More

    ಲಾಕ್​ಡೌನ್​ 4.0: ಹೊಸ ಮಾರ್ಗಸೂಚಿ ಅನ್ವಯ ದೇಶದಲ್ಲಿ ಈ ಎಲ್ಲವೂ ಬಂದ್​…

    ದೇಶದಲ್ಲಿ ಮೇ 31ರವರೆಗೆ ಲಾಕ್​ಡೌನ್​ ಮುಂದುವರಿಯಲಿದೆ. ಲಾಕ್​ಡೌನ್​4.0ರ ಹೊಸ ಮಾರ್ಗಸೂಚಿಯನ್ನು ಕೇಂದ್ರ ಗೃಹಸಚಿವಾಲಯ ಬಿಡುಗಡೆ ಮಾಡಿದ್ದು ಅವು ಹೀಗಿವೆ.

    1. ನಾಲ್ಕನೇ ಹಂತದ ಲಾಕ್​ಡೌನ್​ನಲ್ಲಿಯೂ ಪ್ರಯಾಣಿಕರಿಗೆ ವಾಯು ಮಾರ್ಗ, ಮೆಟ್ರೋ ಸಂಚಾರ ಇರುವುದಿಲ್ಲ. ವೈದ್ಯಕೀಯ ತುರ್ತು ಸೇರಿ ಮತ್ತಿತರ ಅನಿವಾರ್ಯ ಸಂದರ್ಭಗಳಲ್ಲಿ ಅನುಮತಿ ಪಡೆಯಬೇಕು.

    2.ಶಾಲೆ, ಕಾಲೇಜು ಸೇರಿ ಎಲ್ಲ ರೀತಿಯ ಶಿಕ್ಷಣ ಸಂಸ್ಥೆಗಳೂ ಬಂದ್​ ಇರಲಿವೆ. ಆನ್​ಲೈನ್ ಕಲಿಕೆ ಮುಂದುವರಿಯಲಿದೆ. ಹೋಟೆಲ್​ ರೆಸ್ಟೋರೆಂಟ್​, ಆತಿಥ್ಯ ಸೇವೆಗಳಿಗೆ ಅವಕಾಶ ಇಲ್ಲ. ಆದರೆ ಯಾವುದಾದರೂ ಹೋಟೆಲ್​, ಲಾಡ್ಜ್​ಗಳಲ್ಲಿ ವೈದ್ಯರು, ಪೊಲೀಸ್, ಸರ್ಕಾರಿ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಉಳಿದುಕೊಂಡಿದ್ದರೆ ಅಂಥಹ ಹೋಟೆಲ್​ಗಳಿಗೆ ಮತ್ತು ಕ್ವಾರಂಟೈನ್​ ವ್ಯವಸ್ಥೆ ಕಲ್ಪಿಸಿರುವ ಹೋಟೆಲ್​, ರೆಸ್ಟೋರೆಂಟ್​ಗಳಿಗೆ ವಿನಾಯಿತಿ ನೀಡಲಾಗುವುದು.

    ಹಾಗೇ ಕರೊನಾ ಕರ್ತವ್ಯದಲ್ಲಿರುವ ಆರೋಗ್ಯ ಕಾರ್ಯಕರ್ತರು, ಪೊಲೀಸ್​, ಸರ್ಕಾರಿ ಅಧಿಕಾರಿಗಳಿಗಾಗಿ  ಬಸ್​ ಡಿಪೋಗಳಲ್ಲಿ, ರೈಲ್ವೆ ಸ್ಟೇಶನ್​ಗಳಲ್ಲಿ, ಏರ್​ಪೋರ್ಟ್​ಗಳಲ್ಲಿ ಕ್ಯಾಂಟೀನ್​ ನಡೆಸುತ್ತಿರುವವರು ಕೆಲಸ ಪ್ರಾರಂಭಿಸಬಹುದು. ಆದರೆ ಇಲ್ಲಿ ಯಾವುದೇ ಸಾರ್ವಜನಿಕರಿಗೆ ಅವಕಾಶ ಇಲ್ಲ.  ಹೋಟೆಲ್​, ರೆಸ್ಟೋರೆಂಟ್​ಗಳು ತಿನಿಸು, ಊಟ ತಯಾರಿಸಿ ಪಾರ್ಸಲ್​, ಹೋಂ ಡೆಲೆವರಿ ನೀಡಬಹುದು.

    3. ಎಲ್ಲ ಸಿನಿಮಾ ಹಾಲ್​ಗಳು, ಶಾಪಿಂಗ್​ ಮಾಲ್​ಗಳು, ಜಿಮ್​, ಸ್ವಿಮ್ಮಿಂಗ್​ ಪೂಲ್​, ಮನರಂಜನಾ ಸ್ಥಳಗಳು, ಬಾರ್, ಅಡಿಟೋರಿಯಂ, ಅಸ್ಸೆಂಬ್ಲಿ ಹಾಲ್​ಗಳು ತೆರೆಯುವಂತಿಲ್ಲ. ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣಗಳನ್ನು ತೆರೆಯಲು ಅವಕಾಶ ನೀಡಲಾಗುವುದು. ಆದರೆ ಅಲ್ಲಿ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ.

    ಇದನ್ನೂ ಓದಿ: ದೇಶದಲ್ಲಿ ಮೇ 31ರವರೆಗೂ ಲಾಕ್​ಡೌನ್​…

    4. ಎಲ್ಲರೀತಿಯ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು, ಗುಂಪುಗೂಡುವುದನ್ನು, ದೊಡ್ಡ ಪ್ರಮಾಣದಲ್ಲಿ ಸಭೆ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.

    5. ಹಾಗೇ ದೇಶಾದ್ಯಂತ ಯಾವುದೇ ಧಾರ್ಮಿಕ ಕ್ಷೇತ್ರಗಳಿಗೆ, ಪ್ರದೇಶಗಳಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಅದರಲ್ಲೂ ಧಾರ್ಮಿಕ ಸಭೆಯನ್ನು ನಡೆಸುವುದಕ್ಕೆ ಕಟ್ಟುನಿಟ್ಟಾಗಿ ನಿರ್ಬಂಧ ವಿಧಿಸಲಾಗಿದೆ.

    ಇದನ್ನೂ ಓದಿ: ರಾಜಧಾನಿ ಸ್ಪೆಶಲ್​ ರೈಲುಗಳಿಂದ 5 ದಿನದಲ್ಲಿ ಬಂದ ಆದಾಯದ ವಿವರ ಇಲ್ಲಿದೆ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts