More

    ಜನತಾ ಕರ್ಫ್ಯೂ ಬೆಂಬಲಿಸಿ ಮನೆಯಿಂದ ಹೊರಗೆ ಬಂದು ಚಪ್ಪಾಳೆ ತಟ್ಟಿದ ರಾಜ್ಯದ ನಾಗರಿಕರು

    ಬೆಂಗಳೂರು: ಜನತಾ ಕರ್ಫ್ಯೂ ಬೆಂಬಲಿ ರಾಜ್ಯ ವ್ಯಾಪಿ ನಾಗರಿಕರು ಮನೆಯಿಂದ ಹೊರ ಬಂದು ಚಪ್ಪಾಳೆ ತಟ್ಟಿ ಕರೊನಾ ವಿರುದ್ಧ ಸೆಣೆಸಾಡುತ್ತಿರುವವರಿಗೆ ಧನ್ಯವಾದ ಸಲ್ಲಿಸಿದರು.

    ಕರೊನಾ ತಡೆಗಾಗಿ ಶ್ರಮಿಸುತ್ತಿರುವ ವೈದ್ಯರು, ಸಿಬ್ಬಂದಿ, ಸೈನಿಕರು ಹಾಗೂ ಸರ್ಕಾರಿ ಅಧಿಕಾರಿಗಳನ್ನು  ಗೌರವಿಸಿ ಐದು ನಿಮಿಷ ಚಪ್ಪಾಳೆ ತಟ್ಟಿದರು .

    ಸಿಎಂ ಯಡಿಯೂರಪ್ಪ ಡಾಲರ್ಸ್​ ಕಾಲೋನಿಯಲ್ಲಿರುವ ತಮ್ಮ ಮನೆಯಿಂದ ಕುಟುಂಬ ಸದಸ್ಯರೊಂದಿಗೆ ಹೊರ ಬಂದು ಚಪ್ಪಾಳೆ ತಟ್ಟಿದರು. ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಕೂಡ ಚಪ್ಪಾಳೆ ತಟ್ಟಿದರು. ದೇವೇಗೌಡರು ವಾಸ ಇರುವ ಅಕ್ಕ-ಪಕ್ಕದ ಮನೆಯವರು ಹೊರಗೆ ಬಂದು ಚಪ್ಪಾಳೆ ತಟ್ಟಿದರು. ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ರಾವ್​ ಸೇರಿದಂತೆ ಹಲವು ಗಣ್ಯರು ಚಪ್ಪಾಳೆ ತಟ್ಟಿ ಧನ್ಯವಾದ ಅರ್ಪಿಸಿದರು. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ನಿವಾಸಕ್ಕೆ ಭದ್ರತೆ ಒದಗಿಸಿರುವ ಪೊಲೀಸರು ಕೂಡ ಈ ಕಾರ್ಯಕ್ಕೆ ಕೈಜೋಡಿಸಿದರು.

    ಜಾಗಟೆಯನ್ನು ಬಾರಿಸಿದರು: ಸಾರ್ವಜನಿಕರು ಜಾಗಟೆ ಬಾರಿಸಿ ವೈದ್ಯರಿಗೆ ಗೌರವ ಅರ್ಪಿಸಿದರು. ಸಂಜೆ 5 ಗಂಟೆ ಆಗುತ್ತಲೇ ಮನೆಯಿಂದ ಹೊರಗೆ ಬಂದ ನಾಗರಿಕರು ಜಾಗಟೆ ಬಾರಿಸಿದರು. ಮಕ್ಕಳು ಕೂಡ ಕೈಜೋಡಿಸಿದರು.

    ರಾಯಚೂರು ನಗರದಲ್ಲಿ ವಸತಿ ಗೃಹಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹೊರಗೆ ಬಂದು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು.

    ಸ್ಯಾನಿಟೈಜರ್​ ಬೆಲೆ ಕಡಿಮೆ ಮಾಡಿ ಕರೊನಾ ವೈರಸ್​ ನಿಯಂತ್ರಣಕ್ಕೆ ಕೈಜೋಡಿಸಿದ ಐಟಿಸಿ ಕಂಪನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts