More

    ಆಹಾರ ಕಿಟ್​ಗಾಗಿ ಬಂದು ಕಾಲ್ತುಳಿತಕ್ಕೆ ಸಿಕ್ಕರು

    ದಾವಣಗೆರೆ: ಆಹಾರ ಕಿಟ್​ ಪಡೆಯಲು ಬಂದಿದ್ದ ಜನತೆ ನಾ ಮುಂದು, ತಾ ಮುಂದು ಎಂಬಂತೆ ಒಮ್ಮೆಲೆ ನುಗ್ಗಿದ್ದರಿಂದ ವೃದ್ಧರು, ಮಹಿಳೆಯರು ತುಳಿತಕ್ಕೊಳಗಾದರು.

    ಜಗಳೂರು ಪಟ್ಟಣದ ತರಳಬಾಳು ಕೇಂದ್ರದ ಮುಖ್ಯದ್ವಾರದಲ್ಲಿ ಮಂಗಳವಾರ ಅರಸಿಕೆರೆ ಹೋಬಳಿ ಕಲ್ಲುಗಣಿ ಕ್ರಷರ್ ಮಾಲೀಕರು ಆಹಾರ ಕಿಟ್​ಗಳನ್ನು ನೀಡಿದ್ದರು. ಇದನ್ನು ಪಡೆಯಲು ಬಂದಿದ್ದ ಸುತ್ತಮುತ್ತಲ ಸಾರ್ವಜನಿಕರ ನಡುವೆ ನೂಕುನುಗ್ಗಲು ಏರ್ಪಟ್ಟಿತು.

    ಇದನ್ನೂ ಓದಿರಿ ಚೆನ್ನೈನಲ್ಲಿನ್ನು ಕ್ಷೌರ ಮಾಡಿಸಲು ಆಧಾರ್ ಕಡ್ಡಾಯ..!

    ಆಹಾರ್​ ಕಿಟ್​ ವಿತರಿಸಲು ಸಂಸದ ಜಿ.ಎಂ.ಸಿದ್ದೇಶ್ವರ್ ಮತ್ತು ಶಾಸಕ ಎಸ್.ವಿ. ರಾಮಚಂದ್ರ ಅವರ ಬರುವಿಕೆ ತಡವಾಗಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲರಾದರು. ಒಮ್ಮೆಲೆ ಗೇಟ್ ತೆರೆದಿದ್ದರಿಂದ ನೂಕುನುಗ್ಗಲು ಏರ್ಪಟ್ಟಿತು. ಗೇಟ್​ ಮುಂದೆ ಆರಂಭದಲ್ಲಿ ನಿಂತಿದ್ದ ವೃದ್ಧರು ಕಾಲ್ತುಳಿತಕ್ಕೆ ಸಿಕ್ಕರು. ಸ್ಥಳದಲ್ಲೇ ಇದ್ದ ಕೆಲವರು ಮಧ್ಯ ಪ್ರವೇಶಿಸಿ ಅವರನ್ನು ರಕ್ಷಿಸಿದರು.

    ಇದನ್ನೂ ಓದಿರಿ ಬಾಲಿವುಡ್‌ನ ‘ಗಾಸಿಪ್ ಕ್ವೀನ್’ ಯಾರು ಗೊತ್ತಾ? ಅನನ್ಯ ಪಾಂಡೆ ಹೇಳುತ್ತಾರೆ ಕೇಳಿ …

    ಟ್ರ್ಯಾಕ್ಟರ್​ ಸ್ಟೇರಿಂಗ್​ ಹಿಡಿದ ಎಚ್​ಡಿಕೆ..!

    ಟ್ರ್ಯಾಕ್ಟರ್​ ಸ್ಟೇರಿಂಗ್​ ಹಿಡಿದ ಎಚ್​ಡಿಕೆ..!ಚನ್ನಪಟ್ಟಣ ತಾಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಮಂಗಳವಾರ (ಇಂದು) ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಕೃಷಿ ಯಂತ್ರೋಪಕರಣ ಬಾಡಿಗೆ ನೀಡುವ ಸೇವಾ ಕೇಂದ್ರ ಉದ್ಘಾಟಿಸಿದರು. 'ನಾನೂ ರೈತ ಬ್ರದರ್, ಈ ಹಿಂದೆ ಹೊಲ ಉಳುಮೆ ಮಾಡುತ್ತಿದೆ. ಇತ್ತೀಚೆಗೆ ಮರೆತಿದ್ದೇನೆ ಅಷ್ಟೆ' ಎನ್ನುತ್ತಲೇ ಅವರು ಟ್ರ್ಯಾಕ್ಟರ್ ಮೂವ್ ಮಾಡಿದ್ರು.#Tractor #HDKumaraswamy #Channapatna #Agricultural #Machinery #Rental #Service

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜೂನ್ 2, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts