More

    ವಿಶೇಷ ಚೇತನರು ಮತದಾನದಿಂದ ದೂರಿವಿರದಿರಿ

    ಕೊಪ್ಪಳ: ಲೋಕಸಭೆ ಚುನಾವಣೆ ಅಂಗವಾಗಿ ಮೇ 7ರಂದು ಮತದಾನವಿದೆ. ಅಂದು ಎಲ್ಲ ಹಿರಿಯರು ಹಾಗೂ ವಿಶೇಷ ಚೇತನರು ಮತ ಚಲಾಯಿಸುವಂತೆ ವಿಶೇಷ ಚೇತನ ಕಾರ್ಯಕರ್ತರು ಕ್ರಮವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಹೇಳಿದರು.

    ನಗರದ ತಾಪಂ ಸಭಾಂಗಣದಲ್ಲಿ ಗ್ರಾಪಂ ವಿಶೇಷ ಚೇತನ ಕಾರ್ಯಕರ್ತರಿಗೆ ಸೋಮವಾರ ಹಮ್ಮಿಕೊಂಡಿದ್ದ ಮಾಹಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

    ಎಲ್ಲ ಮತಗಟ್ಟೆಗಳಲ್ಲಿ ರ್ಯಾಂಪ್​ ನಿರ್ಮಿಸಿದ್ದು, ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ನಿಮ್ಮ ನಿಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲ ವಿಶೇಷ ಚೇತನರು ಕಡ್ಡಾಯವಾಗಿ ಮತದಾನ ಮಾಡುವಂತೆ ನೋಡಿಕೊಳ್ಳಿ. ಶೇ.100ರಷ್ಟು ಸಾಧನೆ ಮಾಡಿ. ನಿಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾಹಿತಿ ಹಂಚಿಕೊಳ್ಳಿ. ಪ್ರತಿ ಮತ ಅಮೂಲ್ಯ. ಎಲ್ಲ ವಿಕಲಚೇತನರು ಮತ ಚಲಾಯಿಸಿ ರಾಜ್ಯಕ್ಕೆ ಉತ್ತಮ ಸಂದೇಶ ರವಾನಿಸೋಣ ಎಂದರು.

    ವಿಕಲಚೇತನ ಮತದಾರರ ಜಿಲ್ಲಾ ರಾಯಭಾರಿ ಪೂರ್ಣಿಮಾ ಏಳುಬಾವಿ ಮಾತನಾಡಿ, ಜಿಲ್ಲೆಯಲ್ಲಿ 16 ಸಾವಿರ ವಿಕಲಚೇತನ ಮತದಾರರಿದ್ದಾರೆ. ಎಲ್ಲರೂ ಮತ ಚಲಾಯಿಸುವಂತೆ ಅರಿವು ಮೂಡಿಸಲಾಗುತ್ತಿದೆ. ಮೇ 7ರಂದು ಎಲ್ಲರೂ ನಿಮ್ಮ ಹಕ್ಕು ಚಲಾಯಿಸಿ ಎಂದರು.

    ತಾಪಂ ಇಒ ದುಂಡಪ್ಪ ತುರಾದಿ, ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಸಿಡಿಪಿಒ ಜಯಶ್ರೀ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶರಣಪ್ಪ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕ ವಿಶೇಷಚೇತನರ ಕಾರ್ಯಕರ್ತೆ ಜಯಶ್ರೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts