More

    ತಾಳಿಯನ್ನೇ ಅಡವಿಟ್ಟಿದ್ದ ಕರೊನಾ ಸೇನಾನಿಯ ಪತ್ನಿಗೆ ಸರ್ಕಾರದಿಂದ 5 ಲಕ್ಷ ರೂ.

    ಬೆಂಗಳೂರು/ನರಗುಂದ: ಕರ್ತವ್ಯದ ವೇಳೆಯೇ ಹೃದಯಾಘಾತದಿಂದ ಮೃತಪಟ್ಟ ತಾಲೂಕಿನ ಕೊಣ್ಣೂರ ಗ್ರಾಮದ 108 ಆಂಬುಲೆನ್ಸ್ ಚಾಲಕ ಉಮೇಶ ಹಡಗಲಿ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 5 ಲಕ್ಷ ರೂ. ಮಂಜೂರು ಮಾಡಿದ್ದಾರೆ.

    ಉಮೇಶ್ ಅವರ ಪತ್ನಿ ಜ್ಯೋತಿ ಅವರನ್ನು ಜೂನ್ 1ರಂದು ಯಡಿಯೂರಪ್ಪ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಸಾಂತ್ವನ ಹೇಳಿದ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಈ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರು ಮಾಡಲಾಗಿದೆ. ಈ ಹಣವು ಆನ್‌ಲೈನ್ ಮೂಲಕ ಜ್ಯೋತಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

    ಇದನ್ನೂ ಓದಿ  ಹತ್ಯೆ ಆರೋಪಿಗಳ ಬಂಧನ

    ಈ ನಡುವೆ, ಆ ಕುಟುಂಬಕ್ಕೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ವೈಯಕ್ತಿಕವಾಗಿ 20 ಸಾವಿರ ರೂ. ಸಹಾಯ ನೀಡಿದ್ದಾರೆ. ‘ತಾಳಿ ಅಡವಿಟ್ಟು ತಿಥಿ ಕಾರ್ಯ ಮಾಡಿದ ಪತ್ನಿ’ ಎಂಬ ಶೀರ್ಷಿಕೆಯಡಿ ಜೂ. 2ರಂದು ‘ವಿಜಯವಾಣಿ’ಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿ ಸಚಿವರು ಈ ನೆರವು ನೀಡಿದ್ದಾರೆ.

    ವಿಜಯವಾಣಿ ವರದಿಗೆ ಸ್ಪಂದಿಸಿರುವ ಬೆಂಗಳೂರಿನ ವಿಜಯಕುಮಾರ ವಿ.ಕೆ. ಎಂಬುವವರು ಕೂಡ ಜ್ಯೋತಿ ಅವರ ಖಾತೆಗೆ ಮಂಗಳವಾರ ಸಹಾಯದ ರೂಪದಲ್ಲಿ 10 ಸಾವಿರ ರೂ. ಜಮೆ ಮಾಡಿದ್ದಾರೆ.

    ಇನ್ನು ಸೋಮವಾರ ಸಂಜೆ ಉಮೇಶ ಅವರ ಮನೆಗೆ ಭೇಟಿ ನೀಡಿದ ತಹಸೀಲ್ದಾರ್ ಎ.ಎಚ್. ಮಹೇಂದ್ರ ಅವರು ಜ್ಯೋತಿ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ದೊರೆಯುವ ಎಲ್ಲ ಸಹಾಯವನ್ನು ಅವರ ಕುಟುಂಬದವರಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

    12 ಲಕ್ಷ ಕಾರ್ಮಿಕರಿಗೆ ತಲುಪಿದೆ ತಲಾ 5 ಸಾವಿರ ರೂ. ಪರಿಹಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts