More

    ಕೊಕೊ ದ್ವೀಪ: ನೆಹರು ಪ್ರಮಾದದಿಂದ ಭಾರತದ ಸಾರ್ವಭೌಮತ್ವಕ್ಕೇ ಕೊಕ್ಕೆ!

    ಕೊಕೊ ದ್ವೀಪ: ನೆಹರು ಪ್ರಮಾದದಿಂದ ಭಾರತದ ಸಾರ್ವಭೌಮತ್ವಕ್ಕೇ ಕೊಕ್ಕೆ!| ಗಿರೀಶ್ ಲಿಂಗಣ್ಣ ವ್ಯವಸ್ಥಾಪಕ ನಿರ್ದೇಶಕರು
    ಎ.ಡಿ.ಡಿ. ಇಂಜಿನಿಯರಿಂಗ್ ಇಂಡಿಯಾ (ಇಂಡೋ-ಜರ್ಮನ್ ಸಂಸ್ಥೆ)

    ಭಾರತದ ಆಯಕಟ್ಟಿನ ಮತ್ತು ನಿರ್ಣಾಯಕ ಭೂಪ್ರದೇಶವನ್ನು ಸಂಭವನೀಯ ಪರಿಣಾಮಗಳ ಬಗ್ಗೆ ಯೋಚಿಸದೆ ವಿದೇಶಿ ಶಕ್ತಿಗಳಿಗೆ ಬಿಟ್ಟುಕೊಡುವ ಮೂಲಕ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸಾಕಷ್ಟು ಕುಖ್ಯಾತರಾಗಿದ್ದಾರೆ.

    ಚೀನಾ ಮತ್ತು ಪಾಕಿಸ್ತಾನಕ್ಕೆ ಭಾರತೀಯ ಭೂಪ್ರದೇಶವನ್ನು ಉಡುಗೊರೆಯಾಗಿ ನೀಡಿದ ನೆಹರು ಅವರ ಪ್ರಮಾದವನ್ನು ಸರಿಯಾಗಿ ದಾಖಲಿಸಲಾಗಿದೆ; ಮ್ಯಾನ್ಮಾರ್ ಸರ್ಕಾರದ ಮೂಲಕ ಚೀನಾಕ್ಕೆ ಬಹುತೇಕ ಹಸ್ತಾಂತರಿಸಿರುವ ಬರ್ಮಾಕ್ಕೆ (ಈಗ ಮ್ಯಾನ್ಮಾರ್) ಪ್ರಮುಖ ಆಯಕಟ್ಟಿನ ಕೊಕೊ ದ್ವೀಪಗಳ ಪೈಕಿ ಒಂದನ್ನು ನೆಹರು ಹೇಗೆ ಉಡುಗೊರೆಯಾಗಿ ನೀಡಿದರು ಎಂಬುದು ಯಾರ ಗಮನಕ್ಕೂ ಬಂದಿಲ್ಲ. ಇದರ ಫಲಿತಾಂಶವೆಂದರೆ, ಕ್ಸಿ ಜಿನ್‌ಪಿಂಗ್ ಅವರ ಸರ್ವಾಧಿಕಾರಿ ಆಡಳಿತವು ಈಗ ಆ ದ್ವೀಪಕ್ಕೆ ಪ್ರವೇಶವನ್ನು ಹೊಂದಿದೆ. ಇದನ್ನು ಭಾರತೀಯ ಮಿಲಿಟರಿಯ ಮೇಲೆ ಕಣ್ಣಿಡಲು ಬಳಸಲಾಗಿದೆ ಎಂದು ಬಹುತೇಕ ಅಂದಾಜಿಸಲಾಗಿದೆ.

    ಭೌಗೋಳಿಕವಾಗಿ, ಗ್ರೇಟ್ ಕೊಕೊ ದ್ವೀಪ ಮತ್ತು ಕೊಕೊ ದ್ವೀಪಗಳು ಅಂಡಮಾನ್ ದ್ವೀಪಗಳ ಸಮೂಹದ ಭಾಗವಾಗಿವೆ. ಆದರೆ ಮ್ಯಾನ್ಮಾರ್ ಅವುಗಳನ್ನು ನಿಯಂತ್ರಿಸುತ್ತದೆ. ಬಂಗಾಳ ಕೊಲ್ಲಿಯಲ್ಲಿ ಕೋಲ್ಕತ್ತಾದಿಂದ ಆಗ್ನೇಯಕ್ಕೆ 1,255 ಕಿ.ಮೀ. ದೂರದಲ್ಲಿರುವ ಕೊಕೊ ದ್ವೀಪಗಳು ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಿಂದ ತೈಲ ಮತ್ತು ಅನಿಲ ಆಮದುಗಳನ್ನು ಸಾಗಿಸಲು ಚೀನಾ ಮಲಕ್ಕಾ ಜಲಸಂಧಿಯೊಂದಿಗೆ ಸಂಪರ್ಕಿಸುವ ಪ್ರಮುಖ ಜಲಮಾರ್ಗದ ಮಧ್ಯದಲ್ಲಿದೆ.
    19ನೇ ಶತಮಾನದಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದಲ್ಲಿ ಬ್ರಿಟಿಷ್ ಸರ್ಕಾರವು ಶಿಕ್ಷೆಗಳನ್ನು ಜಾರಿ ಮಾಡುವ ವಸಾಹತುಗಳಾಗಿದ್ದವು. ಕೊಕೊ ದ್ವೀಪವು ಅವರಿಗೆ ಆಹಾರದ (ತೆಂಗಿನಕಾಯಿ) ಪ್ರಮುಖ ಮೂಲವಾಗಿ ಕಾರ್ಯನಿರ್ವಹಿಸಿತು.

    1947ರಲ್ಲಿ ಬ್ರಿಟಿಷರು ದೇಶವನ್ನು ತೊರೆಯಲು ಮುಂದಾದಾಗ, ತಮ್ಮ ಶ್ರೇಷ್ಠತೆಯ ವಿಕಾರಗಳಿಂದ ಮಾರ್ಗದರ್ಶಿತರಾಗಿದ್ದ ಸಾಮ್ರಾಜ್ಯಶಾಹಿಗಳು, ಭಾರತವು ಬಲಿಷ್ಠವಾಗಿ ಹೊರ ಹೊಮ್ಮುವ ಉಜ್ವಲ ಅವಕಾಶವನ್ನು ಹಾಳುಮಾಡಲು ಉತ್ಸುಕರಾಗಿದ್ದರು. ಮೌಂಟ್‌ ಬ್ಯಾಟನ್‌ ಅವರಂತೆ ಕೆಲವರು ಪ್ರಾಕ್ಸಿ ಚಾನೆಲ್‌ಗಳ ಮೂಲಕ ಭಾರತದ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳಲು ಬಯಸಿದ್ದರು. ಅದಕ್ಕಾಗಿ ಯೋಜನೆಯನ್ನೂ ರೂಪಿಸಿದ್ದರು. ಬ್ರಿಟಿಷ್ ಸೈನ್ಯದ ಮುಖ್ಯಸ್ಥರು ಭಾರತದ ಮುಖ್ಯ ಭೂಭಾಗದಲ್ಲಿಲ್ಲದ ಕೆಲವು ಪ್ರದೇಶಗಳ ಮೇಲೆ ತಮ್ಮ ಹಿಡಿತವನ್ನು ಉಳಿಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಿದರು.

    ಬ್ರಿಟಿಷರು ಈ ಆಯಕಟ್ಟಿನ ಪ್ರಮುಖ ದ್ವೀಪಗಳನ್ನು ಹೇಗೆ ತಮ್ಮ ಸ್ವಾಧೀನದಲ್ಲಿ ಇಟ್ಟುಕೊಳ್ಳಲು ಬಯಸಿದ್ದರು ಎಂಬುದರ ಕಾರ್ಯತಂತ್ರವನ್ನು ಬ್ರಿಟಿಷ್ ಸೈನ್ಯದ ಜಂಟಿ ಯೋಜನಾ ಸಿಬ್ಬಂದಿಯು ಜೂನ್ 13, 1947ರಂದು ಸಿದ್ಧಪಡಿಸಿದ ಒಂದು ವರದಿಯು ಬಹಿರಂಗಪಡಿಸುತ್ತದೆ. “ವಿರಳವಾದ ಜನವಸತಿ ಇರುವ, ಹವಳದ ಪಟ್ಟಿಗಳನ್ನು ಹೊಂದಿರುವ ಲಕ್ಷದ್ವೀಪಗಳ ಸಮೂಹವು, ಭಾರತದಲ್ಲಿ ನಮಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ವಿಮಾನ ನಿಲ್ದಾಣದ ದೃಷ್ಟಿಕೋನದಿಂದ ಕಾರ್ಯತಂತ್ರದ ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತದೆ. ಅಂತಹ ಸಂದರ್ಭಗಳಲ್ಲಿ, ನಮ್ಮ ವಾಯುಯಾನ ಕ್ಷೇತ್ರದ ಬಲವರ್ಧನೆಗೆ ಮತ್ತು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದೂರದ ಪೂರ್ವ ದೇಶಗಳಿಗೆ ಬೆಂಬಲ ಮಾರ್ಗಕ್ಕೆ ಈ ದ್ವೀಪಗಳು ಅತ್ಯಗತ್ಯವಾಗಿರುತ್ತವೆ. ಬ್ರಿಟಿಷ್ ನೌಕಾಪಡೆಯು ದ್ವೀಪಗಳನ್ನು ಬಳಸುವಂತಿಲ್ಲ. ಏಕೆಂದರೆ ಅವುಗಳು ಕೇವಲ ಮುಕ್ತ ಲಂಗರು ಪ್ರದೇಶಗಳಾಗಿದ್ದವು. ಭಾರತದಲ್ಲಿನ ಉತ್ತರಾಧಿಕಾರಿ ಸರ್ಕಾರಗಳು ನಮಗೆ ಈ ಸೌಲಭ್ಯಗಳನ್ನು ನೀಡುತ್ತವೆ ಎಂದು ನಾವು ಭಾವಿಸಲು ಸಾಧ್ಯವಿಲ್ಲದಿದ್ದರೆ, ನಾವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಅಧಿಕಾರ ಹಸ್ತಾಂತರದಿಂದ ಹೊರಗಿಡಬಹುದಾದರೆ, ನಾವು ಸಿಲೋನ್ಅನ್ನು ಅವಲಂಬಿಸಬೇಕಾಗುತ್ತದೆ,” ಎಂದು ವರದಿ ಹೇಳಿದೆ.

    ಭಾರತದ ಸ್ವಾತಂತ್ರ್ಯದ ದಿನದಂದು, ದ್ವೀಪಗಳು ಸ್ವತಂತ್ರ ಭಾರತದ ಭಾಗವಾಗಬಾರದು. ಆದರೆ, ಭವಿಷ್ಯದಲ್ಲಿ ಅವುಗಳ ವಿಷಯ ಇತ್ಯರ್ಥವಾಗುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಬರುವವರೆಗೆ ಭಾರತದ ಗವರ್ನರ್ ಜನರಲ್ ಅಧೀನದಲ್ಲಿ ಕಮಿಷನರ್ ಆಡಳಿತ ನಡೆಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರು ಬಯಸಿದ್ದರು.

    ಕೊಕೊ ದ್ವೀಪ: ನೆಹರು ಪ್ರಮಾದದಿಂದ ಭಾರತದ ಸಾರ್ವಭೌಮತ್ವಕ್ಕೇ ಕೊಕ್ಕೆ!

    ಲಾರ್ಡ್ ಮೌಂಟ್‌ ಬ್ಯಾಟನ್ ಅವರೊಂದಿಗಿನ ಕೆಲವು ಅನೌಪಚಾರಿಕ ಸಭೆಗಳ ಅನಂತರ, ಭಾರತದ ಆಗಿನ ವೈಸ್‌ರಾಯ್ ಜವಾಹರಲಾಲ್ ನೆಹರು ಈ ಪ್ರದೇಶವನ್ನು ‘ಬಂಜರು ಭೂಮಿ’ ಎಂದು ಪರಿಗಣಿಸಿದರು ಮತ್ತು ಅದನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟರು. ಬ್ರಿಟಿಷರು ಅದನ್ನು ಬರ್ಮಾದವರಿಗೆ ಗುತ್ತಿಗೆ ನೀಡಿದರು. 1994ರಿಂದ ಈಚೆಗೆ, ಮ್ಯಾನ್ಮಾರ್ ಸರ್ಕಾರವು ಈ ದ್ವೀಪವನ್ನು ಚೀನಿಯರಿಗೆ ಗುತ್ತಿಗೆ ನೀಡಿದೆ ಎಂದು ಹಲವಾರು ಮಾಧ್ಯಮ ವರದಿಗಳಲ್ಲಿ ಬಹಿರಂಗಪಡಿಸಲಾಗಿದೆ. ಚೀನೀಯರು ಇದನ್ನು ಡಿಆರ್‌ಡಿಒ (DRDO) ದ ಕ್ಷಿಪಣಿ ಕಾರ್ಯಕ್ರಮಗಳ ಮೇಲೆ ಕಣ್ಣಿಡುವ ಕೇಂದ್ರವಾಗಿ ಮಾರ್ಪಡಿಸಿದ್ದಾರೆ.
    ಭಾರತದ ಕ್ಷಿಪಣಿ ಉಡಾವಣೆಗಳ ಪ್ರಯತ್ನಗಳ ಮೇಲೆ ಚೀನಾ ಸದಾ ಕಣ್ಣಿಟ್ಟಿರುತ್ತದೆ. ಭಾರತವು ಹಿಂದೂ ಮಹಾಸಾಗರ ಅಥವಾ ಬಂಗಾಳ ಕೊಲ್ಲಿಯಲ್ಲಿ ತನ್ನ ಯಾವುದೇ ಚಟುವಟಿಕೆಗಳನ್ನು ಕಾರ್ಯಗತಗೊಳಿಸಿದಾಗಲೆಲ್ಲ ಚೀನಾದ ಕಣ್ಣು ಅದರ ಮೇಲೆ ಬಿದ್ದಿರುತ್ತದೆ.

    ಗ್ರೇಟರ್ ಕೊಕೊವನ್ನು ದೀರ್ಘಕಾಲದಿಂದ ಚೀನೀಯರು ನಿರ್ವಹಿಸುತ್ತಿದ್ದಾರೆಂದು ತಿಳಿದುಬಂದಿದೆ. ಎರಡು ದಶಕಗಳಲ್ಲಿ ಸಿಗ್ನಲ್ ಗುಪ್ತಚರ ಸೌಲಭ್ಯಗಳು, ಕಡಲ ನೆಲೆಗಳು, ರಾಡಾರ್ ಸೌಲಭ್ಯ (ಇದು ಸ್ಪಷ್ಟವಾಗಿದೆ, ಬಹುತೇಕ ದೃಢಪಟ್ಟಿದೆ) ಅಳವಡಿಸಿರುವ ಚೀನಾ, ಭಾರತೀಯ ಸೇನಾ ಚಟುವಟಿಕೆಯ ಮೇಲೆ ಗಮನವಿರಿಸುವ ಸಾಮಾನ್ಯ ಕಣ್ಗಾವಲು ಕೇಂದ್ರವಾಗಿ ಮಾಡಿಕೊಂಡಿದೆ.

    ಕೊಕೊ ದ್ವೀಪಗಳಲ್ಲಿ ಮಿಲಿಟರಿ ಉಪಸ್ಥಿತಿಯು ನಿಜವಾಗಿಯೂ ಸ್ಥಾಪನೆಗೊಂಡರೆ, ಈ ಪ್ರದೇಶದಲ್ಲಿನ ಇತರ ಶಕ್ತಿಗಳೊಂದಿಗೆ ಭಾರತದ ನೌಕಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಚೀನಾಕ್ಕೆ ಮೇಲುಗೈ ಲಭಿಸುತ್ತದೆ. ಇದು ಆಸ್ಟ್ರೇಲಿಯಾ ಮತ್ತು ಅಮೆರಿಕದಂತಹ ಇತರ ಪ್ರಾದೇಶಿಕ ಶಕ್ತಿಗಳ ಮೇಲೂ ಪರಿಣಾಮ ಬೀರುತ್ತದೆ ಮತ್ತು ಹಿಂದೂ ಮಹಾಸಾಗರದಲ್ಲಿ ಚೀನಾದ ನೆಲೆಯನ್ನು ಬಲಪಡಿಸುತ್ತದೆ.

    ಭಾರತವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಕ್ರಮೇಣವಾಗಿ ಮಿಲಿಟರಿ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ. ಆದರೆ ತಕ್ಷಣದ ನೆರೆಹೊರೆಯಲ್ಲಿ ಚೀನಾದೊಂದಿಗೆ, ಅದರ ಚಟುವಟಿಕೆಗಳ ಬಗ್ಗೆ ಆತಂಕವನ್ನು ಹೊಂದಿರಬೇಕು ಮತ್ತು ಅತ್ಯಂತ ಜಾಗರೂಕರಾಗಿರಬೇಕು. ನೆಹರೂ ಅವರು ಭಾರತದ ಪರವಾದ ನಿಲುವು ತಳೆದಿದ್ದರೆ ಈಗ ಅವೆಲ್ಲವನ್ನೂ ತಪ್ಪಿಸಬಹುದಿತ್ತು.

    ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆ: ನಾಳೆ ಹೈಗ್ರೌಂಡ್ಸ್ ಪೊಲೀಸರಿಂದ ಸ್ಥಳ ಮಹಜರು

    ಠಾಣೆಗೇ ಬಂದಿತ್ತು ಎಸ್​ಪಿ ಕಾರು: ಸರ್ಕಲ್ ಇನ್​ಸ್ಪೆಕ್ಟರ್​ಗೂ ಮುಳುವಾಯ್ತು ಎಸ್​ಐ ದರ್ಬಾರು…

    ಹೃದಯಾಘಾತಕ್ಕೀಡಾಗಿ 24 ವರ್ಷದ ಪೈಲ್ವಾನ್ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts