More

    2021ರ ಪ್ರಬಲ ಮಿಲಿಟರಿ ದೇಶ ಯಾವುದು? ಒಂದು ವೇಳೆ ಯುದ್ಧ ನಡೆದ್ರೆ ಈ ರಾಷ್ಟ್ರಕ್ಕೆ ಗೆಲುವು ಖಚಿತವಂತೆ!

    ನವದೆಹಲಿ: ದೇಶದ ಭದ್ರತೆಯಲ್ಲಿ ಸೇನೆಯ ಪಾತ್ರ ತುಂಬಾ ಪ್ರಮುಖವಾದದ್ದು, ಪ್ರತಿಯೊಂದು ದೇಶವು ತನ್ನದೆಯಾದ ವಿಶೇಷ ಹಾಗೂ ಶಕ್ತಿಶಾಲಿ ಸೇನಾ ಪಡೆಗಳನ್ನು ಹೊಂದಿರುತ್ತದೆ. ಯಾವ ದೇಶದ ಸೇನೆ ತುಂಬಾ ಬಲಿಷ್ಠವಾಗಿದೆ ಎಂದು ತಿಳಿದುಕೊಳ್ಳುವ ಕುತೂಹಲವೂ ಇರುತ್ತದೆ. ಹೀಗಾಗಿ ಮಿಲಿಟರಿ ಡೈರೆಕ್ಟ್​ ಹೆಸರಿನ ಮಿಲಿಟರಿ ವೆಬ್​ಸೈಟ್​ ಭಾನುವಾರ ಸಮೀಕ್ಷೆಯೊಂದನ್ನು ಪ್ರಕಟಿಸುವ ಮೂಲಕ ಆ ಕುತೂಹಲಕ್ಕೆ ತೆರೆ ಎಳೆದಿದೆ.

    2021ರಲ್ಲಿ ಯಾವ ದೇಶವು ಪ್ರಬಲ ಮಿಲಿಟರಿ ಪಡೆಯನ್ನು ಹೊಂದಿದೆ? ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಸಮೀಕ್ಷೆ, ಮೊದಲ ಸ್ಥಾನದಲ್ಲಿ ಚೀನಾ ಮತ್ತು ನಾಲ್ಕನೇ ಸ್ಥಾನದಲ್ಲಿ ಭಾರತ ಇದೆ ಎಂದಿದೆ.

    ಇದನ್ನೂ ಓದಿರಿ: ರಾತ್ರೋರಾತ್ರಿ ಸಿನಿಮಾ ಹಾಲ್​ಗೆ ನುಗ್ಗಿ ಸ್ನ್ಯಾಕ್ಸ್​​ ಕದ್ದು ತಿಂದು, ಸೆಕ್ಸ್​ ಮಾಡಿ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ದಂಪತಿ!

    ಮಿಲಿಟರಿ ಮೇಲೆ ಸಾಕಷ್ಟು ಹಣವನ್ನು ಖರ್ಚು ಮಾಡುವ ಅಮೆರಿಕ 744 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ರಷ್ಯಾ 699 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಭಾರತ 611 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 56 ಅಂಕಗಳೊಂದಿಗೆ ಫ್ರಾನ್ಸ್​ 5 ಮತ್ತು 43 ಅಂಕಗಳೊಂದಿಗೆ ಬ್ರಿಟನ್​ 43ನೇ ಸ್ಥಾನದಲ್ಲಿವೆ.

    ಮಿಲಿಟರಿ ಬಜೆಟ್, ಸಕ್ರಿಯ ಮತ್ತು ನಿಷ್ಕ್ರಿಯ ಮಿಲಿಟರಿ ಸಿಬ್ಬಂದಿಗಳ ಸಂಖ್ಯೆ, ವಿಮಾನ, ಸಾಗರ, ಭೂಮಿ ಮತ್ತು ಪರಮಾಣು ಸಂಪನ್ಮೂಲಗಳು, ಸರಾಸರಿ ಸಂಬಳ ಮತ್ತು ಉಪಕರಣಗಳು ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿದ ನಂತರ ‘ಸೇನಾ ಸಾಮರ್ಥ್ಯ ಸೂಚ್ಯಂಕ’ ರಚಿಸಲಾಗಿದೆ ಎಂದು ಸಮೀಕ್ಷೆ ಹೇಳಿದೆ.

    ಸೂಚ್ಯಂಕದಲ್ಲಿ 100ಕ್ಕೆ 82 ಅಂಕಗಳೊಂದಿಗೆ ಚೀನಾ ವಿಶ್ವದ ಅತ್ಯಂತ ಪ್ರಭಾವಶಾಲಿ ಮಿಲಿಟರಿ ಆಗಿ ಹೊರಹೊಮ್ಮಿದೆ. “ಬಜೆಟ್, ಮಿಲಿಟರಿ ಮತ್ತು ವಾಯು ಮತ್ತು ನೌಕಾ ಸಾಮರ್ಥ್ಯಗಳಂತಹ ಅಂಶಗಳನ್ನು ಆಧರಿಸಿದ ಈ ಅಂಕಗಳು ಕಾಲ್ಪನಿಕ ಸಂಘರ್ಷದಲ್ಲಿ ಚೀನಾ ವಿಜಯಶಾಲಿಯಾಗಲಿದೆ ಎಂದು ಸೂಚಿಸುತ್ತದೆ” ಎಂದು ಸಮೀಕ್ಷೆ ತಿಳಿಸಿದೆ.

    ಇದನ್ನೂ ಓದಿರಿ: ಅಮೇಜಾನ್ ಉದ್ಯೋಗಿಯ ಭಯಾನಕ ಆತ್ಮಹತ್ಯೆ: ಯೂಟ್ಯೂಬ್​ನಲ್ಲಿ ಹುಡುಕಾಟ, ಸಾವಿನ ರಹಸ್ಯ ಬಿಚ್ಚಿಟ್ಟ ಡೆತ್​ನೋಟ್​!

    ವೆಬ್​ಸೈಟ್​ ಪ್ರಕಾರ ಅಮೆರಿಕವು ತನ್ನ ಸೇನೆಗೆ 732 ಬಿಲಿಯನ್​ ಡಾಲರ್​ ಖರ್ಚು ಮಾಡುತ್ತದೆ. ಉಳಿದಂತೆ ಚೀನಾ 2 ಬಿಲಿಯನ್​ ಮತ್ತು ಭಾರತ 711 ಬಿಲಿಯನ್​ ಡಾಲರ್​ ಖರ್ಚು ಮಾಡುತ್ತದೆ. ಸಮೀಕ್ಷೆ ಪ್ರಕಾರ ಒಂದು ವೇಳೆ ಯುದ್ಧ ನಡೆದರೆ, ನೌಕಾ ಯುದ್ಧದಲ್ಲಿ ಚೀನಾ, ವಾಯುದಾಳಿಯಲ್ಲಿ ಅಮೆರಿಕ ಮತ್ತು ಭೂಸೇನಾ ಯುದ್ಧದಲ್ಲಿ ರಷ್ಯಾ ಜಯ ಸಾಧಿಸಲಿದೆ ಎಂದು ಹೇಳಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹೆಂಡತಿ ಮೇಲಿನ ಅನುಮಾನದ ಹಿನ್ನೆಲೆಯಲ್ಲಿ ಆಕೆಯ ಗುಪ್ತಾಂಗವನ್ನೇ ಹೊಲಿದ ಗಂಡ!

    ‘ಕರ್ನಾಟಕದ ಅಳಿಯ’ನ ಜತೆ ರಾಘವೇಂದ್ರ ರಾಜ್​ಕುಮಾರ್ ಬ್ಯಾಟಿಂಗ್; ಚೇತರಿಸಿಕೊಂಡು ಫೀಲ್ಡ್​ಗಿಳಿದರು ರಾಘಣ್ಣ

    ಮ್ಯಾನ್ಮಾರ್​ ರಾಜಕೀಯ ವಿಪ್ಲವದಿಂದಾಗಿ ಭಾರತದಲ್ಲಿ ದುಬಾರಿಯಾಗಲಿದೆ ಇಡ್ಲಿ, ದೋಸೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts