More

    ಪಾತಾಳಕ್ಕೆ ಕುಸಿದಿರೋ ದೇಶದ ಆರ್ಥಿಕತೆ ಮೇಲೆತ್ತಲು ಕರ್ನಾಟಕ ಸೇರಿದಂತೆ 5 ರಾಜ್ಯಗಳೇ ಆಧಾರ!

    ನವದೆಹಲಿ: ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಪೈಕಿ ದೇಶದ 5 ಪ್ರಮುಖ ರಾಜ್ಯಗಳು ಶೇ. 27 ರಷ್ಟು ಕೊಡುಗೆ ನೀಡುತ್ತಿದ್ದು, ಕರೊನಾ ವೈರಸ್​ ಮಹಾಮಾರಿಯಿಂದ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಗೆ ಚೇತರಿಕೆ ತುಂಬಲು ಮುಂಚೂಣಿಯ ಪಾತ್ರವನ್ನು ವಹಿಸಲಿವೆ ಎಂದು ಸಂಯೋಜಿತ ಎಲಾರಾ ಸೆಕ್ಯುರಿಟಿ ಕಂಪನಿ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

    ಇದನ್ನೂ ಓದಿ: ಚೆನ್ನೈನಲ್ಲಿನ್ನು ಕ್ಷೌರ ಮಾಡಿಸಲು ಆಧಾರ್ ಕಡ್ಡಾಯ..!

    ಕೇರಳ, ಪಂಜಾಬ್​, ತಮಿಳುನಾಡು, ಹರಿಯಾಣ ಮತ್ತು ಕರ್ನಾಟಕ ಈಗಾಗಲೇ ಕರೊನಾ ವಿರುದ್ಧ ಗೆದ್ದು, ಚಟುವಟಿಕೆ ಆರಂಭಿಸಿವೆ. ಈ ರಾಜ್ಯಗಳಲ್ಲಿನ ವಿದ್ಯುತ್​ ಬಳಕೆ, ಟ್ರಾಫಿಕ್​ ಚಲನೆ ಸಗಟು ಮಾರುಕಟ್ಟೆಗಳಿಗೆ ಬರುವ ಕೃಷಿ ಉತ್ಪನ್ನಗಳು ಮತ್ತು ಗೂಗಲ್​ ಮೊಬಿಲಿಟಿ ಆಧಾರದ ಮೇಲೆ ವಿಶ್ಲೇಷಣೆ ನಡೆಸಿದ್ದು, ಈ ಐದು ರಾಜ್ಯಗಳು ದೇಶ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಎಂದು ಎಲಾ ಸೆಕ್ಯುರಿಟಿ ಕಂಪನಿಯ ಅರ್ಥಶಾಸ್ತ್ರಜ್ಞೆ ಗರೀಮಾ ಕಪೂರ್​ ಅವರು ನೋಟ್​ ಒಂದು ಬರೆದಿದ್ದಾರೆ.

    ಮಹಾರಾಷ್ಟ್ರ ಮತ್ತು ಗುಜಾರತ್​ ಸೇರಿದಂತೆ ಕೆಲ ಕೈಗಾರೀಕೃತ ರಾಜ್ಯಗಳು ಕರೊನಾ ವೈರಸ್​ ತಡೆಗಟ್ಟುವಲ್ಲಿ ಇನ್ನೂ ಹಿಂದು ಉಳಿದಿದ್ದು, ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಇವುಗಳ ಕೊಡುಗೆ ಪರಿಗಣೆಗೆ ಬರುವುದಿಲ್ಲ ಎಂದಿದ್ದಾರೆ.

    ರಾಷ್ಟ್ರಾದ್ಯಂತ ಹೇರಲಾಗಿರುವ ಲಾಕ್​ಡೌನ್​ ಅನ್ನು ಸರ್ಕಾರ ಹಂತ ಹಂತವಾಗಿ ಮರುಸ್ಥಾಪಿಸಲು ನಿರ್ಧರಿಸಿದೆ. ವೈರಸ್​ ನಿಯಂತ್ರಣಕ್ಕೆ ಬಂದಿರುವ ಏರಿಯಾಗಳಲ್ಲಿ ಜೂನ್​ 8ರಿಂದ ಶಾಪಿಂಗ್​ ಮಾಲ್ಸ್​, ರೆಸ್ಟೋರೆಂಟ್​ ಮತ್ತು ದೇವಸ್ಥಾನಗಳು ತೆರೆಯಲಿವೆ.

    ಇದನ್ನೂ ಓದಿ: ನರಸೀಪುರ ಪೊಲೀಸ್ ಠಾಣೆಯಲ್ಲೇ ಕಳ್ಳತನ?: 58 ಸಜೀವ ಬುಲೆಟ್​ಗಳು ನಾಪತ್ತೆ!​

    ರಾಷ್ಟ್ರದ ಆರ್ಥಿಕತೆಯ ಉತ್ತೇಜನಕ್ಕಾಗಿ ಇರುವ ಉತ್ತಮ ವಿಧಾನವೆಂದರೆ ಸಾಧಾರಣ ಆರ್ಥಿಕ ಚಟುವಟಿಕೆಯನ್ನು ಪುನರಾರಂಭಿಸುವುದು. ಹೀಗಾದಲ್ಲಿ ದೇಶವು ಆರ್ಥಿಕ ಪ್ರಗತಿಗೆ ಸಾಕ್ಷಿಯಾಗಲಿದೆ. ಆದರೆ, ಅದು ಸರಳವಾಗಿರಲಿದೆ ಎಂದು ಕಪೂರ್​ ತಿಳಿಸಿದ್ದಾರೆ.

    ಲಾಕ್​ಡೌನ್​ ಸಮಯದಲ್ಲಿ ಗೂಗಲ್​ನಲ್ಲಿ ಬಳಕೆದಾರರು ಹುಡುಕಾಡಿರುವುದನ್ನು ಗಮನಿಸಿದರೆ, ಬಳಕೆದಾರರು ಹೊಸ ರೀತಿಯ ಜೀವನ ಹಾದಿಗೆ ಬದಲಾಗಿದ್ದಾರೆಯೇ ಎಂಬ ಸೂಚನೆ ಸಿಗುತ್ತಿದೆ. ಸಲೂನ್​ ಸೇವೆ, ಏರ್​ ಕಂಡೀಷನ್​, ವಿಮಾನಯಾನ, ಬೈಕ್ಸ್​, ವ್ಯಾಕ್ಯೂಮ್​ ಕ್ಲೀನರ್​ ಮತ್ತು ವಾಷಿಂಗ್​ ಮೆಶಿನ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂಬುದನ್ನು ತೋರಿಸಿದೆ. ಅಲ್ಲದೇ ಮೊದಲ ಲಾಕ್​ಡೌನ್​ ಘೋಷಣೆಯಾದಾಗ ಗಾಬರಿಗೊಂಡ ಜನತೆ ಕಿರಾಣಿ ವಸ್ತುಗಳು, ಔಷಧ ಹಾಗೂ ಲಿಕ್ವಿಡ್​ ಸೋಪುಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ. ಲಾಕ್​ಡೌನ್​ ಸಮಯದಲ್ಲೂ ಸಹ ಜನರು ಇಯರ್​ ಫೋನ್​, ಹೇರ್​ ಆಯಿಲ್​, ಲ್ಯಾಪ್​ಟಾಪ್​, ಮೊಬೈಲ್​ ಫೋನ್ಸ್​, ಜುವೆಲ್ಲರಿ, ಗೊಂಬೆಗಳು ಮತ್ತು ಮೈಕ್ರೋವೇವ್​ ಓವನ್​ ನೋಡುವುದನ್ನು ಬಿಟ್ಟುಕೊಟ್ಟಿಲ್ಲ ಎಂಬುದು ತಿಳಿದುಬಂದಿದೆ ಎಂದು ಕಪೂರ್​ ಹೇಳಿದ್ದಾರೆ. (ಏಜೆನ್ಸೀಸ್​)

    ‘ಲಾಕ್​ಡೌನ್​ ತೆರವುಗೊಳಿಸುತ್ತೇವೆ, ಕರೊನಾದೊಂದಿಗೇ ಬದುಕೋಣ…’ಎಂದ ಪಾಕ್​ ಪ್ರಧಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts