More

    ಮೃತದೇಹಗಳನ್ನು ಸಮಾಧಿಯಿಂದ ಹೊರತೆಗೆದು ಸಂಭ್ರಮಿಸುವ ಜನರು: ಕಾರಣ ಕೇಳಿದ್ರೆ ಅಚ್ಚರಿಗೊಳ್ತಿರಾ!

    ಜಕಾರ್ತ: ಸತ್ತ ವ್ಯಕ್ತಿಗೆ ಅಂತಿಮ ಸಂಸ್ಕಾರ ನೆರವೇರಿಸಿ, ಕೆಲ ವರ್ಷಗಳವರೆಗೆ ಆತನಿಗೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಅನೇಕ ವಿಧಿವಿಧಾನಗಳನ್ನು ನೆರವೇರಿಸುವುದನ್ನು ನೋಡಿದ್ದೇವೆ. ಆದರೆ, ಸತ್ತ ವ್ಯಕ್ತಿಯ ಮೃತದೇಹವನ್ನು ಯಾವುದೇ ಕಾರಣಕ್ಕೂ ಮತ್ತೆ ಸಮಾಧಿಯಿಂದ ಹೊರ ತೆಗೆಯುವುದಿಲ್ಲ. ಏನಾದರೂ ಪೊಲೀಸ್​ ತನಿಖೆಯ ಭಾಗವಾಗಿದ್ದರೆ ಮಾತ್ರ ಆ ಕಾರ್ಯ ಮಾಡಲಾಗುತ್ತದೆ. ಇನ್ನು ಮಂತ್ರವಾದಿಗಳು ಶವಗಳ ಸಮಾಧಿಯಿಂದ ಹೊತ್ತೊಯ್ದಿರುವುದನ್ನು ಕೇಳಿದ್ದೇವೆ.

    ಆದರೆ, ದೂರದ ಇಂಡೋನೇಷ್ಯಾದಲ್ಲಿ ವಿಚಿತ್ರ ಆಚರಣೆಯೊಂದು ನಡೆದುಕೊಂಡು ಬರುತ್ತಿದೆ. ಜಗತ್ತಿನಲ್ಲೇ ಇದೊಂದು ವಿರಳಾತಿವಿರಳ ಘಟನೆ ಎಂದರೆ ತಪ್ಪಾಗಲಾರದು. ಇಲ್ಲಿನ ಜನರು ಮರಣ ಹೊಂದಿದ ತಮ್ಮ ಪ್ರೀತಿ ಪಾತ್ರರ ಮೃತದೇಹವನ್ನು ಗೋರಿಯಿಂದ ಹೊರ ತೆಗೆದು ಶುಚಿಗೊಳಿಸಿ, ಹೊಸ ಉಡುಗೆಯನ್ನು ತೊಡಿಸಿ ಪೂರ್ವಜರ ಆತ್ಮಗಳನ್ನು ಗೌರವಿಸುವ ವಿಚಿತ್ರ ಆಚರಣೆಯನ್ನು ಹಿಂದಿನಿಂದ ನಡೆಸಿಕೊಂಡು ಬರಲಾಗುತ್ತಿದೆ.

    ಇದನ್ನೂ ಓದಿ: ಮಾದಪ್ಪನ ಗೀತೆಗೆ ಅಪಮಾನ: ಚಂದನ್​ ಶೆಟ್ಟಿ ವಿರುದ್ಧ ಸಿಡಿದೆದ್ದ ಚಾಮರಾಜನಗರ ಯುವಕರು!

    ಮೃತದೇಹಗಳನ್ನು ಸಮಾಧಿಯಿಂದ ಹೊರತೆಗೆದು ಸಂಭ್ರಮಿಸುವ ಜನರು: ಕಾರಣ ಕೇಳಿದ್ರೆ ಅಚ್ಚರಿಗೊಳ್ತಿರಾ!

    ಪ್ರತಿ ಆಗಸ್ಟ್​ನಲ್ಲಿ ಈ ವಿಚಿತ್ರ ಆಚರಣೆ ಇಂಡೋನೇಷ್ಯಾದ ಸೌಥ್​ ಸುಲವೆಸಿಯ ನಾರ್ಟ್​ ತೊರಜಾದಲ್ಲಿರುವ ಪಂಗಲಾದಲ್ಲಿ ಕಂಡುಬರುತ್ತದೆ. ಈ ಆಚರಣೆಯನ್ನು ತೊರ್ಜಾ ಸಮುದಾಯ ನಡೆಸಿಕೊಂಡು ಬರುತ್ತಿದೆ. ತಮ್ಮ ಸಂಬಂಧಿಕರ ಅಥವಾ ಪ್ರೀತಿ ಪಾತ್ರರ ಮೃತದೇಹಗಳನ್ನು ಹೊರ ತೆಗೆದು ಶುಚಿಗೊಳಿಸಿ ಅದಕ್ಕೆ ಹೊಸ ಉಡುಗೆ ಮಾತ್ರವಲ್ಲದೆ, ಕೆಲವರು ಅವರಿಷ್ಟದ ಪದಾರ್ಥಗಳನ್ನು ಇಡುತ್ತಾರೆ. ಕೆಲವರು ಮೃತದೇಹದ ಬಾಯಲ್ಲಿ ಸಿಗರೇಟ್ ಇಟ್ಟು ಗೌರವ ಸಲ್ಲಿಸುತ್ತಾರೆ. ​

    ಜೀವನ ಮತ್ತು ಸಾವಿನ ನಡುವಿನ ಸಂಪರ್ಕವು ಎಂದಿಗೂ ಅನಂತ ಎಂದು ನಂಬಿರುವ ತೊರ್ಜಾ ಸಮುದಾಯಕ್ಕೆ ತೋರ್ಜಾ ಸಾವಿನ ಆಚರಣೆಗಳು ಜೀವನದಲ್ಲೇ ಅತಿದೊಡ್ಡ ಆಚರಣೆ ಎಂದು ಪರಿಗಣಿಸಿದ್ದಾರೆ. ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ಇಂಡೋನೇಷ್ಯಾದಲ್ಲಿ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಸಮುದಾಯವು ಸಹ ಬೆರೆತಿದ್ದು, ಈ ಆಚರಣೆ ತೊರ್ಜಾ ಜನರ ಸಂಸ್ಕೃತಿಯಲ್ಲಿ ದೀರ್ಘವಾಗಿ ನೆಲೆಗೊಂಡಿದೆ.

    ಇದನ್ನೂ ಓದಿ: ಜಾಮೀನು ನೀಡಬೇಕಾದರೆ ನನ್ನೊಂದಿಗೆ ಮಲಗು ಎಂದ ಎಸ್​ಐಗೆ ಮಹಿಳೆ ಮಾಡಿದ್ದೇನು?

    ಮೃತದೇಹಗಳನ್ನು ಸಮಾಧಿಯಿಂದ ಹೊರತೆಗೆದು ಸಂಭ್ರಮಿಸುವ ಜನರು: ಕಾರಣ ಕೇಳಿದ್ರೆ ಅಚ್ಚರಿಗೊಳ್ತಿರಾ!

    ಸಾವು ಜೀವನದ ಅತ್ಯಂತ ಮುಖ್ಯವಾದ ಅಂಶವೆಂದು ತೊರ್ಜಾ ಸಮುದಾಯ ಪರಿಗಣಿಸಿದ್ದು, ವರ್ಷಕ್ಕೊಮ್ಮೆ ತಮ್ಮ ಪ್ರೀತಿ ಪಾತ್ರರ ಸಮಾಧಿ ಬಳಿ ಬಂದು ಮೃತದೇಹ ಹೊರತೆಗೆದು ಕೊಳೆಯಬಾರದೆಂದು ಕೆಫಿನ್ ಬದಲಾಯಿಸುವುದರೊಂದಿಗೆ ಮೃತದೇಹವನ್ನು ಶುಚಿಯಾಗಿಸಿ, ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛಗೊಳಿಸಿ ತಮ್ಮ ಆಚರಣೆ ನಡೆಸುತ್ತಾರೆ. ಇದನ್ನು ಎರಡನೇ ಅಂತ್ಯಕ್ರಿಯೆ ಎಂದೇ ಇಲ್ಲಿನ ಜನರು ಭಾವಿಸಿದ್ದಾರೆ. ಆಚರಣೆ ಮುಗಿದ ಬಳಿಕ ಕೆಫಿನ್​ಗೆ ಅಲಂಕಾರ ಮಾಡಿ ತಾವು ತಂದಂತಹ ಉಡುಗೊರೆಗಳನ್ನು ಅದರೊಳಗಿಟ್ಟು ಮತ್ತೆ ಅದನ್ನು ಮುಚ್ಚಿಬಿಡುತ್ತಾರೆ.

    ಇದನ್ನೂ ಓದಿ: ದೇವರ ಕೋಣೆಯಲ್ಲಿತ್ತು ಮಗುವಿನ ಶವ: ತಂದೆ-ತಾಯಿಯಿಂದಲೇ ಕೃತ್ಯ, ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    ತೊರ್ಜಾ ಸಮುದಾಯದ ಜನರು ಸತ್ತ ಜೀವಗಳ ಚೈತನ್ಯವನ್ನು ನಂಬುತ್ತಾರೆ ಮತ್ತು ಅವರು ಜೀವಂತರಾಗಿದ್ದಾರೆ. ನಮ್ಮನ್ನು ಹುಡುಕುತ್ತಿದ್ದಾರೆ. ನಮಗೆ ಆಶೀರ್ವಾದ ಮಾಡುತ್ತಾರೆಂದು ನಂಬಿದ್ದಾರೆ. ಸ್ಥಳೀಯವಾಗಿ ಈ ಆಚರಣೆ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ಬೆಂಬಲವೂ ವ್ಯಕ್ತವಾಗಿದೆ. (ಏಜೆನ್ಸೀಸ್​)

    ಕೈಮುಗಿದ್ರೂ ಬಿಡದೆ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಹಾಕಿ ಕೊಂದು ರೇಪ್​ ಮಾಡಿದ: ಸಿಸಿಟಿವಿಯಲ್ಲಿ ಭೀಕರ ಕೃತ್ಯ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts