More

    ರೈತರಿಗಿಂತ ದೊಡ್ಡ ವಿಜ್ಞಾನಿ ಮತ್ತೊಬ್ಬರಿಲ್ಲ: ರೈತ ಜ್ಞಾನೇಶ್

    ಶಿವಮೊಗ್ಗ: ಜಗತ್ತಿನಲ್ಲಿ ರೈತರಿಗಿಂತ ದೊಡ್ಡ ವಿಜ್ಞಾನಿ ಮತ್ತೊಬ್ಬರು ಇರಲು ಸಾಧ್ಯವೇ ಇಲ್ಲ. ಸಾಕಷ್ಟು ಅನುಭವ, ಮಾಹಿತಿ ಇರುವ ರೈತರು ರಸಗೊಬ್ಬರ, ಔಷಧಕ್ಕಾಗಿ ಸರ್ಕಾರದ ಮುಂದೆ ನಿಲ್ಲುತ್ತಿರುವುದು ವಿಪರ್ಯಾಸ ಎಂದು ಜ್ಞಾನೇಶ್ ಬೇಸರ ವ್ಯಕ್ತಪಡಿಸಿದರು.

    ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ರೈತ ದಸರಾ ಸಮಿತಿ, ಶಿಮುಲ್, ಕೃಷಿ ಇಲಾಖೆ ಸಹಕಾರದಲ್ಲಿ ಬುಧವಾರ ರೈತ ದಸರಾ ಉದ್ಘಾಟಿಸಿ ಮಾತನಾಡಿ, ಸಾವಯಕ ಕೃಷಿಗೆ ಒತ್ತು ನೀಡುವ ಮೂಲಕ ಔಷಧ, ರಸಾಯನಿಕ ಗೊಬ್ಬರಗಳನ್ನು ಜಮೀನುಗಳಿಂದ ದೂರ ಇಡಬೇಕು. ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕು. ಯಾವ ಕಾಲಕ್ಕೆ ಯಾವ ಬೆಳೆಯಬೇಕು ಎಂಬುದು ರೈತರಿಗೆ ಗೊತ್ತಿರುತ್ತದೆ. ಆದರೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿಲ್ಲ. ಆಲೋಚನಾ ಶಕ್ತಿಯನ್ನು ಕಳೆದುಕೊಂಡಿದ್ದು ಯಾವುದೋ ಒಂದು ವರ್ಷ ಉತ್ತಮ ದರ ಸಿಕ್ಕ ಬೆಳೆಗಳತ್ತ ರೈತರು ವಾಲುತ್ತಾರೆ. ಇದು ಸರಿಯಾದ ವಿಧಾನವಲ್ಲ ಎಂದರು.

    ಜರ್ಸಿ ಹಸು ವಿಷ ಕನ್ಯೆ
    ಎಚ್‌ಎಫ್ ಮತ್ತು ಜರ್ಸಿ ಹಸುಗಳು ವಿಷ ಕನ್ಯೆಯರಿದ್ದಂತೆ. ಇದನ್ನು ರೈತರು, ಹೈನುಗಾರರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಪ್ರಗತಿಪರ ರೈತ ಜ್ಞಾನೇಶ್ ಹೇಳಿದರು. ದೇಸಿ ತಳಿ ಹಸು ಸಾಕಣೆ ಸ್ಥಗಿತಗೊಂಡಿದೆ. ದೇಸಿ ಹಸು ಒಂದು ಅಥವಾ ಅರ್ಧ ಲೀಟರ್ ಹಾಲು ಕೊಡುತ್ತೆ ಅಂತ ಎಚ್‌ಎ್-ಜರ್ಸಿ ಹಿಂದೆ ಬಿದ್ದಿದ್ದೇವೆ. ಆದರೆ ಅವುಗಳನ್ನು ಸಾಕಲು ದುಬಾರಿ ಹಣ ವ್ಯಯಿಸುತ್ತಿದ್ದಾರೆ. ದೇಶದ ಸಂಸ್ಕೃತಿ ಹೊಡೆದುಹಾಕಲು ಮತ್ತು ಸಂಸ್ಕೃತಿಯನ್ನು ನಾಶ ಮಾಡಲು ವಿದೇಶಿ ತಳಿ ಹಸುಗಳೇ ಕಾರಣವಾಗಿವೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts