More

    ಬೇಕಂತಲೇ ಕರೊನಾ ಸೋಂಕು ಅಂಟಿಸಿಕೊಂಡ ಚೀನಾ ಗಾಯಕಿ! ಆಕೆ ಕೊಟ್ಟ ಕಾರಣ ಕೇಳಿದ್ರೆ ಬೆರಗಾಗ್ತೀರಾ

    ಬೀಜಿಂಗ್​: ಚೀನಾದಲ್ಲಿ ಕರೊನಾ ವೈರಸ್​ ಮತ್ತೆ ತಾಂಡವವಾಡುತ್ತಿರುವ ಈ ಕಠಿಣ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿಯೇ ಕೋವಿಡ್​-19 ಸೋಂಕು ತಗುಲಿಸಿಕೊಂಡಿದ್ದಾಗಿ ಚೀನಾದ ಪ್ರಖ್ಯಾತ ಗಾಯಕಿ ಮತ್ತು ಸಾಹಿತಿ ಜಾನೆ ಝಾಂಗ್​ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.

    ಚೀನಾದಲ್ಲಿ ಬಿಎಫ್​.7 ಒಮಿಕ್ರಾನ್ ರೂಪಾಂತರ ಕಾಣಿಸಿಕೊಂಡಿದ್ದು, ವೇಗವಾಗಿ ಹರಡುತ್ತಿರುವುದಲ್ಲದೆ ಸಾಕಷ್ಟು ಮಂದಿ ಮೃತಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬೇಕಂತಲೇ ಗಾಯಕಿ ಝಾಂಗ್​ ಕರೊನಾ ವೈರಸ್​ ಸೋಂಕಿಗೆ ಒಳಗಾಗಿದ್ದಾರೆ. ಈಗಾಗಲೇ ಕೋವಿಡ್​ ಸೋಂಕಿಗೆ ಗುರಿಯಾಗಿರುವ ತನ್ನ ಸ್ನೇಹ ಬಳಗವನ್ನು ಭೇಟಿ ಮಾಡುವ ಉದ್ದೇಶದಿಂದ ಝಾಂಗ್​ ಕೂಡ ಕರೊನಾ ವೈರಸ್​ ಸೋಂಕು ತಗುಲಿಸಿಕೊಂಡರಂತೆ. ಈ ಬಗ್ಗೆ ಟ್ವಿಟರ್​ ಮಾದರಿಯ ಚೀನಾದ ಸಾಮಾಜಿಕ ಜಾಲತಾಣದ ವೈಬೋದಲ್ಲಿ ಹೇಳಿಕೊಂಡಿದ್ದಾಳೆ.

    ಮುಂಬರುವ ಹೊಸ ವರ್ಷದ ಮುನ್ನಾದಿನದ ನಡೆಯುವ ಸಂಗೀತ ಕಚೇರಿಯ ತಯಾರಿಗಾಗಿ ಈಗಲೇ ವೈರಸ್ ತಗುಲಿಸಿಕೊಳ್ಳಲು ಝಾಂಗ್​ ಬಯಸಿದ್ದಾರಂತೆ. ಒಮ್ಮೆ ವೈರಸ್​ ತಗುಲಿದರೆ ಮತ್ತೆ ಬರುವುದು ತುಂಬಾ ವಿರಳವಾಗಿರುವುದರಿಂದ ಝಾಂಗ್​ ಈ ನಿರ್ಧಾರಕ್ಕೆ ಬಂದರಂತೆ. ಮೊದಲೇ ವೈರಸ್​ ತಗುಲಿ, ಗುಣವಾದರೆ ಇಮ್ಯುನಿಟಿ ಜಾಸ್ತಿಯಾಗಿ ಮತ್ತೆ ಕರೊನಾ ಬರುವುದಿಲ್ಲ ಎಂಬುದು ಝಾಂಗ್​ಳ ನಿಲುವು. ಹೀಗಾಗಿ ಡಿಸೆಂಬರ್ ಅಂತ್ಯದಲ್ಲಿ ನಡೆಯುವ ಸಂಗೀತ ಕಚೇರಿಯಲ್ಲಿ ಸೋಂಕಿನ ಅಪಾಯಕ್ಕೆ ಒಳಗಾಗದಂತೆ ತಾನೇ ವೈರಸ್ ಸೋಂಕಿಗೆ ಗುರಿಯಾಗಿದ್ದಾಳಂತೆ. ಹೊಸ ವರ್ಷದ ಮುನ್ನಾದಿನ ನಡೆಯುವ ಪ್ರದರ್ಶನದ ಸಮಯದಲ್ಲಿ ನನ್ನ ಸ್ಥಿತಿಯು ತುಂಬಾ ಪರಿಣಾಮ ಬೀರುತ್ತದೆ ಎಂದು ಕಳವಳಗೊಂಡಿದ್ದೇನೆ. ಆದ್ದರಿಂದ ನಾನು ಪ್ರಸ್ತುತ ವೈರಸ್‌ನಿಂದ ಚೇತರಿಸಿಕೊಳ್ಳಲು ಸಮಯವನ್ನು ಹೊಂದಿರುವುದರಿಂದ ಪಾಸಿಟಿವ್​ ಇರುವ ಜನರ ಗುಂಪನ್ನು ನಾನು ಭೇಟಿಯಾದೆ ಎಂದು ಅವರು ಬರೆದಿದ್ದಾರೆ.

    38 ವರ್ಷದ ಗಾಯಕಿ ಜ್ವರ, ಗಂಟಲು ಕೆರೆತ ಮತ್ತು ದೇಹದ ನೋವುಗಳಂತಹ ರೋಗಲಕ್ಷಣಗಳು ಕಂಡುಬಂದ ಬಳಿಕ ನಿದ್ರೆಗೆ ಜರಿದ್ದಾಗಿ ತಿಳಿಸಿದ್ದಾಳೆ. ಆಕೆಯ ರೋಗಲಕ್ಷಣಗಳು ಕೋವಿಡ್ ರೋಗಿಯ ಲಕ್ಷಣಗಳನ್ನು ಹೋಲುತ್ತವೆ. ಆದರೆ, ಕೇವಲ ಒಂದು ದಿನ ಮಾತ್ರ ರೋಗ ನನ್ನನ್ನು ಬಾಧಿಸಿತು ಎಂದು ಝಾಂಗ್ ವಿವರಿಸಿದರು. ಒಂದು ದಿನ ಮತ್ತು ರಾತ್ರಿ ಮಲಗಿದ ನಂತರ, ನನ್ನ ಎಲ್ಲಾ ರೋಗಲಕ್ಷಣಗಳು ಕಣ್ಮರೆಯಾಯಿತು. ರೋಗದ ಸಂದರ್ಭದಲ್ಲಿ ನಾನು ಸಾಕಷ್ಟು ನೀರು ಕುಡಿದಿದ್ದೇನೆ ಮತ್ತು ನಾನು ಚೇತರಿಸಿಕೊಳ್ಳುವ ಯಾವುದೇ ಔಷಧಿಯನ್ನು ತೆಗೆದುಕೊಳ್ಳದೆ ಕೇವಲ ವಿಟಮಿನ್ ಸಿ ತೆಗೆದುಕೊಂಡೆ ಎಂದು ಝಾಂಗ್​ ಹೇಳಿದರು.

    ವೈಬೋ ಜಾಲತಾಣದಲ್ಲಿ ಆಕೆಯ ಪೋಸ್ಟ್ ವೈರಲ್ ಆದಾಗಿನಿಂದ, ಅನೇಕರು ಆಕೆಯ ಸಂವೇದನಾರಹಿತ ಮತ್ತು ಬೇಜವಾಬ್ದಾರಿ ವರ್ತನೆಗಾಗಿ ಟೀಕಾಪ್ರಹಾರ ನಡೆಸಿದ್ದಾರೆ. ವಿಶೇಷವಾಗಿ ಚೀನಾದಲ್ಲಿ ಕೋವಿಡ್ -19 ಉಲ್ಬಣಗೊಂಡು, ಮರಣ ಮೃದಂಗ ಎದುರಿಸುತ್ತಿರುವ ಸಮಯದಲ್ಲಿ ಸಾಮಾಜಿಕ ಜವಾಬ್ದಾರಿ ಮೆರೆಯಬೇಕಿದ್ದ, ಗಾಯಕಿ ಅದನ್ನು ಮರೆತು ಇನ್ನಷ್ಟು ಆತಂಕ ಉಂಟು ಮಾಡಿದ್ದಾಳೆ. ಯಾವಾಗ ಪೋಸ್ಟ್​ ವೈರಲ್​ ಆಗಿ ತೀವ್ರ ತರಾಟೆಗಳು ಎದುರಾದವೋ ಇದೀಗ ಪೋಸ್ಟ್​ ಅನ್ನು ಡಿಲೀಟ್​ ಮಾಡಿ, ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದಾಳೆ.

    ನಾನು ಪೋಸ್ಟ್‌ ಮಾಡುವ ಮೊದಲು ಕೆಲವು ವಿಷಯಗಳನ್ನು ಎಚ್ಚರಿಕೆಯಿಂದ ಪರಿಗಣಿಸಲಿಲ್ಲ. ಈ ಬಗ್ಗೆ ನಾನು ಸಾರ್ವಜನಿಕರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಝಾಂಗ್​ ವೈಬೊದಲ್ಲಿ ಬರೆದಿದ್ದಾರೆ. ಸಂಗೀತ ಕಾರ್ಯಕ್ರಮ ನಡೆಯುವಾಗ ನಾನು ಸೋಂಕಿಗೆ ಒಳಗಾಗಿದ್ದರೆ, ಅದು ನನ್ನ ಸಹೋದ್ಯೋಗಿಗಳು ಮತ್ತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಸೋಂಕಿಗೆ ಒಳಗಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನಾನು ಚಿಂತಿತಳಾಗಿದ್ದೆ. ಹಾಗಾಗಿ ಇದು ಅನಿವಾರ್ಯ ವಿಷಯ ಎಂದು ಭಾವಿಸಿ, ಸೋಂಕಿಗೆ ಒಳಗಾದೆ. ನಾನು ಚೇತರಿಸಿಕೊಂಡ ನಂತರ ನಾನು ಕೆಲಸಕ್ಕೆ ಹೋಗಬಹುದು ಎಂದು ಭಾವಿಸಿದೆ. ನಾನು ಮನೆಯಿಂದ ಹೊರಹೋಗುವ ಅಗತ್ಯವಿಲ್ಲದಿರುವ ಈ ಸಮಯದಲ್ಲಿ ಅನಾರೋಗ್ಯಕ್ಕೆ ಯಾಕೆ ಒಳಗಾಗಬಾರದು ಎಂದು ಯೋಚಿಸುತ್ತಿದ್ದೆ. ಇದು ನಮ್ಮೆಲ್ಲರಿಗೂ ಸುರಕ್ಷಿತವಾಗಿರುತ್ತದೆ ಎಂದು ತಿಳಿದು, ಈ ರೀತಿ ಮಾಡಿದೆ ಎಂದು ಝಾಂಗ್ ವಿವರಿಸಿದರು.

    ಸ್ಥಳೀಯ ಮಾಧ್ಯಮಗಳ ಪ್ರಕಾರ “ಡಾಲ್ಫಿನ್ ಪ್ರಿನ್ಸೆಸ್” ಎಂದು ಕರೆಯಲ್ಪಡುವ ಗಾಯಕಿ ಝಾಂಗ್​, 2005 ರಲ್ಲಿ ರಾಷ್ಟ್ರೀಯ ಗಾಯನ ಸ್ಪರ್ಧೆಯನ್ನು ಗೆದ್ದ ನಂತರ ಸುಮಾರು ಎರಡು ದಶಕಗಳಿಂದ ಚೀನಾದಲ್ಲಿ ಜನಪ್ರಿಯ ಸಂಗೀತ ತಾರೆಯಾಗಿದ್ದಾರೆ. (ಏಜೆನ್ಸೀಸ್​)

    ಪರಮ ಪವಿತ್ರವಾದ ವೈದ್ಯ ವೃತ್ತಿ

    ಒಗಟ್ಟಿನಲ್ಲಿ ಬಲವಿದೆ: ಮಹಾರಾಷ್ಟ್ರದ ಗಡಿ ಕ್ಯಾತೆಗೆ ಕರ್ನಾಟಕದ ತಿರುಗೇಟು

    ‘https://www.vijayavani.net/g7-oil-limit-russia-fearless/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts