More

    “ಎಲ್ಲ ಪಕ್ಷದಲ್ಲೂ ತಾಲಿಬಾನಿಗಳಿದ್ದಾರೆ; ಕೋಮುವಾದದ ರಾಜಕೀಯ ನಡೀತಿದೆ”

    ಬೆಂಗಳೂರು: ರಾಜ್ಯದಲ್ಲಿ ಕೇವಲ ಒಂದು ಪಕ್ಷದಲ್ಲಿ ಮಾತ್ರವಲ್ಲ, ಎಲ್ಲ ಪಕ್ಷಗಳಲ್ಲಿಯೂ ತಾಲಿಬಾನಿಗಳಿದ್ದು, ಕೋಮುವಾದದ ಮೂಲಕವೇ ರಾಜಕೀಯ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

    ನಗರದಲ್ಲಿ ಇಂದು(ಸೆ.29) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಆರ್​​ಎಸ್ಎಸ್ ರಾಜ್ಯದ ತಾಲಿಬಾನ್ ಸಂಸ್ಕೃತಿ ಪ್ರದರ್ಶಿಸುತ್ತಿದೆ, ಕೋಮುವಾದ ಬಿತ್ತುತ್ತಿದೆ ಎಂದಿರುವುದನ್ನು ನಾನು ಒಪ್ಪುವುದಿಲ್ಲ. ಯಾವ ಪಕ್ಷದಲ್ಲಿ ತಾಲಿಬಾನಿಗಳು ಇಲ್ಲ, ಹೇಳಿ… ಎಲ್ಲ ಪಕ್ಷದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಕುರುಬ, ವಾಲ್ಮೀಕಿ ಎಂದು ಕೋಮು ಸಮುದಾಯ ಭಾವನೆ ಬಿತ್ತುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಎಲ್ಲದರಲ್ಲಿಯೂ ತಾಲಿಬಾನಿ ಸಂಸ್ಕೃತಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಯುವಕ ಆತ್ಮಹತ್ಯೆ

    ಶೆಫರ್ಡ್ ಇಂಡಿಯಾ ವಾರ್ಷಿಕೋತ್ಸವ: ದೇಶದಲ್ಲಿ ಸುಮಾರು 12 ಕೋಟಿಗೂ ಅಧಿಕ ಜನಸಂಖ್ಯೆಯಲ್ಲಿರುವ ಕುರುಬ ಸಮುದಾಯವನ್ನು ಒಗ್ಗೂಡಿಸಲು 2015ರಂದು ದೆಹಲಿಯಲ್ಲಿ ಶೆಫರ್ಡ್ ಇಂಡಿಯಾ ಇಂಟರ್​​ನ್ಯಾಷನಲ್ ಸಂಸ್ಥೆ ಆರಂಭಿಸಲಾಗಿದೆ. ಪ್ರತಿ ವರ್ಷ ಸಂಸ್ಥೆಯ ವಾರ್ಷಿಕೋತ್ಸವವನ್ನು ದೇಶದ ವಿವಿಧೆಡೆ ಆಚರಣೆ ಮಾಡಲಾಗುತ್ತಿದೆ. 2021ರಲ್ಲಿ 6ನೇ ವಾರ್ಷಿಕೋತ್ಸವ ಮತ್ತು ಸಮ್ಮೇಳನವನ್ನು ಗುಜರಾತ್ ರಾಜ್ಯದ ಅಹಮದಾಬಾದ್​ನಲ್ಲಿ ಅಕ್ಟೋಬರ್​ 2 ರಂದು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

    ಪ್ರಪಂಚದ ಎಲ್ಲ ಭಾಗಗಳಲ್ಲಿ ಸಾಂಸ್ಕೃತಿಕ ಗುಂಪಾಗಿ ಹಾಗೂ ಆರ್ಥಿಕತೆಯ ಕುರುಹು ಆಗಿ ಕುರುಬ ಸಮುದಾಯ ಬೆಳೆದಿದೆ. ಅದೇ ರೀತಿ ನಮ್ಮ ದೇಶದಲ್ಲಿಯೂ ಕುರುಬ ಸಮುದಾಯವನ್ನು ಒಗ್ಗೂಡಿಸಿ ಸಂಘಟನಾ ಶಕ್ತಿಯಾಗಿ ಹೊರಹೊಮ್ಮುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ವಿಶ್ವನಾಥ್ ಮನವಿ ಮಾಡಿದರು.

    ಹೀಗೊಂದು ವಿಚಿತ್ರ ಪ್ರಸಂಗ: ತನ್ನದೇ ಶೋಧ ಕಾರ್ಯದಲ್ಲಿ ಪಾಲ್ಗೊಂಡ ಪುರುಷ!

    ಕರ್ನಾಟಕ ಹಾಲು ಮಹಾಮಂಡಳದ 10 ಯೋಜನೆಗಳಿಗೆ ಇಂದು ಚಾಲನೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts