More

    ದೇಶಕ್ಕೆ ಇಬ್ಬರು ರಾಷ್ಟ್ರಪಿತರು… ಪ್ರಧಾನಿ ಮೋದಿ ನವಭಾರತದ ಪಿತಾಮಹ: ಅಮೃತಾ ಫಡ್ನವಿಸ್​ ಹೇಳಿಕೆ

    ನವದೆಹಲಿ: ದೇಶಕ್ಕೆ ಇಬ್ಬರು ರಾಷ್ಟ್ರಪಿತರು. ಅದರಲ್ಲಿ ಪ್ರಧಾನಿ ಮೋದಿ ನವಭಾರತದ ರಾಷ್ಟ್ರಪಿತ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರ ಪತ್ನಿ ಅಮೃತಾ ಫಡ್ನವೀಸ್​ ಅವರು ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ವ್ಯಕ್ತವಾಗುತ್ತಿದೆ.

    ಅಣುಕು ನ್ಯಾಯಾಲಯದ ಸಂದರ್ಶನದಲ್ಲಿ ಮೋದಿ ಅವರು ರಾಷ್ಟ್ರಪಿತರಾದರೆ ಗಾಂಧಿ ಯಾರು ಎಂಬ ಸಂದರ್ಶಕರ ಪ್ರಶ್ನೆಗೆ, ಮಹಾತ್ಮ ಗಾಂಧಿ ದೇಶದ ರಾಷ್ಟ್ರಪಿತ. ಮೋದಿ ನವಭಾರತದ ರಾಷ್ಟ್ರಪತಿ ಎಂದು ಉತ್ತರಿಸಿದ್ದಾರೆ.

    ದೇಶಕ್ಕೆ ಇಬ್ಬರು ರಾಷ್ಟ್ರಪಿತರಿದ್ದರೆ, ಒಬ್ಬರು ಪ್ರಸ್ತುತ ಭಾರತದ ರಾಷ್ಟ್ರಪಿತರು. ಇನ್ನೊಬ್ಬರು ಹಿಂದಿನ ಭಾರತದ ರಾಷ್ಟ್ರಪಿತರು ಎಂದಿದ್ದಾರೆ. ಅಮೃತಾ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. ಕಾಂಗ್ರೆಸ್​ ಮತ್ತು ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್​ ಗಾಂಧಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಈ ಹಿಂದೆ 2019ರಲ್ಲಿ ಟ್ವೀಟ್​ ಮಾಡಿ ಅಮೃತಾ ವಿವಾದ ಸೃಷ್ಟಿಸಿದ್ದರು. ನಮ್ಮ ದೇಶದ ರಾಷ್ಟ್ರಪಿತ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್​ ಮಾಡುವ ಮೂಲಕ ಅಮೃತಾ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದೀಗ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಬೇಕಂತಲೇ ಕರೊನಾ ಸೋಂಕು ಅಂಟಿಸಿಕೊಂಡ ಚೀನಾ ಗಾಯಕಿ! ಆಕೆ ಕೊಟ್ಟ ಕಾರಣ ಕೇಳಿದ್ರೆ ಬೆರಗಾಗ್ತೀರಾ

    ಸದನದ ರೂಟ್ ತಪ್ಪಿಸಿದ ಬಸ್ ಸಂಚಾರ: ವಿರೋಧ ಪಕ್ಷಗಳ ಧರಣಿ, ಸಚಿವರ ಕ್ಷಮೆಗೆ ಪಟ್ಟು; ಸ್ಪೀಕರ್ ಕಚೇರಿಯಲ್ಲಿ ರಾಜೀ, ಮತ್ತೆ ಸದನ

    ವಂಚಕರಿಂದ 92,570 ಕೋಟಿ ರೂ. ಬಾಕಿ: ಮೆಹುಲ್ ಚೋಕ್ಸಿಗೆ ಮೊದಲ ಸ್ಥಾನ, ಪಟ್ಟಿಯಲ್ಲಿ 50 ಮಂದಿ ಸುಸ್ತಿದಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts