More

    ಬುಕ್​ ಮಾಡಿದ್ದು ಮೊಬೈಲ್​ ಫೋನ್​, ಪಾರ್ಸೆಲ್​​ನಲ್ಲಿ ಇದ್ದಿದ್ದು ಸೋಪ್​!

    ನವದೆಹಲಿ: ಇ-ಕಾಮರ್ಸ್​ ವೆಬ್​ಸೈಟ್​​ನಲ್ಲಿ ವಹಿವಾಟು ನಡೆಸಿದ್ದಕ್ಕೆ ಇಲ್ಲೊಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರುವಂತಾಗಿದೆ. ಕೇಳಿದ್ದು ಎಲ್ಲೆಡೆಗಿಂತ ಕಡಿಮೆ ಬೆಲೆಗೆ ಮನೆ ಬಾಗಿಲಿಗೇ ಬಂದು ಬಿಡುತ್ತದೆ ಎಂದು ಇ-ಕಾಮರ್ಸ್​ ವಹಿವಾಟನ್ನೇ ನೆಚ್ಚಿಕೊಂಡಿರುವ ಹಲವರಂತೆ ಇವರೂ ಬುಕ್​ ಮಾಡಿದ್ದು, ಈಗ ಪೊಲೀಸ್​ ಠಾಣೆ ವರೆಗೂ ಹೋಗುವಂತೆ ಮಾಡಿದೆ.

    ಇಂಡಿಯನ್ ಕೌನ್ಸಿಲ್ ಆಫ್​ ಅಗ್ರಿಕಲ್ಚರಲ್​ ರಿಸರ್ಚ್​ (ಐಸಿಎಆರ್) ಸಂಸ್ಥೆಯಲ್ಲಿ ಸೆಕ್ಷನ್ ಆಫೀಸರ್ ಆಗಿರುವ ಸೋಹನ್​ ಲಾಲ್​ ಎಂಬುವವರಿಗೆ ಹೀಗಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಸೋಹನ್​ ಅವರು ಅ.19ರಂದು ಇ-ಕಾಮರ್ಸ್ ವೆಬ್​ಸೈಟ್​ವೊಂದರಲ್ಲಿ ಮೊಬೈಲ್​ಫೋನ್​ ಬುಕ್ ಮಾಡಿದ್ದರು.

    ದೆಹಲಿಯ ಮಯೂರ್ ವಿಹಾರ್ ಫೇಸ್​-3ನಲ್ಲಿ ಇರುವ ಅವರ ನಿವಾಸಕ್ಕೆ ಅ. 21ರ ಮಧ್ಯಾಹ್ನ ಬಂದಿದ್ದ ಹುಡುಗನೊಬ್ಬ ಪಾರ್ಸೆಲ್ ಹಸ್ತಾಂತರಿಸಿ ಹೋಗಿದ್ದ. ಆದರೆ ಪಾರ್ಸೆಲ್ ಬಿಡಿಸಿ ನೋಡಿದಾಗ ಅದರಲ್ಲಿ ಮೊಬೈಲ್​ ಫೋನ್ ಬದಲು ಸೋಪ್ ಇತ್ತು. ಈ ಬಗ್ಗೆ ಅವರು ಗಾಜಿಪುರ್ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಸೋಹನ್​ ಕೆಲವು ದಿನಗಳ ಹಿಂದೆ ಇ-ಕಾಮರ್ಸ್​ ವೆಬ್​ಸೈಟ್​ ಮೂಲಕ ಫೋನ್​ವೊಂದನ್ನು ಖರೀದಿಸಿದ್ದರು. ಅವರ ಹಿರಿಯ ಅಧಿಕಾರಿ ಅಂಥದ್ದೇ ಫೋನ್​ಗೆ ಬೇಡಿಕೆ ಇಟ್ಟ ಕಾರಣ, ಸೋಹನ್ ಮತ್ತೊಂದು ಫೋನ್​ ಬುಕ್ ಮಾಡಿದ್ದರು ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts