More

    VIDEO| ಏನೀ ಪವಾಡ? ತನ್ನಷ್ಟಕ್ಕೆ ಆರಿ ಮತ್ತೆ ಬೆಳಗುವ ಶಿವಲಿಂಗ ಮೇಲಿನ ಮಣ್ಣಿನ ದೀಪ!

    ಚೆನ್ನೈ: ಕೆಲವೊಮ್ಮೆ ದೇವರ ಅಸ್ತಿತ್ವದ ಬಗ್ಗೆ ನಮ್ಮಲ್ಲಿ ಸಂಶಯ ಮೂಡುವುದು ಸಹಜ. ಆದರೆ, ನಂಬಲಾಗದ ಕೆಲ ಪವಾಡಗಳು ನಮ್ಮ ಕಣ್ಣ ಮುಂದೆ ನಡೆದಾಗ ಯಾವುದೋ ರೂಪದಲ್ಲಿ ದೇವರಿದ್ದಾನೆ. ಪವಾಡಗಳ ಮೂಲಕ ಆಗಾಗ ತನ್ನ ಅಸ್ತಿತ್ವವನ್ನು ಸಾಬೀತು ಮಾಡುತ್ತಾನೆ ಎಂಬುದು ಜನರ ನಂಬಿಕೆ.

    ಇದೀಗ ಇಂಥದ್ದೇ ಒಂದು ಘಟನೆ ಶಿವನ ಸನ್ನಿಧಿಯಲ್ಲಿ ನಡೆದಿದೆ. ತಮಿಳುನಾಡಿನ ಈರೋಡ್​ ಜಿಲ್ಲೆಯ ನಾಥಕಡೈಯುರ್​ನಲ್ಲಿನ ಶಿವನ ದೇವಸ್ಥಾನದಲ್ಲಿ ಎನ್ನಲಾಗಿದೆ. ಆದರೂ ಸ್ಥಳದ ಬಗ್ಗೆ ಮಾಹಿತಿ ಖಚಿತವಾಗಿಲ್ಲ.

    ಇದನ್ನೂ ಓದಿ: ಆಗಸದಲ್ಲಿ ವಿಚಿತ್ರ ವಸ್ತು ನೋಡಿ ಬೆಚ್ಚಿಬಿದ್ದ ಉತ್ತರ ಪ್ರದೇಶ ಜನ: ಏಲಿಯನ್​ ಅಂದುಕೊಂಡವರಿಗೆ ಕಾದಿತ್ತು ಶಾಕ್​!

    ದೇವಸ್ಥಾನದಲ್ಲಿ ಶಿವಲಿಂಗ ಮೇಲೆ ಮಣ್ಣಿನ ದೀಪವಿದ್ದು, ಅದರಲ್ಲಿನ ಬೆಳಕು ಪ್ರತಿಬಾರಿ ಕೆಲ ನಿಮಿಷಗಳ ಬಳಿ ತನ್ನಷ್ಟಕ್ಕೆ ತಾನೇ ಆರಿ ಮತ್ತೆ ಬೆಳಗುತ್ತದೆ. ಈ ಕೌತುಕದ ವಿಡಿಯೋವನ್ನು ಕಾರ್ತಿಕ್​ ಎಂಬುವರು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, ಭಾರಿ ವೈರಲ್​ ಆಗಿದೆ.

    ವಿಡಿಯೋ ನಿನ್ನೆಯಷ್ಟೇ (ಅ. 17) ಅಪ್​ಲೋಡ್​ ಮಾಡಲಾಗಿದ್ದು, ಈಗಾಗಲೇ 13 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಮಾಡಿದ್ದು, 500ಕ್ಕೂ ಹೆಚ್ಚು ರೀಟ್ವೀಟ್​ ಆಗಿದೆ. ಸಾಕಷ್ಟು ಮಂದಿ ವಿಡಿಯೋ ಕುರಿತು ನಿಜಕ್ಕೂ ಪವಾಡವೇ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

    ಏನೀ ಪವಾಡ? ತನ್ನಷ್ಟಕ್ಕೆ ತಾನೇ ಆರಿ ಮತ್ತೆ ಬೆಳಗುವ ಶಿವಲಿಂಗದ ಮೇಲಿನ ಮಣ್ಣಿನ ದೀಪ!

    ದೇವಸ್ಥಾನದಲ್ಲಿ ಶಿವಲಿಂಗದ ಮೇಲಿರುವ ಮಣ್ಣಿನ ದೀಪದಲ್ಲಿನ ಬೆಳಕು ಪ್ರತಿಬಾರಿ ಕೆಲ ನಿಮಿಷಗಳ ಬಳಿ ತನ್ನಷ್ಟಕ್ಕೆ ತಾನೇ ಆರಿ ಮತ್ತೆ ಬೆಳಗುತ್ತದೆ.

    Posted by Vijayavani on Saturday, October 17, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts