More

    ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಈತ ಖರ್ಚು ಮಾಡಿದ ಹಣದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ..!

    ವಾಷಿಂಗ್ಟನ್​: ವಯಸ್ಸು ಎಷ್ಟೇ ಆಗಿರಲಿ ದೇಹದ ತೂಕ ಇಳಿಸಿಕೊಳ್ಳುವುದು ಮತ್ತು ಹೆಚ್ಚಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ, ಎತ್ತರ ಹೆಚ್ಚಸಿಕೊಳ್ಳಲು ಒಂದು ನಿರ್ಧಿಷ್ಟ ವಯಸ್ಸಿರುತ್ತದೆ. ಅದನ್ನು ದಾಟಿದ ಮೇಲೆ ಬೆಳವಣಿಗೆ ಆಗುವುದಿಲ್ಲ ಎಂಬುದು ವೈಜ್ಞಾನಿಕ ಸತ್ಯ. ಅಲ್ಲದೆ, ವಯೋ ನಂತರದ ಬೆಳವಣಿಗೆ ಪ್ರಕೃತಿಯ ವಿರುದ್ಧ ಎನ್ನುತ್ತಾರೆ. ಆದರೆ, ಅಮೆರಿಕದ ವ್ಯಕ್ತಿಯೊಬ್ಬ ಕಾಸ್ಮೆಟಿಕ್​ ಸರ್ಜರಿ ಮೂಲಕ ತನ್ನ ಎತ್ತರವನ್ನು ಹೆಚ್ಚಿಸಿಕೊಂಡು ಬೆರಗು ಮೂಡಿಸಿದ್ದಾರೆ.

    ಟೆಕ್ಸಾಸ್​ನ ದಲ್ಲಾಸ್​ ನಿವಾಸಿ ಅಲ್ಫೊನ್ಸೋ ಫ್ಲೋರ್ಸ್​ ಎಂಬಾತ 5 ಅಡಿ 11 ಇಂಚು ಇದ್ದ ತನ್ನ ಎತ್ತರವನ್ನು ಕಾಸ್ಮೆಟಿಕ್​ ಸರ್ಜರಿ ಮೂಲಕ 6 ಅಡಿ 1 ಇಂಚಿಗೆ ಏರಿಸಿಕೊಂಡಿದ್ದಾರೆ. ಚಿಕ್ಕಂದಿನಿಂದಲೂ ಅಲ್ಫೊನ್ಸೋಗೆ ತಾನು ಎತ್ತರವಾಗಿರಬೇಕೆಂದು ಬಯಸಿದ್ದನಂತೆ. 28 ವರ್ಷದ ಪ್ರೀ ಮೆಡಿಕಲ್​ ವಿದ್ಯಾರ್ಥಿಯಾಗಿರುವ ಅಲ್ಫೊನ್ಸೋ ತನ್ನ ಕನಸು ನನಸಾಗಿಸಿಕೊಳ್ಳಲು ಅಂಗ ಉದ್ದದ (ಲಿಂಬ್​ ಲೆಂಥೆನಿಂಗ್​) ಶಸ್ತ್ರಚಿಕಿತ್ಸೆ ಒಳಗಾಗುವ ಮೂಲಕ 6 ಅಡಿಗೂ ಹೆಚ್ಚು ಎತ್ತರವಾಗಿದ್ದಾರೆ.

    ಇದನ್ನೂ ಓದಿರಿ: ಗೇ ಲವ್ವರ್​ಗಾಗಿ ಪತ್ನಿಯನ್ನೇ ಕೊಂದ ಸಲಿಂಗಕಾಮಿ: ನಾದಿನಿ ಬಿಚ್ಚಿಟ್ಟ ಭಯಾನಕ ರಹಸ್ಯ ಇಲ್ಲಿದೆ..

    ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಈತ ಖರ್ಚು ಮಾಡಿದ ಹಣದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ..!

    ಲಾಸ್​ ವೆಗಾಸ್​ನಲ್ಲಿರುವ ಲಿಂಬ್​ಪ್ಲ್ಯಾಸ್ಟ್ಎಕ್ಸ್ ಸಂಸ್ಥೆಯ ಹಾರ್ವರ್ಡ್​ ಪರಿಣಿತ ಆರ್ಥೋಪೆಡಿಕ್​ ಸರ್ಜನ್​ ಡಾ. ಕೆವಿನ್​ ಡೆಬಿಪರ್ಶದ್​ ಅವರು ಅಲ್ಫೊನ್ಸೋಗೆ ಸರ್ಜರಿ ಮಾಡಿದ್ದಾರೆ. ಸರ್ಜರಿ ಆರಂಭಿಸುವ ಮುಂಚೆ ಮತ್ತು ಈಗಿನ ಫೋಟೋವನ್ನು ಶೇರ್​ ಮಾಡಲಾಗಿದ್ದು, ಅದರಲ್ಲಿ ಎತ್ತರದಲ್ಲಿ ಕೆಲವು ಇಂಚುಗಳ ವ್ಯತ್ಯಾಸ ಕಾಣಬಹುದಾಗಿ. ಕಳೆದ ಆಗಸ್ಟ್​ನಲ್ಲಿ ಸರ್ಜರಿ ಆರಂಭ ಮಾಡಲಾಗಿತ್ತು.

    ಇದನ್ನೂ ಓದಿರಿ: 15ರ ವಿದ್ಯಾರ್ಥಿಗೆ ಬಲೆ ಬೀಸಿದ 35ರ ಶಿಕ್ಷಕಿ: ಸೆಕ್ಸ್​ ಬಳಿಕ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಅಪ್ರಾಪ್ತ!

    ಅಂದಹಾಗೆ ಈ ಸರ್ಜರಿಯೇನೋ ಬಹಳ ಅಗ್ಗವಾಗಿಲ್ಲ. ಸರ್ಜನ್​ ಡಾ. ಕೆವಿನ್​ ಡೆಬಿಪರ್ಶದ್​ ಅವರ ವೆಬ್​ಸೈಟ್​ ಪ್ರಕಾರ ಎಲುಬು ಉದ್ದದ ಪ್ರಕ್ರಿಯೆಗೆ 75 ಸಾವಿರ ಡಾಲರ್​ (55 ಲಕ್ಷ ರೂ.) ನಿಂದ ಆರಂಭವಾಗಿ 84 ಸಾವಿರ ಡಾಲರ್​ವರೆಗೂ ತೆಗೆದುಕೊಳ್ಳುತ್ತದೆ. ಆದರೆ, ಅಲ್ಫೊನ್ಸೋ 55 ಲಕ್ಷ ರೂ. ಅನ್ನು ವ್ಯಯಿಸಿದ್ದಾರೆ.

    ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಈತ ಖರ್ಚು ಮಾಡಿದ ಹಣದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ..!

    ಲಿಂಬ್​ಪ್ಲ್ಯಾಸ್ಟ್ಎಕ್ಸ್ ಕಾಸ್ಮೆಟಿಕ್ ಅಂಗ-ಉದ್ದದ ಕಾರ್ಯವಿಧಾನವು ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸೆಯಾಗಿದ್ದು, ಇದರಲ್ಲಿ ಎಲುಬು (ತೊಡೆಯ ಮೂಳೆ) ಅಥವಾ ಟಿಬಿಯಾ (ಕೆಳಗಿನ ಕಾಲು ಮೂಳೆ) ಉದ್ದವಾಗಿರುತ್ತದೆ. ಈ ಕಾರ್ಯವಿಧಾನದಿಂದ ವ್ಯಕ್ತಿಯ ಎತ್ತರವನ್ನು ಆರು ಇಂಚುಗಳಷ್ಟು ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಡೆಬಿಪರ್ಶದ್ ಹೇಳಿದ್ದಾರೆ.

    ಇದನ್ನೂ ಓದಿರಿ: ಮದ್ವೆಯಾದ ಮೂರೇ ತಿಂಗಳಲ್ಲಿ ಎಸ್​ಐ ಸಾವು: ಬ್ಯೂಟಿ ಹಿಂದೆ ಬಿದ್ದ ಪೊಲೀಸಪ್ಪನ ದುರಂತ ಕತೆ ಇದು!

    5.11 ಇಂಚು ಒಂದು ದೊಡ್ಡ ಎತ್ತರ ಎಂದು ನನಗೆ ತಿಳಿದಿದೆ. ಆದರೆ, ಅನೇಕ ಜನರು ಎತ್ತರವಾಗಲು ಇಷ್ಟಪಡುತ್ತಾರೆ. ಹೀಗಾಗಿ ಅದಕ್ಕಿಂತ ಸ್ವಲ್ಪ ಹೆಚ್ಚಿನದನ್ನು ನಾನು ಬಯಸುತ್ತೇನೆಂದು ಎಂದು ಅಲ್ಫೊನ್ಸೋ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕಾಲೇಜು ಯುವತಿಯ ಬೆತ್ತಲೆ ಫೋಟೋ ಸ್ನೇಹಿತರ ಕೈಯಲ್ಲಿ! ಮುಂದೆ ನಡೆದೇ ಹೋಯ್ತು ಅವಾಂತರ…

    ನನ್ನನ್ನು ತಳ್ಳಿದ್ರು, ಕೂದಲು ಎಳೆದ್ರು, ಎಲ್ಲಾ ಕಡೆ ಮುಟ್ಟಲು ಬಂದ್ರು: ಶಾಸಕಿ ಸೌಮ್ಯರೆಡ್ಡಿ

    ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts