More

    ಮುಗ್ಗರಿಸಿದ ಷೇರುಪೇಟೆ: ಸೆನ್ಸೆಕ್ಸ್‌, ನಿಫ್ಟಿ ಇಳಿಕೆ – ಭಾರಿ ಹೊಡೆತ ನೀಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌ ತ್ರೈಮಾಸಿಕ ಆದಾಯ ವರದಿ

    ಮುಂಬೈ: ಭಾರತದ ಷೇರುಪೇಟೆಯಲ್ಲಿ ಭಾರಿ ತಲ್ಲಣ ಉಂಟಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ಶೇ 6 ರಷ್ಟು ಕುಸಿತು ಕಂಡಿದ್ದು, ಷೇರುಪೇಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಭಾರಿ ಇಳಿಕೆ ಕಂಡಿವೆ. ಇವೆರಡೂ ಸೂಚ್ಯಂಕಗಳು ಶೇ.1 ರಷ್ಟು ಇಳಿಕೆ ಕಂಡಿವೆ. ಇದರ ನಡುವೆ ಚೀನಾದ ತ್ರೈಮಾಸಿಕ ಆದಾಯ ವರದಿ ಕೂಡ ನಿರೀಕ್ಷೆಯ ಮಟ್ಟ ತಲುಪದೇ ಇರುವುದು ಏಷ್ಯಾದ ಷೇರುಗಳು ಸಹ ಕುಸಿತ ಕಂಡಿವೆ.

    ಮಂಗಳವಾರದ(ಜ.17) ಷೇರು ಮಾರುಕಟ್ಟೆ ವಹಿವಾಟು ಆರಂಭವಾದ ನಂತರ ಗಿಫ್ಟ್‌ ನಿಫ್ಟಿಯು 21,400 ಕ್ಕೆ ತಲುಪುವ ಮೂಲಕ ವಹಿವಾಟು ಆರಂಭಿಸಿದೆ. ಸೋಮವಾರ ಮುಕ್ತಾಯ ವೇಳೆಗೆ 22,025 ರಷ್ಟಿದ್ದು ಮಂಗಳವಾರ ಭಾರಿ ಕುಸಿತ ಅನುಭವಿಸಿದೆ.

    ಇದನ್ನೂ ಓದಿ: ‘ಸರ್ಕಾರಿ ಬಂಗಲೆಯನ್ನು ಕೂಡಲೇ ತೆರವು ಮಾಡಿ’: ಕೇಂದ್ರದಿಂದ ಮಹುವಾ ಮೊಯಿತ್ರಾಗೆ ನೋಟಿಸ್ ಜಾರಿ

    ಸೆನ್ಸೆಕ್ಸ್ 199.17 ಅಂಕಗಳ ಕುಸಿತದೊಂದಿಗೆ 73,128.77 ಕ್ಕೆ ತಲುಪಿದರೆ, ನಿಫ್ಟಿ 50 65.15 ಅಂಕ ಅಥವಾ ಶೇ 0.29 ನಷ್ಟು ಕಡಿಮೆಯಾಗಿ 22,032.30 ಕ್ಕೆ ಸ್ಥಿರವಾಗಿದೆ.

    ಎಚ್‌ಡಿಎಫ್‌ಸಿ ಷೇರುಗಳ ಜೊತೆಗೆ ಆಕ್ಸಿಸ್‌, ಬ್ಯಾಂಕ್‌ ಟಾಟಾ ಸ್ಟೀಲ್‌, ಕೋಟಕ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಟಾಟಾ ಮೋಟಾರ್ಸ್‌ ಸಹ ನಷ್ಟ ಕಂಡಿವೆ.
    ಟಿಸಿಎಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಇನ್ಫೋಸಿಸ್‌, ಟೆಕ್‌ ಮಹಿಂದ್ರಾ ಹಾಗೂ ಎಚ್‌ಸಿಎಲ್‌ ಟೆಕ್‌ ಲಾಭ ಕಂಡ ಕಂಪನಿಗಳಾಗಿವೆ.

    ಏಷ್ಯನ್ ಪೇಂಟ್ಸ್, ಎಲ್‌ಅಂಡ್‌ಟ್ರಿ ಮೈಂಡ್‌ ಟ್ರೀ, ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಕಂಪನಿ, ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್, ಸ್ಟಾರ್ ಹೌಸಿಂಗ್ ಫೈನಾನ್ಸ್, ಗಣೇಶ್ ಹೌಸಿಂಗ್ ಕಾರ್ಪೊರೇಷನ್, ಮಷಿಪ್ ಟೆಕ್ನಾಲಜೀಸ್, ಅಲೋಕ್ ಇಂಡಸ್ಟ್ರೀಸ್, ಒರಾಕಲ್ ಫೈನಾನ್ಷಿಯಲ್ ಸರ್ವಿಸಸ್, ಹಿಂದೂಸ್ತಾನ್ ಮೀಡಿಯಾ ವೆಂಚರ್ಸ್, ಐಐಎಫ್‌ಎಲ್‌ ಫೈನಾನ್ಸ್, ಸ್ಪೆಷಾಲಿಟಿ ರೆಸ್ಟೋರೆಂಟ್‌ಗಳು, ಸೋಮ್ ಡಿಸ್ಟಿಲರೀಸ್ ಮತ್ತು ಬ್ರೂವರೀಸ್, ಮತ್ತು ಸ್ಟೀಲ್ ಸ್ಟ್ರಿಪ್ಸ್ ವೀಲ್ಸ್‌ ಈ ಕಂಪನಿಗಳು ಮಂಗಳವಾರ ತಮ್ಮ ತ್ರೈಮಾಸಿಕ ಆದಾಯ ವರದಿಯನ್ನು ಬಿಡುಗಡೆ ಮಾಡಲಿವೆ.

    ಭಾರತದ ಷೇರುಪೇಟೆಯಲ್ಲಿ ಜ.17 ಮಂದ ವಹಿವಾಟು ಆರಂಭವಾಗುವ ಸಾಧ್ಯತೆ ಕಾಣುತ್ತಿದೆ. ಚೀನಾದ ತ್ರೈಮಾಸಿಕ ಆದಾಯ ಕುಸಿತವು ಏಷ್ಯಾದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದ್ದು, ಇದರಿಂದ ಭಾರತದ ಮಾರುಕಟ್ಟೆಯಲ್ಲೂ ತಲ್ಲಣ ಉಂಟಾಗಿದೆ.

    ಸಮಗ್ರವಾಗಿ ಮಹಿಳೆಯರ ಏಳಿಗೆಗಾಗಿ ಬಿಜೆಪಿ ದುಡಿಯುತ್ತಿದೆ|ವಿಜಯವಾಣಿ ಡಿಜಿಟಲ್ | ಮಾಳವಿಕಾ ಅವಿನಾಶ್​ ಜತೆ ಫೇಸ್​ ಟು ಫೇಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts