More

    ಅಮೆರಿಕ ಅಧ್ಯಕ್ಷೀಯ ಚುನಾವಣೆ: ಅಯೋವಾ ಬಳಿಕ ನ್ಯೂ ಹ್ಯಾಂಪ್‌ಶೈರ್​ನಲ್ಲೂ ಟ್ರಂಪ್​ ಗೆಲುವು

    ವಾಷಿಂಗ್ಟನ್​: ಮುಂಬರುವ ಅಧ್ಯಕ್ಷೀಯ ಚುನಾವಣೆಗು ಮುನ್ನ ಅಮೆರಿಕದಲ್ಲಿ ಪ್ರಾಥಮಿಕ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿದ್ದು, ರಿಪಬ್ಲಿಕನ್​ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಗೆಲುವಿನ ನಾಗಾಲಾಟ ಮುಂದುವರಿಸಿದ್ದಾರೆ.

    ರಿಪಬ್ಲಿಕನ್​ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನ್ಯೂ ಹ್ಯಾಂಪ್​ಶೈರ್​ ಕ್ಷೇತ್ರದ ಪ್ರಾಥಮಿಕ ಚುನಾವಣೆಯಲ್ಲಿ ಟ್ರಂಪ್​ ಗೆಲುವು ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಯೋವಾ ಕ್ಷೇತ್ರದಲ್ಲಿ ಟ್ರಂಪ್​ ಗೆಲುವು ದಾಖಲಿಸಿದ್ದರು. ಇನ್ನೊಂದೆಡೆ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡೆನ್​ ಸಹ ಡೆಮಾಕ್ರೆಟಿಕ್​ ಪಕ್ಷದಿಂದ ಗೆಲುವು ದಾಖಲಿಸಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಬೈಡೆನ್​ ಅವರು ಯಾವುದೇ ಪ್ರಚಾರ ಮಾಡದೆಯೂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

    ಅಯೋವಾ ಕ್ಷೇತ್ರದಲ್ಲಿ ಟ್ರಂಪ್​ ಗೆಲುವು ಸಾಧಿಸುತ್ತಿದ್ದಂತೆ ಭಾರತೀಯ ಮೂಲದ ವಿವೇಕ್​ ರಾಮಸ್ವಾಮಿ ಸ್ಪರ್ಧೆಯಿಂದ ಹಿಂದೆ ಸರಿದು ಟ್ರಂಪ್​ಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದರು. ಇದೀಗ ನ್ಯೂ ಹ್ಯಾಂಪ್​ಶೈರ್​ ಕ್ಷೇತ್ರದಲ್ಲಿ ನಿಕ್ಕಿ ಹ್ಯಾಲಿ ತೀವ್ರ ಹಿನ್ನಡೆ ಅನುಭವಿಸಿದ್ದು, ಟ್ರಂಪ್​ ಭರ್ಜರಿ ಜಯ ದಾಖಲಿಸುವ ಮೂಲಕ ರಿಪಬ್ಲಿಕನ್​ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವಲ್ಲಿ ಮುಂಚೂಣಿಯಲ್ಲಿದ್ದಾರೆ.

    ಪ್ರಾಥಮಿಕ ಚುನಾವಣೆಯಲ್ಲಿ ಟ್ರಂಪ್​ ಅವರಿಗೆ ಇದು ಎರಡನೇ ಗೆಲುವಾಗಿದ್ದು, ಇದೇ ವರ್ಷ ನವೆಂಬರ್​ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್​ ಮತ್ತೊಮ್ಮೆ ಬೈಡೆನ್​ ಎದುರು ಮುಖಾಮುಖಿಯಾಗಲಿದೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಕೆರೊಲಿನಾದ ಮಾಜಿ ಗವರ್ನರ್​ ನಿಕ್ಕಿ ಹಾಲಿ ನ್ಯೂ ಹ್ಯಾಂಪ್​ಶೈರ್​ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದರು. ಹ್ಯಾಲಿ ಅವರ 46.6 ಶೇಕಡವಾರು ಮತಗಳಿಗೆ ಹೋಲಿಕೆ ಮಾಡಿದರೆ, ಟ್ರಂಪ್​ 52.3 ರಷ್ಟು ಮತಗಳೊಂದಿಗೆ 14ರಷ್ಟು ಹೆಚ್ಚುವರಿ ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಾನಿಯಾ ಪಡೆದ ಜೀವನಾಂಶವೆಷ್ಟು? ಭಾರತೀಯ ಮಹಿಳೆಯ ತಾಕತ್ತು ಅಂದ್ರೆ ಇದು! ಮಲಿಕ್​ಗೆ ಮುಖಭಂಗ

    ಶ್ರೀದೇವಿಯ ಆ ಫೋಟೋ ನೋಡಿ ಗಳಗಳನೆ ಅತ್ತ ಸೆನ್ಸೇಷನಲ್ ಡೈರೆಕ್ಟರ್; ಅಂತದ್ದೇನಿದೆ ಎಂದ್ರು ನೆಟ್ಟಿಗರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts