More

    ಶಬರಿಮಲೆ ಯಾತ್ರಿಕರಿಗೆ ಶೌಚಗೃಹ ನೀರಿನಿಂದ ತಯಾರಿಸಿದ ಪಾನೀಯ; ಅಂಗಡಿ ಮಾಲೀಕನಿಗೆ ಮೆಮೊ

    ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿ ಶಬರಿಮಲೆ ಯಾತ್ರೆ ಕೈಗೊಳ್ಳುವವರು ಕಟ್ಟುನಿಟ್ಟಾದ ಸಂಪ್ರದಾಯವನ್ನು ಹಲವು ದಿನಗಳ ಮೊದಲೇ ಪಾಲಿಸಿಕೊಂಡು ಬರುತ್ತಾರೆ. ಸಾಕಷ್ಟು ಭಕ್ತರು ಮನೆಯಿಂದ ದೂರವುಳಿದು ಸ್ವತಃ ಅಡುಗೆ ಮಾಡಿಕೊಳ್ಳುತ್ತಾರೆ. ದುಶ್ಚಟಗಳಿಂದಲೂ ದೂರ ಇರುತ್ತಾರೆ. ಮಡಿಮೈಲಿಗೆಯನ್ನು ಎಚ್ಚರಿಕೆಯಿಂದ ಪಾಲಿಸುತ್ತಾರೆ. ಆದರೆ, ಇಂತಹ ಅಯ್ಯಪ್ಪ ಭಕ್ತರಿಗೆ ಶೌಚಗೃಹದ ನೀರಿನಿಂದ ತಯಾರಿಸಿದ ಪಾನೀಯಗಳನ್ನು ನೀಡುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

    ಇಂತಹ ಘಟನೆ ನಡೆದಿರುವುದು ಶಬರಿಮಲೆ ಬಳಿಯ ಎರುಮೇಲಿಯ ಅಂಗಡಿಯೊಂದರಲ್ಲಿ. ಈ ಅಂಗಡಿಯಾತ ಪಕ್ಕದ ಶೌಚಾಲಯದಿಂದ ಪೈಪ್​ ಮೂಲಕ ನೀರನ್ನು ತೆಗೆದುಕೊಂಡು ಚಹಾ ಮತ್ತು ನಿಂಬೆ ರಸ ತಯಾರಿಸಿ ಮಾರಾಟ ಮಾಡುವುದು ಪತ್ತೆಯಾಗಿದೆ. ಅಯ್ಯಪ್ಪ ಭಕ್ತರು ಶಬರಿಮಲೆಗೆ ಪ್ರಯಾಣ ಕೈಗೊಳ್ಳುವ ಈ ಮಹತ್ವ ಅವಧಿಯಲ್ಲೇ ಇಂತಹ ಘಟನೆ ವರದಿಯಾಗಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

    ಯಾತ್ರಾ ಸ್ಥಳದ ಸುತ್ತಮುತ್ತಲಿನ ಅಂಗಡಿಯೊಂದು ಶೌಚಾಲಯದ ನೀರನ್ನು ಬಳಸಿ ದ್ರವ ಪದಾರ್ಥಗಳನ್ನು ಮಾರಾಟ ಮಾಡುತ್ತಿತ್ತು. ಹೀಗಾಗಿ, ಅಂಗಡಿಗೆ ಸ್ಟಾಪ್ ಮೆಮೊ ನೀಡಲಾಗಿದೆ. ಆದರೆ, ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಂದಾಯ ಮತ್ತು ಆರೋಗ್ಯ ಇಲಾಖೆ ತಪಾಸಣೆಯ ನಂತರ ಅಂಗಡಿಗೆ ಸ್ಟಾಪ್ ಮೆಮೊ ನೀಡಲಾಗಿದೆ. ಖಾದ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡಲು ತಾತ್ಕಾಲಿಕ ಪರವಾನಗಿಯನ್ನು ಈ ಅಂಗಡಿಗೆ ನೀಡಲಾಗಿತ್ತು.

    ನಿಯಮ ಉಲ್ಲಂಘಿಸಿದ ಅಂಗಡಿಯ ಮಾಲೀಕನನ್ನು ಅಬ್ದುಲ್ ಶೆಮಿಮ್ ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈತ ಸಿಪಿಐಎಂನ ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ (ಡಿವೈಎಫ್‌ಐ) ಪ್ರದೇಶ ಕಾರ್ಯದರ್ಶಿಯೂ ಆಗಿದ್ದಾನೆ ಎನ್ನಲಾಗಿದೆ.

    ಸಿಪಿಐಎಂ ಮತ್ತು ಕಾಂಗ್ರೆಸ್​ನವರು ಅಂಗಡಿ ಮಾಲೀಕರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಪ್ರಕರಣ ದಾಖಲಿಸುತ್ತಿಲ್ಲ ಎಂದು ಬಿಜೆಪಿ ಸ್ಥಳೀಯ ನಾಯಕರು ಆರೋಪಿಸಿದ್ದಾರೆ.

    ಇಯರ್​ ಎಂಡ್​ ಪ್ರವಾಸಕ್ಕೆ ವಿಮಾನ ಟಿಕೆಟ್​ ಖರೀದಿ; ಎಚ್ಚರಿಕೆ ವಹಿಸದಿದ್ದರೆ ವಂಚನೆ ಗ್ಯಾರಂಟಿ

    5 ಕೆಜಿ ಉಚಿತ ರೇಶನ್​ ಯೋಜನೆ 5 ವರ್ಷ ವಿಸ್ತರಣೆ; ಮಹಿಳಾ ಗುಂಪುಗಳಿಗೆ ಡ್ರೋನ್​ ನೀಡಲು ಕೇಂದ್ರ ಸಂಪುಟ ಅನುಮೋದನೆ

    ಕೆಟಿಆರ್ ಮಾಮಾ… ಹೈದರಾಬಾದ್‌ಗೆ ಡಿಸ್ನಿಲ್ಯಾಂಡ್ ತರಬಹುದೇ? ತೆಲಂಗಾಣ ಸಚಿವರಿಗೆ ಬಾಲಕಿಯ ಮುದ್ದಾದ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts