More

    ಕಣ್ಣಿಗೊಂದು ಸವಾಲ್: ಜಿಂಕೆ ಬೇಟೆಗೆ ಹೊಂಚು ಹಾಕಿರೋ ಪರ್ವತ ಸಿಂಹ ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!​

    ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: ಹಣದ ಹೊಳೆ ಹರಿಯುತ್ತೆಂದು ಆಮಿಷವೊಡ್ಡಿ ರಟ್ಟಿನ ಹಾಳೆ ಕೊಟ್ಟು ವಂಚನೆ!

    ಕೆಲವು ಚಿತ್ರಗಳಲ್ಲಿರುವ ವಸ್ತು ಅಥವಾ ಪ್ರಾಣಿಗಳನ್ನು ಕೆಲವೊಮ್ಮೆ ಸುಲಭವಾಗಿ ಗುರುತಿಸಬಹುದು. ಇನ್ನು ಕೆಲವೊಮ್ಮೆ ಗುರುತಿಸಲು ಪರದಾಡಿ ತಲೆ ಕೆರೆದುಕೊಳ್ಳುವ ಪರಿಸ್ಥಿತಿಯು ಎದುರಾಗಬಹುದು. ಆದರೂ ಪಜಲ್​ ಮಾತ್ರ ಒಳ್ಳೆಯ ಟೈಂಪಾಸ್​ ಗೇಮ್​ ಎನ್ನುವುದರಲ್ಲಿ ಸಂಶಯವೇ ಇಲ್ಲ.

    ಇದೀಗ ಅಮೆರಿಕದ ರಿಯಾ ಮೊರ ರಾಷ್ಟ್ರೀಯ ವನ್ಯಜೀವಿ ಸಂರಕ್ಷಣೆ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಜಿಂಕೆ ಬೇಟೆಗೆ ಹೊಂಚು ಹಾಕಿ ಕುಳಿತಿರುವ ಪರ್ವತ ಸಿಂಹದ ಫೋಟೋವನ್ನು ಪೋಸ್ಟ್​ ಮಾಡಲಾಗಿದೆ. ಟ್ವಿಸ್ಟ್ ಏನೆಂದರೆ​ ಪೋಟೋವಿನ ನೇರ ದೃಶ್ಯದಲ್ಲಿ ಸಿಂಹವನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವೇನಲ್ಲ. ಸೂಕ್ಷ್ಮ ಕಣ್ಣಿನಿಂದ ನೋಡಿದಾಗಲೇ ಸಿಂಹ ಎಲ್ಲಿ ಅಡಗಿ ಕುಳಿತಿದೆ ಎಂಬುದು ಗೊತ್ತಾಗುವುದು.

    #WildlifeWednesday Take a moment today to search for the hidden mountain lion that is following this elk. How long did…

    Posted by Rio Mora National Wildlife Refuge on Wednesday, July 1, 2020

    ಅಂದಹಾಗೆ ಈ ಚಿತ್ರವನ್ನು 2019ರ ಅಕ್ಟೋಬರ್​ನಲ್ಲಿ ತೆಗೆಯಲಾಯಿತು. ಅರೋಯೋಗಳನ್ನು ಮರುಸ್ಥಾಪಿಸಿ ಯಶಸ್ಸನ್ನು ನೋಡುವ ಮೇಲ್ವಿಚಾರಣಾ ಯೋಜನೆಯ ಭಾಗವಾಗಿ ಈ ಚಿತ್ರವನ್ನು ಕ್ಲಿಕ್ಕಿಸಲಾಗಿದೆ. ಇದೀಗ ರಿಯಾ ಮೊರ ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಕೇಂದ್ರವು ಮತ್ತೊಮ್ಮೆ ತನ್ನ ಫೇಸ್​ಬುಕ್​ ಖಾತೆಯಲ್ಲಿ ಫೋಟೋ ಪೋಸ್ಟ್​ ಮಾಡಿ ಪರ್ವತ ಸಿಂಹವನ್ನು ಪತ್ತೆ ಹಚ್ಚುವಂತೆ ಸವಾಲು ಎಸೆದಿದೆ.

    ಇದನ್ನೂ ಓದಿ: VIDEO| PPE ಕಿಟ್​ ಧರಿಸಿ ಡ್ಯಾನ್ಸ್​ ಮಾಡಿದ ಲೇಡಿ ಡಾಕ್ಟರ್​ ಇವರೇ ನೋಡಿ…!

    ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, 10 ಸಾವಿರಕ್ಕೂ ಅಧಿಕ ಬಾರಿ ಶೇರ್​ ಆಗಿದೆ. ಸಾವಿರಾರು ಲೈಕ್ಸ್​ಗಳು ಹರಿದುಬಂದಿದ್ದು, ಅನೇಕ ನೆಟ್ಟಿಗರು ಬೆಟ್ಟದ ಸಿಂಹವನ್ನು ಪತ್ತೆ ಹಚ್ಚಿ ಕಾಮೆಂಟ್​ ಮಾಡುವಲ್ಲಿ ನಿರತರಾಗಿದ್ದಾರೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ, ಪತ್ತೆ ಹಚ್ಚಿದ್ರೆ ಕಮೆಂಟ್​ ಮಾಡುವುದನ್ನು ಮರೆಯಬೇಡಿ. (ಏಜೆನ್ಸೀಸ್​)

    ಕಣ್ಣಿಗೊಂದು ಸವಾಲ್: ಜಿಂಕೆ ಬೇಟೆಗೆ ಹೊಂಚು ಹಾಕಿರೋ ಪರ್ವತ ಸಿಂಹ ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!​

    ಖಾಸಗಿ ಆಸ್ಪತ್ರೆಗಳ ವಸೂಲಿ ಜೋರು: ದಿಗ್ವಿಜಯ ಸ್ಟಿಂಗ್​ನಲ್ಲಿ ಬಯಲಾಯ್ತು ಅಸಲಿಯತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts