More

    ವಿಶ್ವದ ಅತ್ಯಂತ ಬೆಲೆ ಬಾಳುವ ಟೀಪಾಟ್ ಬೆಲೆ 24 ಕೋಟಿ ರೂ.

    ನವದೆಹಲಿ: ಚಹಾವು ಭಾರತದಾದ್ಯಂತ ಅತ್ಯಂತ ಪ್ರಿಯವಾದ ಪಾನೀಯಗಳಲ್ಲಿ ಒಂದಾಗಿದೆ. ಮಸಾಲಾ ಚಾಯ್‌ನಿಂದ ಬ್ಲ್ಯಾಕ್​​ ಟಿ ಎಂದು ಹೀಗೆ ಹಲವಾರು ವಿಧದ ಚಹಾಗಳು ಎಲ್ಲೆಡೆ ಲಭ್ಯವಿವೆ. ಸಾಂಪ್ರದಾಯಿಕವಾಗಿ, ಈ ಪಾನೀಯವನ್ನು ಒಂದು ಕಪ್​​ನಲ್ಲಿ ಹಾಕಿ ನೀಡಲು ಚಹಾ ಸೆಟ್ ಅನ್ನು ಬಳಸಲಾಗುತ್ತಿತ್ತು. ಇತ್ತೀಚೆಗೆ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ 2016 ರಿಂದ ದಾಖಲೆಯನ್ನು ಹೊಂದಿರುವ ವಿಶ್ವದ ಅತ್ಯಂತ ಬೆಲೆಬಾಳುವ ಟೀಪಾಟ್ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದೆ.

    ಇದನ್ನೂ ಓದಿ: ನಕಲಿ ಪ್ರಮಾಣಪತ್ರ ಬಳಸಿ ನೇಮಕಾತಿ ಪಡೆದುಕೊಂಡಿದ್ದ ಸಂಚುಕೋರ

    ಐಷಾರಾಮಿ ಟೀಪಾಟ್ ಅನ್ನು 2016 ಸೆಪ್ಟೆಂಬರ್ 6ರಂದು ಅತ್ಯಂತ ಬೆಲೆಬಾಳುವ ಟೀಪಾಟ್ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗುರುತಿಸಿದೆ. ‘ದಿ ಇಗೋಯಿಸ್ಟ್’ ಎಂಬ ಶೀರ್ಷಿಕೆಯ ಟೀಪಾಟ್ ಅನ್ನು ಯುಕೆ ಮೂಲದ ಚಾರಿಟಿ ಎನ್. ಸೆಟಿಯಾ ಫೌಂಡೇಶನ್ ನಿಯೋಜಿಸಿದೆ ಮತ್ತು ಲಂಡನ್‌ನ ನ್ಯೂಬಿ ಟೀಸ್ ಪ್ರಾಯೋಜಿಸಿದೆ. ಇಟಾಲಿಯನ್ ಆಭರಣ ವ್ಯಾಪಾರಿ ಫುಲ್ವಿಯೊ ಸ್ಕ್ಯಾವಿಯಾ ತಯಾರಿಸಿದ್ದಾರೆ. 1658 ವಜ್ರಗಳಿಂದ ಆವರಿಸಿದೆ. ಇದರ ಬೆಲೆ 3 ಮಿಲಿಯನ್ ಡಾಲರ್​ ಎಂದರೆ  24 ಕೋಟಿ ರೂ. ಆಗಿದೆ.

    ಇದನ್ನೂ ಓದಿ: ನಕಲಿ ರೈತರಿಗೆ ಬೋನಫೈಡ್ ಸರ್ಟಿಫಿಕೇಟ್; ತೆರಿಗೆ ವಂಚಿಸಲು ಕೃಷಿಕರ ಹೆಸರಲ್ಲಿ ನೋಂದಣಿ

    ಟೀಪಾಟ್ ತಯಾರಿಕೆಯಲ್ಲಿ 18-ಕ್ಯಾರಟ್ ಚಿನ್ನದ ಬೇಸ್ ಮತ್ತು ಚಿನ್ನದ ಲೇಪಿತ ಬೆಳ್ಳಿಯನ್ನು ಬಳಸಲಾಗುತ್ತದೆ. ಆನೆಯ ದಂತದಿಂದ ಹ್ಯಾಂಡಲ್ ಅನ್ನು ರೂಪಿಸಲು ಬಳಸಲಾಯಿತು. ಇದಲ್ಲದೆ, ಟೀಪಾಟ್ ಮುಚ್ಚಳದಲ್ಲಿ 386 ಅಧಿಕೃತ ಮಾಣಿಕ್ಯಗಳನ್ನು ಬಳಸಲಾಗಿದೆ. ಇದು ಹೊರಭಾಗಕ್ಕೆ ಇನ್ನಷ್ಟು ಭವ್ಯವಾದ ನೋಟವನ್ನು ನೀಡುತ್ತದೆ.

    ಬಿಹಾರದಲ್ಲಿ ಪದವಿ ಪ್ರಮಾಣಪತ್ರ ಖರೀದಿಸಿ ಚೀನಾದಲ್ಲಿ ಉನ್ನತ ಶಿಕ್ಷಣ ಪಡೆಯಲು ಯತ್ನಿಸಿದ ಸಂಸದ ಅಂದರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts