More

    ಅಯ್ಯಪ್ಪಸ್ವಾಮಿ ಭಕ್ತರ ಬೆರಗು ಮೂಡಿಸಿದ ಅಯ್ಯಪ್ಪೋತ್ಸವ

    ಶಿವಮೊಗ್ಗ: ರೋಜಾ ಷಣ್ಮುಗಂ ಗುರುಸ್ವಾಮಿ ಅವರ ಜನ್ಮದಿನದ ನಿಮಿತ್ತ ರೋಜಾಗುರುಜಿ ಶಿಷ್ಯವೃಂದದಿಂದ ಭಾನುವಾರ ಕುವೆಂಪು ರಂಗಮಂದಿರದಲ್ಲಿ ನಡೆದ ಅಯ್ಯಪ್ಪೋತ್ಸವವು ನಗರದ ಅಯ್ಯಪ್ಪ ಸ್ವಾಮಿ ಭಕ್ತರನ್ನು ಬೆರಗುಗೊಳಿಸಿತು.
    ಅಯ್ಯಪ್ಪ ಸ್ವಾಮಿ ಭಕ್ತರಲ್ಲಿ ಬಹುತೇಕರಿಗೆ ಶಬರಿಮಲೆಗೆ ತೆರಳಿ ದರ್ಶನ ಮಾಡಲು ಮತ್ತು ಸೇವೆ ಸಲ್ಲಿಸಲು ಆಗುವುದಿಲ್ಲ. ಆ ಕಾರಣದಿಂದ ಕುವೆಂಪು ರಂಗಮಂದಿರದಲ್ಲಿ ಶ್ರೀ ರೋಜಾಗುರುಜಿ ಅವರ ಶಿಷ್ಯವೃಂದವು ವಿಶೇಷ ಪೂಜೆಗೆ ಅವಕಾಶವನ್ನು ಕಲ್ಪಿಸಿತ್ತು. ಅದರಲ್ಲೂ ಶಬರಿಮಲೆ ಮಾಲಿಕಾಪುರಂ ಮೇಲ್‌ಶಾಂತಿ ಸ್ಥಾನಕ್ಕೇರಿರುವ ಶಂಭು ನಂಬೂದರಿ ಅವರೇ ಆಗಮಿಸಿ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.
    ರಂಗಮಂದಿರದದಲ್ಲಿ ನಿರ್ಮಾಣಗೊಂಡಿದ್ದ ಭವ್ಯ ಮಂಟಪದಲ್ಲಿ ಶಂಭು ನಂಬೂದರಿ ಅವರು ವಿಶೇಷವಾಗಿ ಅಯ್ಯಪ್ಪ ಪೂಜೆ ನೆರವೇರಿಸಿದರು. ಅದಕ್ಕಾಗಿ ಹೊನ್ನಾಳಿಯಿಂದ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ತರಿಸಲಾಗಿತ್ತು. ಅದಕ್ಕೂ ಮುನ್ನ ಬೆಳಗ್ಗೆ ಪೂರ್ಣಕುಂಬ ಹೊತ್ತ ಮಹಿಳೆಯರು ಕಾಮಾಕ್ಷಿ ಬೀದಿ ವಿನಾಯಕ ದೇವಸ್ಥಾನದಿಂದ ಶಂಭು ನಂಬೂದರಿ ಅವರನ್ನು ಮೆರವಣಿಗೆ ಮೂಲಕ ಕುವೆಂಪು ರಂಗಮಂದಿರ ಕರೆತಂದರು. ಪೂಜಾ ಕಾರ್ಯಕ್ರಮದ ಬಳಿಕ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
    ಶಬರಿಮಲೆಯಿಂದ ತಂದ ಪ್ರಸಾದವನ್ನು ಅಯ್ಯಪ್ಪೋತ್ಸವದಲ್ಲಿ ಎಲ್ಲ ಭಕ್ತರಿಗೆ ವಿತರಿಸಲಾಯಿತು. ಇದೇ ವೇಳೆ ಹಿರಿಯ ಗುರುಸ್ವಾಮಿಗಳು ಹಾಗೂ ಕರೊನಾ ಸಂದರ್ಭದಲ್ಲಿ ಸಮಾಜಮುಖಿ ಕೆಲಸ ಮಾಡಿದವರನ್ನು ಸನ್ಮಾನಿಸಲಾಯಿತು. ಉತ್ಸವ ಸಮಿತಿ ಸಂಚಾಲಕ ಎನ್.ರಮೇಶ್, ರೋಜಾ ಷಣ್ಮುಗಂ ಗುರುಸ್ವಾಮಿಗಳ ಪುತ್ರ ಶಬರೀಷ್, ಪ್ರಮುಖರಾದ ಸುರೇಶ್, ಧರ್ಮಲಿಂಗಪ್ಪ ಮತ್ತಿತರರು ಅಯ್ಯಪೋತ್ಸವದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts