ಒಗಟ್ಟಿನಲ್ಲಿ ಬಲವಿದೆ: ಮಹಾರಾಷ್ಟ್ರದ ಗಡಿ ಕ್ಯಾತೆಗೆ ಕರ್ನಾಟಕದ ತಿರುಗೇಟು

ಗಡಿ ವಿವಾದ ಮುಗಿದ ಕತೆಯಾಗಿದ್ದು, ಮಹಾರಾಷ್ಟ್ರಕ್ಕೆ ಒಂದಿಂಚೂ ಭೂಮಿಯನ್ನು ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ನಡೆದಿರುವ ವಿಧಾನಮಂಡಲದ ಅಧಿವೇಶನದಲ್ಲಿ ಸ್ಪಷ್ಟವಾಗಿ, ಗಟ್ಟಿಯಾಗಿ ಪ್ರತಿಪಾದಿಸಿರುವುದು ಹಾಗೂ ಇದಕ್ಕೆ ರಾಜ್ಯದಲ್ಲಿನ ವಿರೋಧ ಪಕ್ಷಗಳು ಕೂಡ ಬೆಂಬಲ ವ್ಯಕ್ತಪಡಿಸಿರುವುದು ಕರ್ನಾಟಕದ ನೆಲದ ರಕ್ಷಣೆ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಗಡಿ ವಿಚಾರದಲ್ಲಿ ರಾಜ್ಯದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಕ್ಕೊರಲ ನಿಲುವನ್ನು ವ್ಯಕ್ತಪಡಿಸಿರುವುದು ಕರ್ನಾಟಕ ಪ್ರತಿಪಾದನೆಗೆ ಆನೆಬಲ ತಂದುಕೊಟ್ಟದಂತಾಗಿದೆ. 1956ರಲ್ಲಿ ಭಾಷಾವಾರು ಆಧರಿತವಾಗಿ ಪ್ರಾಂತ್ಯಗಳನ್ನು ರಚಿಸಿದಾಗ ಬೆಳಗಾವಿ ಸೇರಿದಂತೆ ಮುಂಬೈ ಪ್ರಾಂತ್ಯದಲ್ಲಿನ ಕನ್ನಡ … Continue reading ಒಗಟ್ಟಿನಲ್ಲಿ ಬಲವಿದೆ: ಮಹಾರಾಷ್ಟ್ರದ ಗಡಿ ಕ್ಯಾತೆಗೆ ಕರ್ನಾಟಕದ ತಿರುಗೇಟು