎಫ್​ಸಿ: ಡಿಸೆಂಬರ್‌ನಲ್ಲಿ ಈ ಕಂಪನಿಯ ಷೇರು ಶೇ 12.5 ​​ಕುಸಿಯಿತು. ಆದರೆ ಜನವರಿ 2024ರಲ್ಲಿ ಶೇ 63 ಕ್ಕಿಂತ ಹೆಚ್ಚು ಗಳಿಸಿದೆ. ಇದೇ ಜ.23ಕ್ಕೆ ತನ್ನ ದಾಖಲೆಯ 192.80ರೂ.ಗೆ ಮುಟ್ಟಿದೆ. 2023ರ ಮಾರ್ಚ್ 28ರಂದು ಈ ಷೇರು ಮೌಲ್ಯವು 25.40ರೂ.ಗೆ ತಲುಪಿತ್ತು. ಅಂದರೆ 52 ವಾರದಲ್ಲಿಯೇ ಅತಿ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ಇದೀಗ ಇದರ ಷೇರು ಮೌಲ್ಯ ಮತ್ತೆ ಪುಟಿದೆದ್ದಿದೆ. ಇಲ್ಲಿಯವರೆಗೆ ಶೇ. 65ರಷ್ಟು ಹೆಚ್ಚಾಗಿದೆ. ಈ ಕಂಪನಿಯು ರೈಲ್ವೆ ಯೋಜನೆಗಳಿಗೆ ಹಣಕಾಸು ಒದಗಿಸುತ್ತದೆ. ಕಳೆದ ವಾರ ಅದರ ಮಾರುಕಟ್ಟೆ ಬಂಡವಾಳೀಕರಣವು ಮೊದಲ ಬಾರಿಗೆ ರೂ. 2 ಲಕ್ಷ ಕೋಟಿ ದಾಟಿದೆ.
    ಆರ್‌ವಿಎನ್‌ಎಲ್‌ : ಡಿಸೆಂಬರ್‌ನಲ್ಲಿ ಆರ್‌ವಿಎನ್‌ಎಲ್‌ (ರೈಲ್ ವಿಕಾಸ್ ನಿಗಮ್ ಲಿಮಿಟೆಡ್) ಷೇರು ಶೇ 10.5 ಗಳಿಸಿತು. ಈ ಜನವರಿಯಲ್ಲಿ ರೈಲ್ವೆ ಸ್ಟಾಕ್ ಶೇ. 59 ಗಳಿಸಿದೆ. ಕಳೆದ 1 ವರ್ಷದಲ್ಲಿ ಇದು ಶೇ 317 ಕ್ಕಿಂತ ಹೆಚ್ಚು ಗಳಿಸಿದೆ. ಜನವರಿ 23, 2024 ರಂದು ಸ್ಟಾಕ್ ತನ್ನ ದಾಖಲೆಯ ಎತ್ತರವನ್ನು 345.50ರೂ. ಮುಟ್ಟಿದೆ. ಈ ಕಂಪೆನಿ ರೈಲು ಮೂಲಸೌಕರ್ಯ ಯೋಜನೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.

    ಒರಾಕಲ್ ಫೈನಾನ್ಷಿಯಲ್ ಸರ್ವಿಸಸ್: ಕಳೆದ ಡಿಸೆಂಬರ್‌ನಲ್ಲಿ ಕೇವಲ ಶೇ. 5 ಮತ್ತು ನವೆಂಬರ್‌ನಲ್ಲಿ ಶೇ. 3.4 ರಷ್ಟು ಮಾತ್ರ ಲಾಭಗಳಿಸಿತ್ತು. ಈ ವರ್ಷ ಇಲ್ಲಿಯವರೆಗೆ ಈ ಕಂಪನಿಯ ಷೇರುಗಳು ಶೇ. 54 ಕ್ಕಿಂತ ಹೆಚ್ಚಾಗಿದೆ. ಕಳೆದ 1 ವರ್ಷದಲ್ಲಿ ಈ ಸ್ಟಾಕ್ ಶೇ. 120 ಕ್ಕಿಂತ ಹೆಚ್ಚು ಗಳಿಸಿದೆ. ಇದೇ ಜನವರಿ 19ಕ್ಕೆ ಸ್ಟಾಕ್ ತನ್ನ ದಾಖಲೆಯ ಎತ್ತರ ಅಂದರೆ 7,173.40ರೂ. ಮುಟ್ಟಿದೆ. ಇದು ಸಾಫ್ಟ್‌ವೇರ್ ಕಂಪನಿಯಾಗಿದೆ.

    ಕಾಮಧೇನು : ಡಿಸೆಂಬರ್‌ನಲ್ಲಿ ಈ ಕಂಪೆನಿ ಶೇ. 27ರಷ್ಟು ಲಾಭ ದಾಖಲಿಸಿದೆ. ಈ ವರ್ಷ ಇಲ್ಲಿಯವರೆಗಿನ ಒಟ್ಟು ಲಾಭ ಶೇ 55. ಕಳೆದ 1 ವರ್ಷದಲ್ಲಿ ಈ ಷೇರು ಶೇ. 40.5 ಗಳಿಸಿದೆ. ಈ ವರ್ಷ ಜನವರಿ 23ಕ್ಕೆ ಸ್ಟಾಕ್ ತನ್ನ ದಾಖಲೆಯ ಗಳಿಕೆ 620.05ರೂ.ಕ್ಕೆ ತಲುಪಿದೆ. ಕಾಮಧೇನು ಲಿಮಿಟೆಡ್ ಥರ್ಮೋ ಮೆಕ್ಯಾನಿಕಲ್ ಟ್ರೀಟ್‌ಮೆಂಟ್ (ಟೊಎಂಟಿ) ಬಾರ್‌ಗಳು, ಸ್ಟ್ರಕ್ಚರಲ್ ಸ್ಟೀಲ್, ಪೇಂಟ್‌ಗಳು ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ, ಬ್ರ್ಯಾಂಡಿಂಗ್ ಮತ್ತು ವಿತರಣೆಯಲ್ಲಿ ಕಾಮಧೇನು ಬ್ರಾಂಡ್ ಹೆಸರಿನಲ್ಲಿ ತೊಡಗಿಸಿಕೊಂಡಿದೆ.

    IND vs ENG: ಎರಡು ಟೆಸ್ಟ್​ ಪಂದ್ಯಗಳಿಗೆ ಆರ್‌ಸಿಬಿ ಈ ಸ್ಟಾರ್ ಆಟಗಾರ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts