More

    ಹತ್ಯೆ ಆರೋಪಿಗಳ ಬಂಧನ

    ಸಾಗರ: ತಾಲೂಕಿನ ಅರಳೀಕೊಪ್ಪ ಗ್ರಾಮದ ಆಟದ ಮೈದಾನದ ಸಮೀಪ ನಡೆದ ಯುವಕನ ಕೊಲೆಗೆ ಸಂಬಂಧಿಸಿ ಐವರು ಆರೋಪಿಗಳನ್ನು ಸಾಗರ ಗ್ರಾಮಾಂತರ ಠಾಣೆ ಪೋಲೀಸರು ಬಂಧಿಸಿದ್ದಾರೆ.

    ನೆಹರು ನಗರ ನಿವಾಸಿ ಸಾಜಿಲ್(23)ನನ್ನು ಮೊಬೈಲ್ ವಿಚಾರಕ್ಕೆ ಆತನ ಸ್ನೇಹಿತರೇ ಹತ್ಯೆ ಮಾಡಿದ್ದರು. ಈತನ ಸಹೋದರ ನೀಡಿದ ದೂರಿನ ಅನ್ವಯ ಆರೋಪಿಗಳಾದ ಸುಫೇಲ್ (ಸುಕ್ಕಾ), ಮುಜಾಹಿದ್(ಮುಜ್ಜು), ಸುಹೇಬ್, ಅಬ್ದುಲ್ ಸಲಾಂ(ಸಲ್ಲಾ), ಸಮೀವುಲ್ಲಾ ನನ್ನು ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಎಸ್ಪಿ ಕೆ.ಎಂ.ಶಾಂತರಾಜು ಹಾಗೂ ಎಎಸ್ಪಿ ಶೇಖರ್ ಅವರು ಸಾಗರ ಗ್ರಾಮಾಂತರ ಠಾಣೆಯ ಪಿಎಸ್​ಐ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಫೈರೋಜ್, ಹಜರತ್ ಅಲಿ, ಅಶೋಕ್, ಕಾಳ ನಾಯ್ಕ್, ವಿಶ್ವನಾಥ್, ಮಲ್ಲೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts