More

    ಎಲ್ಲಿಗೆ ಬಂತಪ್ಪಾ ಪೊಲೀಸರ ಸ್ಥಿತಿ! ಹತ್ತಿ ಕಟಾವಿಗೂ ಕೊಡಬೇಕು ರಕ್ಷಣೆ!

    ರಾಯಚೂರು: ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾದುದು. ಸಾರ್ವಜನಿಕವಾಗಿ ಎಷ್ಟೇ ಟೀಕೆ ವ್ಯಕ್ತಪಡಿಸಿದರೂ, ಪೊಲೀಸರಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವಿವಿಧ ಸಂದರ್ಭಗಳಲ್ಲಿ ಸೂಕ್ತ ಬಂದೋಬಸ್ತ್​​ ಮಾಡಿ, ಭದ್ರತೆ ಒದಗಿಸುವ ಕೆಲಸ ಮಾಡುತ್ತಾರೆ.

    ಗಣ್ಯ ವ್ಯಕ್ತಿಗಳ ಭೇಟಿ, ಸಮಾವೇಶ, ಗಲಭೆ ಮುಂತಾದ ಸಂದರ್ಭದಲ್ಲಿ ಅಗತ್ಯಕ್ಕನುಗುಣವಾಗಿ ಅಗತ್ಯವಿದ್ದಾಗ ಸೂಕ್ತ ಭದ್ರತೆ ಪೊಲೀಸ್ ಇಲಾಖೆಯಿಂದ ಲಭಿಸುತ್ತದೆ. ಆದರೆ ಇದೀಗ ರಾಯಚೂರಿ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರೊಬ್ಬರು ವಿಶೇಷ ಬಂದೋಬಸ್ತ್​​ ವ್ಯವಸ್ಥೆ ಮಾಡಿ ಸುದ್ದಿಯಾಗಿದ್ದಾರೆ.

    ಎಲ್ಲಿಗೆ ಬಂತಪ್ಪಾ ಪೊಲೀಸರ ಸ್ಥಿತಿ! ಹತ್ತಿ ಕಟಾವಿಗೂ ಕೊಡಬೇಕು ರಕ್ಷಣೆ!

    ದೇವದುರ್ಗ ವ್ಯಾಪ್ತಿಯಲ್ಲಿನ ರೈತರು ತಮ್ಮ ಜಮೀನಿನಲ್ಲಿ ಹತ್ತಿ ಬೆಳೆಯನ್ನು ಕಟಾವು ಮಾಡುವಾಗ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ರೈತರಿಗೆ ಬಂದೋಬಸ್ತ್ ಮೂಲಕ ಭದ್ರತೆ ನೀಡಬೇಕೆಂದು ದೇವದುರ್ಗ ಜೆಎಂಎಫ್​ಸಿ ನ್ಯಾಯಾಲಯ ಆದೇಶ ನೀಡಿದೆ.

    1 ಎಕರೆ 26 ಗುಂಟೆ ಹಾಗೂ 1 ಎಕರೆ 14 ಗುಂಟೆ ಇರುವ ಎರಡು ಜಮೀನುಗಳಲ್ಲಿ ರೈತರು ಹತ್ತಿ ಕೃಷಿ ಮಾಡಿದ್ದಾರೆ. ಬೆಳೆ ಸಮೃದ್ಧವಾಗಿ ಬೆಳೆದು ಕೊಯ್ಲಿಗೆ ಬಂದಿದೆ. ಹೀಗಾಗಿ ಮುಂದಿನ 5 ದಿನಗಳ ಕಾಲ ನಡೆಯುವ ಕಟಾವಿನ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ನೀಡಬೇಕು ಎಂದು ದೇವದುರ್ಗ ಪೊಲೀಸ್ ಠಾಣಾಧಿಕಾರಿಗೆ ನೋಟೀಸ್ ಜಾರಿಯಾಗಿದೆ.

    ಪೊಲೀಸ್ ಭದ್ರತೆ ಒದಗಿಸಲಾದ ಈ ಜಮೀನು ಶರಣಗೌಡ ಕೊಪ್ಪರ ಎಂಬುವವರ ಹಿರಿಯರು ಖರೀದಿಸಿದ ಆಸ್ತಿ. ಇದರ ಮೇಲೆ ಸಿವಿಲ್ ವ್ಯಾಜ್ಯದ ಪ್ರಕರಣ ದಾಖಲಾಗಿತ್ತು. ಹೀಗಿದ್ದಾಗ ಯಾರೋ ಬಂದು ಜಮೀನು ತಮ್ಮದೆಂದು ಹೇಳಿ ಸಮಸ್ಯೆ ಮಾಡಿದ್ದರು. ಬಿತ್ತಿದ ಹೊಲದ ಹತ್ತಿ ಕಟಾವು ಮಾಡಲೂ ಅವರು ಬಿಡಲಿಲ್ಲ. ಆಗ ಹತ್ತಿ ಬೆಳೆದವರು ಕೋರ್ಟ್​ ಮೊರೆ ಹೋಗಿದ್ದರು. ಇದೀಗ ಕೋರ್ಟ್‌ನಿಂದ ಆದೇಶ‌ ತಂದು, ಪೊಲೀಸ್ ರಕ್ಷಣೆಯಲ್ಲಿ ಹತ್ತಿ ಕಟಾವು ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts