More

    ಕಾಂಗ್ರೆಸ್ ಗ್ಯಾರಂಟಿಗಳಿಂದ ದೇಶ ದಿವಾಳಿ

    ಚಿತ್ರದುರ್ಗ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಏ.24ರ ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರ ಗ್ಯಾರಂಟಿಗಳು ರಾಜ್ಯ, ದೇಶವನ್ನು ದಿವಾಳಿ ಅಂಚಿಗೆ ಕೊಂಡೊಯ್ಯುವ ಗ್ಯಾರಂಟಿಗಳಾಗಿವೆ. ಉಚಿತ ಭರವಸೆ ಹೊರತು ಪಡಿಸಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ಪ್ರಸ್ತಾಪವಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ 1.05 ಲಕ್ಷ ರೂ. ಸಾಲ ಮಾಡಿದ್ದಾರೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳಿಗೆ ವಾರ್ಷಿಕ 60 ಸಾವಿರ ಕೋಟಿ ರೂ. ಬೇಕಾಗಲಿದೆ ಎಂದರು.
    ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂ. ಕೊಡುವುದಾಗಿ ಕಾಂಗ್ರೆಸ್ ಹೇಳಿದೆ. ಅದರ ಪ್ರಕಾರ ವರ್ಷಕ್ಕೆ 25 ಲಕ್ಷ ರೂ. ಕೋಟಿ ರೂ.ಬೇಕಾಗಲಿದ್ದು, ಕೇಂದ್ರದ ಬಜೆಟ್ ಗಾತ್ರವೇ 47 ಲಕ್ಷ ಕೋಟಿ ರೂ. ಇದ್ದು, ಇದರಿಂದಲೇ ಗೊತ್ತಾಗುತ್ತದೆ ಇದೊಂದು ಹಸಿ ಸುಳ್ಳಿನ ಭರವಸೆ ಎಂದು ಹೇಳಿದರು.
    ರಾಜ್ಯದ ವಿವಿಧೆಡೆ ಕಾಂಗ್ರೆಸ್ ಕಾರ‌್ಯಕರ್ತರು ಮನೆ, ಮನೆಗೆ ತೆರಳಿ ಒಂದು ಲಕ್ಷ ರೂ. ಬರಲಿದೆ ಎಂದು ಹೇಳಿ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದ್ದಾರೆ. ಅವರಿಂದ ಆಧಾರ್ ಕಾರ್ಡ್ ಪಡೆದು, ಸ್ವೀಕೃತಿ ಕೊಡುತ್ತಿದ್ದಾರೆ ಎಂದು ದೂರಿದರು.
    ಕಾಂಗ್ರೆಸ್‌ನ ಈ ನಡೆ ಚುನಾವಣಾ ಅಕ್ರಮವಾಗಿದ್ದು, ಭಾರತ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಕೊಟ್ಟಿದೆ. ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜನರನ್ನು ವಂಚಿಸುತ್ತಿದ್ದಾರೆ. ಕಾಂಗ್ರೆಸ್ಸಿನದು ಹರ್ಷದ ಕೂಳಾದರೆ, ಬಿಜೆಪಿಯದ್ದು ವರ್ಷದ ಕೂಳಿನ ಗ್ಯಾರಂಟಿ ಎಂದರು.
    ಬಿಜೆಪಿ ‘ಸಂಕಲ್ಪ ಪತ್ರ’ 2047ವರೆಗೆ ದೇಶದ ಸಮಗ್ರ ಅಭಿವೃದ್ಧಿ ಪಥದ ಕುರಿತದ್ದಾಗಿದೆ. ನಮ್ಮ ಸಂಕಲ್ಪದಂತೆ ಶ್ರೀರಾಮಂದಿರ ನಿರ್ಮಾಣವಾಗಿದೆ, ಆರ್ಟಿಕಲ್ 370 ರದ್ದಾಗಿದೆ ಎಂದು ಹೇಳಿದರು. ಜಿಲ್ಲಾಮಟ್ಟದಲ್ಲಿ ಸಂಕಲ್ಪ ಪತ್ರ ಬಿಡುಗಡೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts