More

    ದೇಶದ ಪ್ರಗತಿಗೆ ಕೈಗಾರಿಕೆಗಳ ಪಾತ್ರ ಪ್ರಮುಖ

    ಕೋಲಾರ: ದೇಶದ ಪ್ರಗತಿಯಲ್ಲಿ ಕೈಗಾರಿಕೆಗಳು ಪ್ರಮುಖ ಪಾತ್ರವಹಿಸುತ್ತಿವೆ. ಯುವಕರು ಸ್ವಯಂ ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.

    ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಾಸಿಯಾ ಹಾಗೂ ಸಿಡ್ಬಿ ಸಂಯುಕ್ತ ಆಶ್ರಯದಲ್ಲಿ ನಗರದ ಖಾಸಗಿ ಹೋಟೆಲ್​ನಲ್ಲಿ ಗುರುವಾರ ನಡೆದ ಸೂಕ್ಷ$್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಜಿಲ್ಲೆಯ ಅಭಿವೃದ್ಧಿಯಲ್ಲಿ ಕೈಗಾರಿಕೆಗಳು ಪ್ರಮುಖ ಪಾತ್ರವಹಿಸುತ್ತಿವೆ. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲೆಯ ಹೇಳಿಗೆಗಾಗಿ ಕೈಗಾರಿಕೆಗಳು ಅತ್ಯವಶ್ಯಕ, ಆರ್ಥಿಕ ಪ್ರಗತಿ ಕಾಣಲು ಸಾಧ್ಯ. ಜತೆಗೆ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಯು ಆಗುತ್ತದೆ ಎಂದರು.
    ದೇಶದಲ್ಲಿ ಐಟಿಬಿಟಿ ಕಂಪನಿಗಳು ಮೊದಲನೇ ಸ್ಥಾನದಲ್ಲಿವೆ, ಆದರೂ ಸಹ ರಾಜ್ಯದಲ್ಲಿ ಸೂಕ್ಷ$್ಮ ಮತ್ತು ಸಣ್ಣ ಕೈಗಾರಿಕೆಗಳು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುತ್ತಿವೆ. ಜಿಲ್ಲೆಯಲ್ಲಿ ಈಗಾಗಲೇ ನರಸಾಪುರ, ವೇಮಗಲ್​ ಹಾಗೂ ಮಾಲೂರು ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿರುವುದು ಜಿಲ್ಲೆಗೆ ವರದಾನವಾಗಿದೆ. ಆರ್ಥಿಕ ಬೆಳವಣಿಕೆ, ಉದ್ಯೋಗ ಅವಕಾಶಕ್ಕೆ ವಿಫುಲ ಅವಕಾಶಗಳು ಸಹ ಲಭಿಸಿವೆ ಎಂದು ಅಭಿಪ್ರಾಯಪಟ್ಟರು.
    ಕೈಗಾರಿಕಾ ಟೌನ್​ ಶಿಪ್​ ಸ್ಥಾಪನೆಗೆ ಕ್ರಮ
    ಜಿಲ್ಲೆಯ ಕೆಜಿಎ್​ ಸಮೀಪ ಮತ್ತೊಂದು ಕೈಗಾರಿಕಾ ಟೌನ್​ ಶಿಪ್​ ಹಾಗೂ ಕಾರಿಡಾರ್​ ನಿರ್ಮಾಣದ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಇದಕ್ಕೆ ಪೂರಕವಾಗಿ ಬೆಮೆಲ್​ ಸಂಸ್ಥೆಯವರು ಉಪಯೋಗಿಸಿಕೊಳ್ಳದ 900ಗೂ ಅಧಿಕ ಜಮೀನನ್ನು ಸರ್ಕಾರದ ವಾಪಸ್​ ಪಡೆದು ಕೈಗಾರಿಕೆಗಳಿಗೆ ಮಂಜೂರು ಮಾಡಿದೆ. ಕೈಗಾರಿಕಾ ಹಬ್​ ನಿರ್ಮಾಣವಾಗಲಿದೆ ಎಂದು ಅಕ್ರಂ ಪಾಷ ತಿಳಿಸಿದರು.
    ಬೆಂಗಳೂರು ಚೆನ್ನೈ ಕಾರಿಡಾರ್​ ಎಕ್ಸ್​ಪ್ರೆಸ್​ ಹೈವೆ ಹಾದು ಕೆಜಿಎ್​ ಸಮೀಪ ಹೋಗಿದ್ದು ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ ಕಾರ್ಮಿಕರಿಗೆ ಯಾವುದೇ ರೀತಿ ಕೊರತೆಯಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುವ ಯೋಜನೆಗಳ ಪ್ರಯೋಜನೆ ಪಡೆದುಕೊಂಡು ಯುವಕರು ಸ್ವಂ ಉದ್ಯಮಗಳನ್ನು ಸ್ಥಾಪನೆ ಮಾಡಿ ಮತ್ತಷ್ಟು ಮಂದಿಗೆ ಕೆಲಸ ನೀಡಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
    ಕೋಲಾರದಲ್ಲಿ ಕೃಷಿ ಉದ್ಯಮ ಅಭಿವೃದ್ಧಿ ಯಾಗಬೇಕಾಗಿದೆ. ಸಾಲ ಮಂಜೂರು ಮಾಡಲು ಇರುವ ತೊಡಕುಗಳನ್ನು ಬ್ಯಾಂಕ್​ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಬಗೆಹರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
    ಸಾಲದ ಪ್ರಯೋಜನ ಪಡೆದುಕೊಳ್ಳಿ
    ಕೆನರಾ ಬ್ಯಾಂಕ್​ ಸಹಾಯಕ ಮುಖ್ಯ ವ್ಯವಸ್ಥಾಪ ಅಶೋಕ್​ ಕುಮಾರ್​ ಮಾತನಾಡಿ, ಯಾವುದೇ ರೀತಿ ಉದ್ಯಮ ಪ್ರಾರಂಭ ಮಾಡಲು ಹಣಕಾಸು ಮುಖ್ಯ. ಇದಕ್ಕೆ ಪೂರಕ ಸಾಲ ಸೌಲಭ್ಯವನ್ನು ಬ್ಯಾಂಕ್​ಗಳು ಕಲ್ಪಿಸುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಲು ಸಾರ್ವಜನಿಕರು ಮುಂದಾಗಬೇಕು ಎಂದು ತಿಳಿಸಿದರು.
    ಕೇಂದ್ರ, ರಾಜ್ಯ ಸರ್ಕಾರಗಳು ಸಬ್ಸಡಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ನಿರುದ್ಯೋಗ ನಿವಾರಣೆಗಾಗಿ ವಿವಿಧ ರೀತಿಯ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುತ್ತಿದೆ. ಲಾನುಭವಿಗಳಿಗೆ ಸಾಲ ನೀಡಲು ಸರ್ಕಾರಗಳು ಗುರಿ ನೀಡಿವೆ. ಅರ್ಹರು ಸ್ವಯಂ ಪ್ರರಿತರಾಗಿ ಸಾಲ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
    ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು, ಸಿಬ್ಬಂದಿ ಅಲೆದಾಡಿಸುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಸೌಲಭ್ಯ ಪಡೆದುಕೊಳ್ಳಲು ಅನೇಕ ಮಾನದಂಡಗಳನ್ನು ವಿಧಿಸುತ್ತಾರೆ. ಇದರಿಂದಾಗಿ ಸಾಲ ಮಂಜೂರು ಮಾಡಲು ತಡವಾಗುತ್ತದೆ. ನೇರವಾಗಿ ಅರ್ಜಿ ಸಲ್ಲಿಸುವ ಬದಲು ಪ್ರೋಟಲ್​ನಲ್ಲಿ ಅರ್ಜಿ ನೋಂದಣಿ ಮಾಡಿದರೆ ಕೆಲವೇ ತಾಸುಗಳಲ್ಲಿ ಮಂಜೂರಾಗುತ್ತದೆ ಎಂದು ಹೇಳಿದರು.
    ಬ್ಯಾಂಕ್​ ಖಾತೆಯ ವಹಿವಾಟಿನ ಗಾತ್ರವನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಬ್ಯಾಂಕ್​ಗಳಿಗೆ ಗ್ರಾಹಕರೆ ಅತಿ ಮುಖ್ಯ. ಸಾಲ ಕೇಳಿದಾಗ ಮರು ಪಾವತಿ ಮಾಡುತ್ತಾರ, ಇಲ್ಲವೊ ಎಂಬುದನ್ನು ಸಹ ಗಮನಿಸುತ್ತಾರೆ. ಸಿವಿಲ್​ ಸ್ಕೊರ್​ ಸಮರ್ಪಕವಾಗಿ ಇದ್ದರೆ ಸುಲಭವಾಗಿ ಸಾಲ ದೊರೆಯುತ್ತದೆ ಎಂದು ತಿಳಿಸಿದರು.
    ಕೃಷಿ ಉದ್ಯಮಕ್ಕೆ ಒತ್ತು ನೀಡಿ
    ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಪಿ.ನಾಗೇಶ್​ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿರುವುದರಿಂದ ಸ್ಥಳಿಯರಿಗೆ ಅತಿ ಹೆಚ್ಚು ಉದ್ಯೋಗ ಸಿಕ್ಕಿದೆ. ಇದೀಗ ಮತ್ತಷ್ಟು ಕೈಗಾರಿಕೆಗಳು ಜಿಲ್ಲೆಗೆ ಆಗಮಿಸಲು ಮುಂದಾಗಿದ್ದು ಭೂಸ್ವಾಧಿನ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.
    ಹೋಂಡಾ ಕಂಪನಿಯ ಮತ್ತೊಂದು ಟಕ ಸ್ಥಾಪನೆ ಮಾಡಿದ್ದು ಅತಿ ಶ್ರೀದಲ್ಲೇ ಪ್ರಾರಂಭವಾಗಲಿದೆ. ಜಿಲ್ಲೆಯು ಬರಪೀಡಿತ ಪ್ರದೇಶವಾಗಿದ್ದು ಅದರೂ ಸಹ ಲಭ್ಯವಿರುವ ನೀರಿಗೆ ಟೋಮ್ಯಾಟೊ, ಮಾವು ಸೇರಿದಂತೆ ಹಲವು ತರಕಾರಿಗಳನ್ನು ರೈತರು ಬೆಳೆಯುತ್ತಿದ್ದಾರೆ. ಇದರಿಂದಾಗಿ ಕೃಷಿ ಉದ್ಯಮಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ತಿಳಿಸಿದರು.
    ಕಾಸಿಯಾ ಅಧ್ಯಕ್ಷ ಸಿ.ಎ.ಶಶಿಧರ ಶೆಟ್ಟಿ ಮಾತನಾಡಿ, ಕಾಸಿಯಾ ಸಂಸ್ಥೆಯಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅರಿವು ಕಾರ್ಯಾಗಾರ ನಡೆಸಲಾಗುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.
    ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೂಕ್ಷ$್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಹಲವು ಯೋಜನೆಗಳನ್ನು ರೂಪಿಸಿವೆ. ಆದರೆ ಉದ್ಯಮಿಗಳಿಗೆ ಈ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ. ಹಾಗಾಗಿ ಯೋಜನೆಯ ಪ್ರಯೋಜನವಾಗುತ್ತಿಲ್ಲ. ಬ್ಯಾಂಕ್​ಗು ಸಾಲ ಕೊಡುವಲ್ಲಿ ವಿಳಂಬ ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
    ಸರ್ಕಾರಗಳು ಜಾರಿಗೆ ತಂದಿರುವ ಯಾವ ಯಾವ ಯೋಜನೆಗಳಿಗೆ ಸಬ್ಸಿಡಿ ಸಿಗುತ್ತದೆ. ಎಂಬುದರ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಯೋಜನೆಗಳ ಲಾಭ ಪಡೆಯುತ್ತಿರುವವರ ಸಂಖ್ಯೆ ಕಡಿಮೆ ಎಂದು ತಿಳಿಸಿದರು.
    ಸಿಡ್ಬಿ ಮುಖ್ಯಸ್ಥೆ ಸ್ವಾತಿ, ಸಂಪನ್ಮೂಲ ವ್ಯಕ್ತಿಗಳಾದ ಭವಾನಿ, ಟಿ.ದೀಪಿಕಾ ಮಹದೇವ್​ ಮತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts