More

  ನಿಯಮ ಉಲ್ಲಂಘಿಸಿದರೆ ದಂಡ ಅನಿವಾರ್ಯ

  ಗೊಳಸಂಗಿ: ಅಂಗಡಿಕಾರು ಸರ್ಕಾರದ ನಿಯಮಾನುಸಾರ ನಿಗದಿತ ವೇಳೆಯಲ್ಲೇ ವಹಿವಾಟು ನಡೆಸಬೇಕು. ಇಲ್ಲವಾದರೆ ಗ್ರಾಪಂನಿಂದ ಅಂಥ ಅಂಗಡಿಕಾರರ ಅನುಮತಿ ರದ್ದುಪಡಿಸಿ ಸೂಕ್ತ ದಂಡ ವಿಧಿಸಲಾಗುವುದೆಂದು ಪಿಡಿಒ ಎಂ.ಬಿ. ಹಾವರಗಿ ಎಚ್ಚರಿಸಿದರು.

  ಗ್ರಾಮದ ಬಸವೇಶ್ವರ ಮಂಗಲ ಭವನದಲ್ಲಿ ಗ್ರಾಪಂ ವತಿಯಿಂದ ಕರೊನಾ ಸೇನಾನಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿದರು.

  ನಿತ್ಯ ಬೆಳಗ್ಗೆ ದಿನಸಿ, ಹೋಟೆಲ್ ಮತ್ತು ಮಧ್ಯದ ಅಂಗಡಿಗಳು ಪಾರ್ಸೆಲ್ ವಹಿವಾಟು ಮಾತ್ರ ನಡೆಸತಕ್ಕದ್ದು, ಸಾರ್ವಜನಿಕರು ತುರ್ತು ಸಂದರ್ಭ ಹೊರಗಡೆ ಸಂಚರಿಸಲೇಕಾದ ವೇಳೆ ಮುಖಕ್ಕೆ ಮಾಸ್ಕ್ ಧರಿಬೇಕು. ಇಲ್ಲದಿದ್ದರೆ 100 ರೂ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

  ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಎ್.ಆರ್. ಕುಂಟೋಜಿ, ಗ್ರಾಪಂ ಅಧ್ಯಕ್ಷೆ ಸುನಿತಾ ಪವಾರ, ಉಪಾಧ್ಯಕ್ಷ ರಾಜೇಸಾಬ ಹತ್ತರಕಿಹಾಳ, ಗ್ರಾಮ ಲೆಕ್ಕಾಧಿಕಾರಿ ಸಿ.ಬಿ. ಚವಾಣ್, ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.
  ಇದೇ ವೇಳೆ ಕರೊನಾ ಸೇನಾನಿಗಳಾದ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪೊಲೀಸರು, ಪತ್ರಕರ್ತರಿಗೆ ಗ್ರಾಪಂ ವತಿಯಿಂದ ಸ್ಯಾನಿಟೈಸರ್, ಮಾಸ್ಕ್ ಉಚಿತವಾಗಿ ವಿತರಿಸಲಾಯಿತು.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts