More

    ಮನುಕುಲಕ್ಕೆ ಲೇಸು ಬಯಸುವ ಸಂಸ್ಕಾರ ಬೆಳೆಸಿಕೊಳ್ಳಿ

    ವಾಡಿ: ರಾಜಕಾರಣದಲ್ಲಿ ಧರ್ಮ ಇರಲಿ, ಆದರೆ ಧರ್ಮದೊಳಗೆ ರಾಜಕಾರಣ ತರಬೇಡಿ. ಅದು ಮನಸುಗಳ ಮಧ್ಯೆ ಒಡಕು ಸೃಷ್ಟಿಸಿ, ನೆಮ್ಮದಿಯ ಬದುಕಿಗೆ ಕಂಠಕವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

    ಹಲಕರ್ಟಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ರಾಜಶೇಖರ ಸ್ವಾಮಿಗಳ ಪಟ್ಟಾಧಿಕಾರ, ಶ್ರೀ ಸಿದ್ಧೇಶ್ವರ ಧ್ಯಾನದಾಮ ಜಗದ್ಗುರು ಪೀಠಕ್ಕೆ ಸೇರ್ಪಡೆ ಹಾಗೂ ಶ್ರೀ ಸಿದ್ಧೇಶ್ವರ ಮಠವೆಂದು ನಾಮಕಾರಣ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೊಡ್ಡದಾಗಿ ಮಾತನಾಡುವವರು ದೊಡ್ಡವರು ಆಗೋದಿಲ್ಲ. ಭಕ್ತರ ಕಷ್ಟ, ದುಃಖ, ಸಮಾಜದ ಚಿಂತನೆ ಹಾಗೂ ಪರಿವರ್ತನೆಗಾಗಿ ತಮ್ಮ ಜೀವ ತ್ಯಾಗ ಮಾಡಿದವರು ಸಮಾಜದಲ್ಲಿ ದೊಡ್ಡ ಆಸ್ತಿಯಾಗಿ ಉಳಿದುಕೊಳ್ಳುತ್ತಾರೆ. ಧರ್ಮ ರಕ್ಷಣೆ, ಮಾನವ ಕುಲಕ್ಕೆ ಲೇಸು ಭಯಸುವಂತಹ ಸಂಸ್ಕಾರ ನಮ್ಮಲ್ಲಿ ಬರಬೇಕು ಎಂದರು.

    ನAಬಿ ಬಂದ ಭಕ್ತ ಕುಲಕ್ಕೆ ರಂಭಾಪುರಿ ಪೀಠ ಕೈಹಿಡಿದು ಮುನ್ನಡೆಸುವ ಕಾರ್ಯ ಮಾಡುತ್ತಿದೆ. ಆಧ್ಯಾತ್ಮಿಕ ಚಿಂತನೆ ಉಣಬಡಿಸುವ ಹಂಬಲ ತೋರಿರುವ ಶ್ರೀ ರಾಜಶೇಖರ ಸ್ವಾಮಿಗಳು ಉತ್ತಮ ಸಮಾಜಕ್ಕಾಗಿ ತಮ್ಮ ಪ್ರಾಣ ಮುಡುಪಾಗಿಟ್ಟಿದ್ದಾರೆ. ಹಲಕರ್ಟಿ ಸೇರಿ ಸುತ್ತಲಿನ ಭಕ್ತ ವೃಂದ ಶ್ರೀಮಠವನ್ನು ಬಾನತ್ತೆರಕ್ಕೆ ಬೆಳೆಸಬೇಕು ಎಂದು ಹೇಳಿದರು.

    ನೂತನ ಯತಿ ಶ್ರೀ ರಾಜಶೇಖರ ಶಿವಾಚಾರ್ಯರು ಮಾತನಾಡಿ, ಧ್ಯಾನದಾಮವದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಅಸಂಖ್ಯಾತ ಭಕ್ತರಿಗೆ ಕೃತಜ್ಞತೆಗಳು. ಮುಂದಿನ ದಿನಗಳಲ್ಲು ಶ್ರೀಮಠದ ಅಭಿವೃದ್ಧಿಗೆ ಭಕ್ತರು ಎಲ್ಲ ರೀತಿಯಿಂದಲೂ ಸಹಕಾರ ನೀಡಬೇಕು ಎಂದು ಕೋರಿದರು.

    ಶ್ರೀನಿವಾಸ ಸರಡಗಿಯ ಶ್ರೀ ರೇವಣಸಿದ್ಧ ಶಿವಾಚಾರ್ಯರು, ದಿಗ್ಗಾಂವ್‌ದ ಶ್ರೀ ಸಿದ್ಧವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಚಿತ್ತಾಪುರದ ಶ್ರೀ ಸೋಮಶೇಖರ ಶಿವಾಚಾರ್ಯ, ಯರಗೋಳದ ಶ್ರೀ ಸಂಗಮನಾಥ ಪಟ್ಟದ್ದೇವರು, ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ರಾಚೋಟೇಶ್ವರ ಶಿವಾಚಾರ್ಯ, ನಿಡಗುಂದಾದ ಶ್ರೀ ಕರುಣೇಶ್ವರ ಶಿವಾಚಾರ್ಯ, ಮಳಖೇಡದ ಶ್ರೀ ಕಾರ್ತಿಕೇಶ್ವರ ಶಿವಾಚಾರ್ಯ ಇತರರಿದ್ದರು.

    ಭಾರತೀಯ ಸಂಗೀತ ಶಾಲೆ ಮಕ್ಕಳು ಭರತ ನಾಟ್ಯ ಪ್ರಸ್ತುತ ಪಡಿಸಿದರು. ಆಕಾಶವಾಣಿ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು. ಡಾ.ನಾಗರಾಜ ಬಡಿಗೇರ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts